ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಆರೋಪ

ದರ್ಶನ್​ ಈ ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡಾಗಿನಿಂದ ಅವರು ಅಭಿಮಾನಿಗಳು ಅವರ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ನಾವು ನಿನ್ನ ಪರವಾಗಿದ್ದೇವೆ ಬಾಸ್​ ಎಂದೆಲ್ಲಾ ಹೇಳುತ್ತಿದ್ದಾರೆ. ಅವರ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೇ ದರ್ಶನ್​ ಅವರಂತೆಯೇ ಅವರ ಅಭಿಮಾನಿಗಳು ಕೂಡ ಒರಟು ಸ್ವಭಾವದವರು ಎನ್ನಲಾಗುತ್ತಿದೆ. ಆದರೆ ಇದೇ ಕೆಲ ದರ್ಶನ್ ಅಭಿಮಾನಿಗಳು ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವುದಾಗಿ ವರದಿ ಆಗಿದೆ.

ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಆರೋಪ
ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ದರ್ಶನ್ ಸೆಲೆಬ್ರಿಟಿಗಳಿಂದ ಹಲ್ಲೆ ಆರೋಪ
Follow us
|

Updated on:Jun 16, 2024 | 7:46 PM

ಬೆಂಗಳೂರು, ಜೂನ್​ 16: ಚಿತ್ರದುರ್ಗದ ದರ್ಶನ್ (Darshan) ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್​ ಗ್ಯಾಂಗ್​ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾರೆ. ನಿನ್ನೆ ಕಸ್ಟಡಿ ಅಂತ್ಯವಾಗಿದ್ದ ಕಾರಣಕ್ಕೆ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಬಳಿಕ ದರ್ಶನ್‌ ಸೇರಿದಂತೆ 13 ಆರೋಪಿಗಳನ್ನ ಜೂನ್‌ 20 ರವರೆಗೆ ಅಂದ್ರೆ ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಇದೆಲ್ಲದರ ಮಧ್ಯೆ ಈ ಪ್ರಕರಣವನ್ನು ವರದಿ ಮಾಡಲು ಹೋಗಿದ್ದ ಓರ್ವ ಪತ್ರಕರ್ತನಿಗೆ ದರ್ಶನ್​ ಅಭಿಮಾನಿಗಳು ಹಲ್ಲೆ ಮಾಡಿರುವುದಾಗಿ ವರದಿ ಆಗಿದೆ.

ದರ್ಶನ್​ ಈ ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡಾಗಿನಿಂದ ಅವರು ಅಭಿಮಾನಿಗಳು ಅವರ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ನಾವು ನಿನ್ನ ಪರವಾಗಿದ್ದೇವೆ ಬಾಸ್​ ಎಂದೆಲ್ಲಾ ಹೇಳುತ್ತಿದ್ದಾರೆ. ಅವರ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೇ ದರ್ಶನ್​ ಅವರಂತೆಯೇ ಅವರ ಅಭಿಮಾನಿಗಳು ಕೂಡ ಒರಟು ಸ್ವಭಾವದವರು ಎನ್ನಲಾಗುತ್ತಿದೆ. ಆದರೆ ಇದೇ ಒರಟು ಸ್ವಭಾವದ ಕೆಲ ದರ್ಶನ್ ಅಭಿಮಾನಿಗಳು ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಶನಿವಾರ ಸಂಜೆ 5.30 ರ ಸುಮಾರಿಗೆ ನಗರದ ನೃಪತುಂಗ ರಸ್ತೆಯಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿನ್ನೆ ದರ್ಶನ್​ ಅವರನ್ನು ಹಾಜರು ಪಡಿಸಲಾಗಿತ್ತು. ಈ ವೇಳೆ ಪ್ರಕರಣ ವರದಿ ಮಾಡಲು ತೆರಳಿದ್ದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಾರ ರಕ್ಷಿತ್ ಗೌಡ ಟಿಟಿ (23) ಅವರ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳಿಂದ ಹಲ್ಲೆ ಮಾಡಿ ಮೊಬೈಲ್ ಫೋನ್ ಅನ್ನು ದೋಚಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ‘ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’: ದರ್ಶನ್​ ಕೇಸ್​ಗೆ ಸುದೀಪ್​ ಪ್ರತಿಕ್ರಿಯೆ

ದರ್ಶನ್​ ವಿಚಾರಣೆ ಪ್ರಾರಂಭವಾದಾಗ ಅಲ್ಲೇ ನಿಂತಿದ್ದ ವರದಿಗಾರ ರಕ್ಷಿತ್ ಗೌಡ ಟಿಟಿ ಅವರನ್ನು ನಾಲ್ಕು ಅಪರಿಚಿತ ವ್ಯಕ್ತಿಗಳು ಅವರ ಬಳಿಗೆ ಬಂದು ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ತಾನು ಮಾಧ್ಯಮದವನು ಎಂದು ಉತ್ತರಿಸಿದಾಗ, ಅವರು ತಕ್ಷಣ ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ. ನಂತರ ಸುಮಾರು 50 ಮೀಟರ್ ಎಳೆದುಕೊಂಡು ಹೋದರು ಎಂದು ಆರೋಪಿಸಲಾಗಿದೆ. ಪತ್ರಕರ್ತನನ್ನು ಬಾಯಿಗೆ ಬಂದಂತೆ ನಿಂದಿಸಿದ್ದು, ಅಲ್ಲಿಂದ ಹೋಗುವಂತೆ ಹೇಳಿದ್ದಾರೆ. ಜೊತೆಗೆ ಮತ್ತೆ ಕಾಣಿಸಿಕೊಂಡರೆ “ಭೀಕರ ಪರಿಣಾಮ” ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?

ಪತ್ರಕರ್ತನಿಗೆ ಮೂಗಿಗೆ ಏಟಾಗಿದ್ದು, ರಕ್ತಸ್ರಾವವಾಗಿದ್ದರೂ, ನ್ಯಾಯಾಲಯದ ಸಂಕೀರ್ಣದಿಂದ ಹೊರಬಂದು ನೇರವಾಗಿ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಲು ಹೋಗಿದ್ದಾರೆ. ದರ್ಶನ್ ಅವರ ನ್ಯಾಯಾಲಯದ ವಿಚಾರಣೆಗೆ ನಿಯೋಜನೆಗೊಂಡಿದ್ದ ಕೆಲವು ಪೊಲೀಸರು ಅವರ ಸಹಾಯ ಕೇಳಿದಾಗಲೂ ಮೂಕ ಪ್ರೇಕ್ಷಕರಂತೆ ನಿಂತಿದ್ದರು ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:44 pm, Sun, 16 June 24

ತಾಜಾ ಸುದ್ದಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..