ಕಾಂಗ್ರೆಸ್ ಸರ್ಕಾರದಲ್ಲಿ 60-70% ಕಮೀಷನ್ ನಡೆದಿದೆ: ಸಿಸಿ ಪಾಟೀಲ್ ಆರೋಪ

ಗದಗನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಸಿ ಪಾಟೀಲ್, ಕಾಂಗ್ರೆಸ್ ಸರ್ಕಾರದಲ್ಲಿ 60-70% ಕಮೀಷನ್ ನಡೆದಿದೆ ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಟೆಂಡರ್ ಕರೆಯುವ ಉದ್ದೇಶ ಏಳು ಕೋಟಿ. ನರಗುಂದ ಮಾಜಿ ಶಾಸಕ ಬಿಆರ್ ಯಾವಗಲ್ 3 ಕೋಟಿ ರೂ. ಇವ್ರದ್ಧು ಏಳು ಕೋಟಿ ಅಂತ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ 60-70% ಕಮೀಷನ್ ನಡೆದಿದೆ: ಸಿಸಿ ಪಾಟೀಲ್ ಆರೋಪ
ಕಾಂಗ್ರೆಸ್ ಸರ್ಕಾರದಲ್ಲಿ 60-70% ಕಮೀಷನ್ ನಡೆದಿದೆ: ಸಿಸಿ ಪಾಟೀಲ್ ಆರೋಪ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 16, 2024 | 6:11 PM

ಗದಗ, ಜೂನ್​ 16: ಕಾಂಗ್ರೆಸ್ ಸರ್ಕಾರದಲ್ಲಿ 60-70% ಕಮೀಷನ್ ನಡೆದಿದೆ ಎಂದು ಮಾಜಿ ಸಚಿವ ಸಿ.ಸಿ ಪಾಟೀಲ್ (CC Patil) ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲಿನಿಂದ ಹಿಡಿದು ಎಲ್ಲಾ ದರ ಹೆಚ್ಚಾಗಿದೆ ಅಂದ್ರೆ 40%ಕ್ಕೆ ಆಗಲ್ಲ. ಕಾಂಗ್ರೆಸ್ (Congress) ಸರ್ಕಾರದಲ್ಲಿ 69-70% ಕಮೀಷನ್ ನಡೆದಿದೆ. ಒಂದು ಅಭಿವೃದ್ಧಿ ಕೆಲಸ ಇಲ್ಲ, ಎಲ್ಲಿ ಹೊಯ್ತು ಹಣ ಎಂದು ಪ್ರಶ್ನಿಸಿದ್ದಾರೆ.

ಟೆಂಡರ್ ಕರೆಯುವ ಉದ್ದೇಶ ಏಳು ಕೋಟಿ ವ್ಯಂಗ್ಯ

ಎರಡ್ಮೂರು ಸಾವಿರ ಕೋಟಿ ರೂ. ಹೆಚ್​​ಎಸ್​ಟಿಪಿ ಯೋಜನೆಗೆ ಬೆಳಗಾವಿ ಜಿಲ್ಲೆಯಲ್ಲಿ ಟೆಂಡರ್ ಆಗಿದೆ. ಆದರೆ 10 ಎಕರೆ ಜಮೀನು ಕೂಡ ಭೂಸ್ವಾಧೀನ ಆಗಿಲ್ಲ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಪ್ರಗತಿ ಪರಿಶೀಲನೆ ಮಾಡುವಾಗ ಬಯಲಾಗಿದೆ. ಏಜನ್ಸಿ ಫಿಕ್ಸ್ ಆಗಿದೆ ಅಂದಂರೆ ಇದರ ಉದ್ದೇಶ ಏನೂ. ಮುಂದೆ ನಡೆಯುವ ಅಧಿವೇಶನದಲ್ಲಿ ಪ್ರಶ್ನೆ ಕೇಳ್ತೀವಿ ಉತ್ತರ ಕೊಡಬೇಕು ಎಂದಿದ್ದಾರೆ.

ಇದನ್ನೂ ಓದಿ: ತೈಲ ಬೆಲೆ ಏರಿಕೆ: ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ದರ ಕಡಿಮೆ; ಸಿಎಂ ಸಮರ್ಥನೆ

ಟೆಂಡರ್ ಕರೆಯುವ ಉದ್ದೇಶ ಏಳು ಕೋಟಿ. ನರಗುಂದ ಮಾಜಿ ಶಾಸಕ ಬಿಆರ್ ಯಾವಗಲ್ 3 ಕೋಟಿ ರೂ. ಇವ್ರದ್ಧು ಏಳು ಕೋಟಿ ಅಂತ ವ್ಯಂಗ್ಯವಾಡಿದ್ದಾರೆ. ಗುದ್ಲಿ, ಸಲಿಕೆ ತುಕ್ಕು ಹಿಡಿದಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಭೂಮಿ ಪೂಜೆ ಮಾಡಿ ಕೈ ನೋವಾಗುತ್ತಿತ್ತು ಎಂದು ಸಚಿವ ಎಂ ಬಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಉಳಿದ ರಾಜ್ಯಕ್ಕಿಂತ ಕಡಿಮೆ ಇದೆ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಲಿಂಗೈಕ್ಯ ತೋಟದಾರ್ಯ ಸಿದ್ಧಲಿಂಗ ಶ್ರೀಗಳ ಮಾತು ಹೇಳುವ ಮೂಲಕ ಎಂಬಿ ಪಾಟೀಲ್​ಗೆ ಟಾಂಗ್ ನೀಡಿದ್ದಾರೆ. ಒಬ್ಬ ವ್ಯಕ್ತಿ ಹಾಗೇ ಮೆಲಕು ಹಾಕ್ತಿದ್ನಂತೆ. ಶ್ರೀಗಳು ಏನ್ ತಿನ್ನಕತ್ತಿಯಾ ಬಸವಾ ಅಂತ ಕೇಳಿದ್ರು. ಮುದಕಿ ಮಾಡದ ಮಿರ್ಚಿ ತಿಂದ ಹಾಗೆ ಮಾಡಕ್ಕತ್ತಿನ್ರಿ ಅಂದ. ಹಾಂಗ್ ಅಂದ್ರ ಬೆಳಗಾವಿ ಕುಂದಾ ತಿನ್ನು, ಧಾರವಾಡ ಪೇಡಾ ತಿನ್ನು, ಮಿರ್ಚಿ ತಿಂದು ಹೊಟ್ಟಿ ಯಾಕ್ ಉರಿಸಿಕೊಳ್ತಿ ಅಂದ್ರು. ಒಳ್ಳೆಯ ಕೆಲಸಕ್ಕೆ ಹೋಲಿಸಿ, ಹೆಚ್ಚಿನದಕ್ಕೆ ಯಾಕೇ ಹೋಲಿಸ್ತೀರಿ ಅಂತ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ

ಲೋಕಸಭಾ ಚುನಾವಣೆ ಫಲಿತಾಂಶ ನಂತರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಏನೂ ತಳಿಯದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಯಡಿಯೂರಪ್ಪ ವಿರುದ್ಧ ಮೂರು ತಿಂಗಳ ಹಿಂದೆ ದಾಖಲಾ ಪ್ರಕರಣ ಇದು. ಈಗ ಅರೆಸ್ಟ್ ವಾರಂಟ್ ತರುವ ಮೂಲಕ ದ್ವೇಷದ ರಾಜಕೀಯ ಮಾಡಿದ್ದಾರೆ. ಸರ್ಕಾರದ ನಿರ್ಧಾರ ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.

ಗ್ಯಾರಂಟಿ ಬಗ್ಗೆ ನಮ್ಮ ಅಪಸ್ವರ ಇಲ್ಲ. ಸಿದ್ದರಾಮಯ್ಯ 12 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಗ್ಯಾರಂಟಿ ಗಳಿಗೆ ಬಜೆಟ್​ನಲ್ಲಿ ಹಣ ಮೀಸಲಿಟ್ಟಿದ್ದೇವೆ ಎಂದ್ದಿದ್ದಾರೆ. ಹಣ‌ ಮೀಸಲು ಇಟ್ರೆ. ಆದ್ರೆ ಒಂದು ವರ್ಷದಿಂದ ಅಭಿವೃದ್ಧಿ ಯಾಕೆ ಇಲ್ಲ. ಸರ್ಕಾರದ ವೈಖರಿ ಖಂಡಿಸ್ತೀವಿ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ