ಪ್ರವೀಣ್ ಕೊಲೆಯ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ: ಎಡಿಜಿಪಿ ಅಲೋಕ್​ ಕುಮಾರ್ ಸುದ್ದಿಗೋಷ್ಠಿ​

ಪ್ರವೀಣ್ ಕೊಲೆಯ ಪ್ರಮುಖ ಆರೋಪಿಗಳನ್ನು ಬೆಳಗ್ಗೆ 7 ಗಂಟೆಗೆ ತಲಪಾಡಿ ಚೆಕ್​ಪೋಸ್ಟ್ ಬಳಿ ಬಂಧಿಸಿದ್ದೇವೆ ಎಂದು ನಗರದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್​ ಕುಮಾರ್ ಸುದ್ದಿಗೋಷ್ಠಿ​ಯಲ್ಲಿ ಹೇಳಿದರು.

ಪ್ರವೀಣ್ ಕೊಲೆಯ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ: ಎಡಿಜಿಪಿ ಅಲೋಕ್​ ಕುಮಾರ್ ಸುದ್ದಿಗೋಷ್ಠಿ​
ಎಡಿಜಿಪಿ ಅಲೋಕ್​ ಕುಮಾರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 11, 2022 | 3:09 PM

ಮಂಗಳೂರು: ಪ್ರವೀಣ್ ಕೊಲೆಯ  (Praveen Nettar)  ಪ್ರಮುಖ ಆರೋಪಿಗಳನ್ನು ಬೆಳಗ್ಗೆ 7 ಗಂಟೆಗೆ ತಲಪಾಡಿ ಚೆಕ್​ಪೋಸ್ಟ್ ಬಳಿ ಬಂಧಿಸಿದ್ದೇವೆ ಎಂದು ನಗರದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್​ ಕುಮಾರ್ ಸುದ್ದಿಗೋಷ್ಠಿ​ಯಲ್ಲಿ ಹೇಳಿದರು. ಆರೋಪಿಗಳಿಗೆ ಆಶ್ರಯ ನೀಡಿದ್ದವರನ್ನು ವಿಚಾರಣೆ ನಡೆಸುತ್ತೇವೆ. ಆರೋಪಿಗಳು ಯಾವ ಕಾರಣಕ್ಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆಂದು ಕೂಲಂಕಷವಾಗಿ ವಿಚಾರಣೆ ನಡೆಸುತ್ತೇವೆ. ಬಂಧಿತ ಶಿಯಾಬುದ್ದೀನ್ ಅಲಿಯಾಸ್ ಶಿಯಾಬ್ ಸುಳ್ಯ ನಿವಾಸಿ. ಪ್ರವೀಣ್ ಹತ್ಯೆಗೆ 4 ಬೈಕ್, 1 ಕಾರನ್ನು ಆರೋಪಿಗಳು ಬಳಕೆ ಮಾಡಿದ್ದಾರೆ ಎಂದು ಹೇಳಿದರು. ಎನ್​ಐಎ ಕೂಡ ನಮ್ಮ ಜೊತೆಗೆ ಇದೆ. ನಮ್ಮ ತನಿಖೆ ಮುಗಿಸಿ ಎನ್​ಐಗೆ ಕೊಡುತ್ತೇವೆ. ರಿಯಾಜ್ ಅಂಕತ್ತಡ್ಕ(27), ಸುಳ್ಯದ ಅಂಕತ್ತಡ್ಕ ನಿವಾಸಿ. ಈತ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಬಶೀರ್(23) ಸುಳ್ಯದ ಎಲಿಮಲೆ‌ ನಿವಾಸಿ, ಈತ ಹೊಟೇಲ್​ನಲ್ಲಿ ಕೆಲಸ ಮಾಡುತ್ತಾನೆ. ಬಹಳ ಒತ್ತಡದ ಮಧ್ಯೆ ನಮ್ಮ ತಂಡ ಆರೋಪಿಗಳನ್ನ ಪತ್ತೆ ಮಾಡಿದೆ. ಈ ತಂಡಕ್ಕೆ ಸಿಎಂ, ಗೃಹ ಸಚಿವರು, ಡಿಜಿ ಶ್ಲಾಘಿಸಿದ್ದು, ರಿವಾರ್ಡ್ ನೀಡಿದ್ದಾರೆ ಎಂದರು.

ಪಿಎಫ್​ಐ ಮತ್ತು ಎಸ್​ಡಿಪಿಐ ಲಿಂಕ್:

ಆರೋಪಿಗಳಿಗೆ ಪಿಎಫ್​ಐ ಮತ್ತು ಎಸ್​ಡಿಪಿಐ ಲಿಂಕ್ ಇದೆ, ಅವರ ಕೈವಾಡ ಇದೆ. ಇದಕ್ಕೆ ಸಂಬಂಧಿಸಿ ನಮಗೆ ಬಹಳಷ್ಟು ಸಾಕ್ಷ್ಯ ಲಭ್ಯವಾಗಿದೆ. ಚಾರ್ಜ್ ಶೀಟ್​ನಲ್ಲಿ ತನಿಖೆ ಬಳಿಕ ಅವುಗಳನ್ನು ಸೇರಿಸ್ತೇವೆ. ಶಫೀಕ್ ತಂದೆ ಇಬ್ರಾಹಿಂ ಪ್ರವೀಣ್ ಕೋಳಿ ಅಂಗಡಿಯಲ್ಲೇ ಕೆಲಸ ಮಾಡುತಿದ್ದರು‌. ಶಫೀಕ್ ನನ್ನ ನಾವು ಮೊದಲೇ ಬಂಧಿಸಿ ವಿಚಾರಣೆ ಮಾಡಿದ್ದೇವೆ. ಶಫೀಕ್​ಗೆ ಹಾಗಾಗಿ ಪ್ರವೀಣ್ ಬಗ್ಗೆ ಚೆನ್ನಾಗಿ ಗೊತ್ತಿತ್ತು‌. ಸುಳ್ಯ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಆರೋಪಿಗಳನ್ನ ತಲಪಾಡಿ ಬಳಿ ಬಂಧಿಸಿದೆ. ಆರೋಪಿಗಳು ಕೊಲೆ ಮಾಡಿ ಮೊದಲು ಕಾರಗೋಡಿನ ಮಾಲಿಕ್ ದಿವಾರ್ ಮಸೀದಿಗೆ ಹೋಗಿದ್ದರು. ಅಲ್ಲಿಂದ ಅವರು ಬೇರೆ ಬೇರೆ ಕಡೆ ಹೋಗಿದ್ದು, ಹಲವರು ನೆರವು ನೀಡದ್ದಾರೆ.

ಇದನ್ನೂ ಓದಿ: Praveen Nettar: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ

ಶಫೀಕ್​ನ ಪಾರ್ಟ್ ಗೊತ್ತಾಗಿದೆ, ಉಳಿದವರ ಬಗ್ಗೆ ಸಮಗ್ರ ತನಿಖೆ ಮಾಡ್ತೇವೆ. ಎರಡು ದ್ವಿಚಕ್ರ ವಾಹನ ಮತ್ತು ಕಾರು ಸೇರಿ ಒಟ್ಟು ಆರು ವಾಹನ ಬಳಕೆ ಆಗಿದೆ. ಆಶ್ರಯ ಕೊಟ್ಟವರು ಮತ್ತು ನೆರವು ಕೊಟ್ಟ ಎಲ್ಲರ ಮಾಹಿತಿ ಇದೆ. ಮೂರ್ನಾಲ್ಕು ದಿನದ ಬಳಿಕ ನಾವು ಎನ್​ಐಎಗೆ ಕೊಡುತ್ತೇವೆ. ನಿನ್ನೆ ಆಸ್ತಿಮುಟ್ಟುಗೋಲಿನ ಎಚ್ಚರಿಕೆ ಕೊಡಲಾಗಿತ್ತು. ಈಗ ಅವರ ಬಂಧನ ಆಗಿದೆ, ಹಾಗಾಗಿ ಅವರ ಕ್ರಿಮಿನಲ್ ರೆಕಾರ್ಡ್ ‌ನೋಡಿ ಕಾನೂನು ಪ್ರಕಾರ ಕ್ರಮ. ಸದ್ಯ ಮೂವರು ಆರೋಪಿಗಳ ಮಹಜರು ಹಾಗೂ ಎಲ್ಲ ಮುಗಿಸಿ ಎನ್​ಐಗೆ ಕೊಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಯುವ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ; ಎಡಿಜಿಪಿ ಅಲೋಕ್ ಕುಮಾರ್

ಕೇರಳದಲ್ಲಿ ಮೂವರ ಬಂಧನ:

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಮೂವರು ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ. ಶಿಯಾಬ್, ರಿಯಾಜ್ ಮತ್ತು ಬಶೀರ್ ಬಂಧಿತ ಆರೋಪಿಗಳು. ಕೇರಳದಲ್ಲಿ ಬಂಧಿಸಿರುವ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಗೌಪ್ಯ ಸ್ಥಳದಲ್ಲಿರಿಸಿ ಮೂವರು ಆರೋಪಿಗಳ ತೀವ್ರ ವಿಚಾರಣೆ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ಪ್ರವೀಣ್ ನೆಟ್ಟಾರು ಹತ್ಯೆಗೈದಿದ್ದ ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದರು ಎನ್ನಲಾಗಿತ್ತು. ಈ ಕುರಿತು ಮಂಗಳೂರಿನಲ್ಲಿ ಮಧ್ಯಾಹ್ನ 12 ಗಂಟೆಗೆ ಪೊಲೀಸರಿಂದ ಸುದ್ದಿಗೋಷ್ಠಿ ನಡೆಯಲಿದ್ದು, ಪ್ರವೀಣ್ ಹತ್ಯೆಗೈದಿದ್ದ ಪ್ರಮುಖ ಆರೋಪಿಗಳ ಬಂಧನ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:53 pm, Thu, 11 August 22