AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಪತ್ನಿಯ ಇನ್​ಸ್ಟಾಗ್ರಾಂ ಮತ್ತೆ ಸಕ್ರಿಯ, ಶೀಘ್ರವೇ ಮಾಧ್ಯಮದ ಮುಂದೆ?

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾದ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್​ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ್ದರು. ಆದರೆ ಈಗ ಮತ್ತೆ ತಮ್ಮ ಇನ್​ಸ್ಟಾ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ.

ದರ್ಶನ್ ಪತ್ನಿಯ ಇನ್​ಸ್ಟಾಗ್ರಾಂ ಮತ್ತೆ ಸಕ್ರಿಯ, ಶೀಘ್ರವೇ ಮಾಧ್ಯಮದ ಮುಂದೆ?
ವಿಜಯಲಕ್ಷ್ಮಿ ದರ್ಶನ್
ಮಂಜುನಾಥ ಸಿ.
|

Updated on: Jun 16, 2024 | 3:04 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ ಇನ್ನೂ ಹದಿನೈದು ಮಂದಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದರ್ಶನ್, ಕೊಲೆ ಪ್ರಕರಣದಲ್ಲಿ ಜೈಲು ಸೇರುತ್ತಿದ್ದಂತೆ ಅವರ ಆಪ್ತರು, ಕುಟುಂಬದವರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ದರ್ಶನ್​ರ ಸಹೋದರ ಆಗಲಿ, ತಾಯಿಯಾಗಲಿ ಠಾಣೆಗೆ ಭೇಟಿ ನೀಡಿಲ್ಲ. ಇನ್ನು ಪತ್ನಿ ವಿಜಯಲಕ್ಷ್ಮಿ ದರ್ಶನ್ ಬಂಧನ ಆದ ದಿನವೇ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ್ದರು. ಆದರೆ ಈಗ ಮತ್ತೆ ಸಕ್ರಿಯಗೊಳಿಸಿದ್ದಾರೆ.

ವಿಜಯಲಕ್ಷ್ಮಿ ಅವರು ತಮ್ಮ ಹಳೆ ಖಾತೆಯನ್ನೇ ಮತ್ತೆ ಸಕ್ರಿಯಗೊಳಿಸಿದ್ದಾರೆ. ಆದರೆ ತಾವು ಮಾಡಿದ್ದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದವರನ್ನು ಸಹ ಅನ್​ಫಾಲೋ ಮಾಡಿದ್ದಾರೆ. ಮತ್ತೆ ಸಕ್ರಿಯಗೊಳಿಸದಮೇಲೆ ಹಳೆಯ ಹೆಸರನ್ನೇ ಮುಂದುವರೆಸಿದ್ದಾರೆ. ಖಾತೆ ಹೆಸರು ‘ವಿಜಿ ದರ್ಶನ್’ ಎಂದೇ ಇದೆ. ಬಯೋನಲ್ಲಿ ವಿಜಯಲಕ್ಷ್ಮಿ ದರ್ಶನ್ ಎಂದಿದೆ. ಆದರೆ ಪ್ರೊಫೈಲ್ ಚಿತ್ರ, ಮಾಡಲಾಗಿದ್ದ ಪೋಸ್ಟ್​ಗಳೆಲ್ಲವನ್ನೂ ಸಹ ವಿಜಯಲಕ್ಷ್ಮಿ ಡಿಲೀಟ್ ಮಾಡಿದ್ದಾರೆ.

ದರ್ಶನ್ ಅವರ ಜಾಮೀನಿನಾಗಿ ಅವರ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿರುವ ವಕೀಲರಾದ ರಂಗನಾಥ ರೆಡ್ಡಿ ಮತ್ತು ಅನಿಲ್ ಬಾಬು ಅವರನ್ನು ವಿಜಯಲಕ್ಷ್ಮಿ ಅವರೇ ನೇಮಿಸಿದ್ದು, ಈ ವಕೀಲರು ವಕಾಲತ್ತು ವಹಿಸಿರುವುದು ಸಹ ವಿಜಯಲಕ್ಷ್ಮಿ ಮತ್ತು ಅವರ ತಂದೆ-ತಾಯಿಯ ಮೂಲಕವೇ.

ವಿಜಯಲಕ್ಷ್ಮಿ ಅವರಿಂದ ನೇಮಿಸಲ್ಪಟ್ಟಿರುವ ವಕೀಲ ಅನಿಲ್ ಬಾಬು ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ಪೊಲೀಸ್ ಆಯುಕ್ತರು ಹಾಗೂ ಕೆಲವು ಮಾಧ್ಯಮಗಳು, ಪವಿತ್ರಾ ಗೌಡ ಅವರನ್ನು ದರ್ಶನ್​ರ ಪತ್ನಿ ಎಂದು ಹೇಳುತ್ತಿರುವುದು ವಿಜಯಲಕ್ಷ್ಮಿ ಅವರಿಗೆ ತೀವ್ರ ಬೇಸರ ತಂದಿದೆ. ವಿಜಯಲಕ್ಷ್ಮಿ ಅವರೊಬ್ಬರೇ ದರ್ಶನ್​ರ ಏಕೈಕ ಕಾನೂನುದಬದ್ಧ ಪತ್ನಿ, ಪವಿತ್ರಾ ಗೌಡ ಅಲ್ಲ, ಮಾಧ್ಯಮಗಳು ಪವಿತ್ರಾ ಅವರನ್ನು ದರ್ಶನ್​ರ ಪತ್ನಿ ಎಂದು ಸಂಭೋದಿಸಬಾರದು’ ಎಂದಿದ್ದರು.

ಇದನ್ನೂ ಓದಿ:ಅಪ್ಪ ನೀವೇ ನನ್ನ ಹೀರೋ;  ಫಾದರ್ಸ್ ಡೇ ಗೆ ದರ್ಶನ್​​ ಪುತ್ರನ ಭಾವುಕ ಪೋಸ್ಟ್​!

ಅದೇ ದಿನ ಮಾತನಾಡಿದ್ದ ವಕೀಲ ಅನಿಲ್ ಬಾಬು, ‘ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಸದ್ಯಕ್ಕೆ ಅವರಿಗೆ ಸಮಯದ ಅಗತ್ಯವಿದೆ. ಆದಷ್ಟು ಬೇಗ ಅವರು ಎಲ್ಲರ ಮುಂದೆ ಬರಲಿದ್ದಾರೆ ಎಂದಿದ್ದರು. ಆ ಮೂಲಕ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಮುಂದೆ ಬರುತ್ತಾರೆಯೇ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತಾರೆಯೇ ಎಂಬ ಕುತೂಹಲ ಏರ್ಪಟ್ಟಿತ್ತು. ಇದೀಗ ಸಾಮಾಜಿಕ ಜಾಲತಾಣವನ್ನು ಮತ್ತೆ ಸಕ್ರಿಯಗೊಳಿಸುವ ಮೂಲಕ ವಿಜಯಲಕ್ಷ್ಮಿ ಅವರು ದರ್ಶನ್ ಪ್ರಕರಣದ ವಿಜಯಲಕ್ಷ್ಮಿ ಪ್ರತಿಕ್ರಿಯೆ ನೀಡುವ ಸಾಧ್ಯತೆ ಹೆಚ್ಚಿಸಿದೆ.

ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರು ಪ್ರೀತಿಸಿ 2003 ರಲ್ಲಿ ವಿವಾಹವಾದರು. ಇವರಿಗೆ ಒಬ್ಬ ಮಗನಿದ್ದಾನೆ. ಈ ಹಿಂದೆ 2011 ರಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ವಿಜಯಲಕ್ಷ್ಮಿಯ ಮುಖ, ಕೈಗೆ ತೀವ್ರ ಪೆಟ್ಟಾಗಿತ್ತು. ಆಗ ವಿಜಯಲಕ್ಷ್ಮಿ ಅವರೇ ದೂರು ಹಿಂಪಡೆದು ನ್ಯಾಯಾಲಯದ ಹೊರಗೆ ಸಂಧಾನ ಮಾಡಿಕೊಂಡು ಸಂಸಾರ ಮುಂದುವರೆಸಿದ್ದರು. ಬಳಿಕ ದರ್ಶನ್, ಪವಿತ್ರಾ ಗೌಡ ಮೋಹಕ್ಕೆ ಸಿಲುಕಿದರು. ಇತ್ತೀಚೆಗೆ ದರ್ಶನ್, ವಿಜಯಲಕ್ಷ್ಮಿ ಎಲ್ಲರೂ ಒಟ್ಟಿಗೆ ಪ್ರವಾಸಕ್ಕೆ ತೆರಳಿದ್ದರು, ಪಾರ್ಟಿಗಳನ್ನು ಮಾಡಿದ್ದರು. ಕುಟುಂಬದೊಟ್ಟಿಗೆ ದೇವಸ್ಥಾನಕ್ಕೆ ಹೋಗಿದ್ದರು. ಇದರ ಚಿತ್ರಗಳನ್ನು ಹಂಚಿಕೊಂಡಿದ್ದ ವಿಜಯಲಕ್ಷ್ಮಿ ಎಲ್ಲವೂ ಸರಿಹೋಯ್ತು ಎಂದುಕೊಳ್ಳುತ್ತಿರುವಾಗ ಈ ಘಟನೆ ನಡೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ