ಅಬ್ಬಾ! ಎಂಥಾ ಐಡಿಯಾ: ಕಡಿಮೆ ಅಂಕ ನೀಡಿದರು ಅಂತಾ ಶಿಕ್ಷಕಿಯ ವಾಟರ್ ಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು! ಮುಂದೇನಾಯ್ತು?

ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಬ್ಬಾ! ಎಂಥಾ ಐಡಿಯಾ: ಕಡಿಮೆ ಅಂಕ ನೀಡಿದರು ಅಂತಾ ಶಿಕ್ಷಕಿಯ ವಾಟರ್ ಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು! ಮುಂದೇನಾಯ್ತು?
ಗಣಿತದ ಲೆಕ್ಕಾಚಾರದಲ್ಲಿ ಪೊರಪಾಟು ಬಿದ್ದ ಶಿಕ್ಷಕಿಗೆ ಇದೆಂಥಾ ಶಿಕ್ಷೆ!?
Edited By: ಸಾಧು ಶ್ರೀನಾಥ್​

Updated on: Oct 06, 2023 | 8:07 PM

ಮಂಗಳೂರು, ಅಕ್ಟೋಬರ್​ 6: ಅಬ್ಬಬ್ಬಾ! ಇಂಥಾ ಐಡಿಯಾ ಯಾರಿಗೂ ಬಾರದಿರಲಿ. ಅಷ್ಟಕ್ಕೂ ಇಂತಾ ಅಬೋಧ ಮಕ್ಕಳಿಗೆ ಇದನ್ನು ಯಾರು ಬೋಧಿಸಿದರೋ!? ಅಲ್ಲ ಕಡಿಮೆ ಅಂಕ ನೀಡಿದರೂ ಅಂತಾ ಶಿಕ್ಷಕಿಯೊಬ್ಬರ ನೀರಿನ ಬಾಟಲಿಗೆ (ಕಡಿಮೆ ಅಂಕ ಪಡೆದ) ವಿದ್ಯಾರ್ಥಿನಿಯರು ಮಾತ್ರೆ ಹಾಕಿದ್ದಾರೆ. ಮಂಗಳೂರಿನ ಉಳ್ಳಾಲದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮುಂದೇನಾಯ್ತು ಅನ್ನೋದೇ ಇಂಟರೆಸ್ಟಿಂಗ್, ಒಂದಷ್ಟು ಆತಂಕಕಾರಿಯೂ ಹೌದು. ಇದಕ್ಕೆ ಅಳಬೇಕೋ/ ನಗಬೇಕೋ ಎಂಬುದೂ ಗೊತ್ತಾಗೋಲ್ಲ.

ಗಣಿತದ ಲೆಕ್ಕಾಚಾರದಲ್ಲಿ ಪೊರಪಾಟು ಬಿದ್ದ ಶಿಕ್ಷಕಿಗೆ ಇದೆಂಥಾ ಶಿಕ್ಷೆ!?

ಗಣಿತ ವಿಷಯದಲ್ಲಿ ಒಂದೇ ಒಂದು ಅಂಕ ಕಡಿಮೆ ಕೊಟ್ಟಿದ್ದರು ಆ ಶಿಕ್ಷಕಿ. ಅದಕ್ಕೆ ಆ ಇಬ್ಬರು ವಿದ್ಯಾರ್ಥಿನಿಯರು ಇಂಥಾ ಶಿಕ್ಷೆ ಕೊಟ್ಟಿದ್ದಾರೆ ನೋಡಿ. ಇಲ್ಲಿ ಶಿಕ್ಷಕಿಯೇ ಪೊರಪಾಟು ಬಿದ್ದು, ಆ ಇಬ್ಬರು ವಿದ್ಯಾರ್ಥಿನಿಯರೂ ಉತ್ತರ ಸರಿಯಾಗಿಯೇ ಬರೆದಿದ್ದರೂ ಮಾರ್ಕ್ಸ್ ನೀಡಿಲ್ಲ. ಇದು ಆ ಇಬ್ಬರ ಕೋಪಕ್ಕೆ ಕಾರಣವಾಗಿಬಿಟ್ಟಿದೆ. ಹಾಗಾಗಿ ಅವಧಿ ಮೀರಿದ ಎಕ್ಸ್​​ಪೈರ್​​ ಆಗಿರುವ ಯಾವುದೋ ಮಾತ್ರೆಗಳನ್ನು ತಂದು ಆ ಶಿಕ್ಷಕಿಯ ವಾಟರ್​ ಬಾಟಲಿಗೆ ಹಾಕಿದ್ದಾರೆ ಆ ಇಬ್ಬರು ವಿದ್ಯಾರ್ಥಿನಿಯರು!

ಇದನ್ನೂ ಓದಿ: ಆ ಶಾಲೆಯ ವಿದ್ಯಾರ್ಥಿನಿಯರಿಗೆ ವಿಚಿತ್ರ ಕಾಯಿಲೆ.. ನೂರಾರು ಹೆಣ್ಣುಮಕ್ಕಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ, ವೈರಲ್​ ಆಗುತ್ತಿದೆ ಆ ವಿಡಿಯೋ

ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Fri, 6 October 23

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us