ದಾವಣಗೆರೆ: ಏಕಕಾಲಕ್ಕೆ 36 ಕಾರ್ಮಿಕರು ಕೆಲಸದಿಂದ ವಜಾ, ಇದು ಎಣ್ಣೆ ಇನ್ ಕಮ್ ಸ್ಟೋರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 06, 2024 | 9:01 PM

ಕಮಿಷನ್ ನೀಡಲ್ಲವೆಂದಿದ್ದಕ್ಕೆ ಏಕಕಾಲಕ್ಕೆ 36 ಕಾರ್ಮಿಕರನ್ನು ಅಬಕಾರಿ ಡಿಪೋದ ವ್ಯವಸ್ಥಾಪಕನ ಕೆಲಸದಿಂದ ವಜಾ ಮಾಡಿರುವಂತಹ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಮಿಷನ್ ಆಸೆಗೆ ನಮ್ಮ‌ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿ ಕೂಲಿ ಕಾರ್ಮಿಕರಿಂದ ಪ್ರತಿಭಟನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಶೌಚಾಲಯ ತೊಳೆಸಿದ್ದಾರೆಂದು ಆರೋಪಿಸಲಾಗಿದೆ.

ದಾವಣಗೆರೆ: ಏಕಕಾಲಕ್ಕೆ 36 ಕಾರ್ಮಿಕರು ಕೆಲಸದಿಂದ ವಜಾ, ಇದು ಎಣ್ಣೆ ಇನ್ ಕಮ್ ಸ್ಟೋರಿ
ದಾವಣಗೆರೆ: ಏಕಕಾಲಕ್ಕೆ 36 ಕಾರ್ಮಿಕರು ಕೆಲಸದಿಂದ ವಜಾ. ಇದು ಎಣ್ಣೆ ಇನ್ ಕಮ್ ಸ್ಟೋರಿ
Follow us on

ದಾವಣಗೆರೆ, ಸೆಪ್ಟೆಂಬರ್​ 06: ಗಣೇಶ ಹಬ್ಬ ಹಿನ್ನಲೆ ಸಾಲು ಸಾಲು ರಜೆ. ಇಂತಹ ವೇಳೆ ಮದ್ಯ (liquor) ಸಂಗ್ರಹಿಸಿಟ್ಟುಕೊಳ್ಳುವುದು ವಾಡಿಕೆ. ಆದರೆ ಭರ್ಜರಿ ಕೆಲಸ ಇರುವ ವೇಳೆ ಇಲ್ಲೊಬ್ಬ ಅಬಕಾರಿ ಅಧಿಕಾರಿ ಕೂಲಿ ಕಾರ್ಮಿಕರು ತನಗೆ ಕಮಿಷನ್ ಕೊಡಲಿಲ್ಲ ಎಂದು ಅವರನ್ನು ಕೆಲಸದಿಂದ ವಜಾ ಮಾಡಿದ ಆರೋಪ ಕೇಳಿ ಬಂದಿದೆ. ಆಕ್ರೋಶಗೊಂಡ ಕಾರ್ಮಿಕರಿಂದ ಪ್ರತಿಭಟನೆ ಮಾಡಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ಬೈಪಾಸ್ ಬಳಿ ಇರುವ ಡಿಪೋದಲ್ಲಿ ಮದ್ಯ ಸಂಗ್ರಹ ಹಾಗೂ ಪೂರೈಕೆ ಮಾಡಲಾಗಿದೆ. ಇಲ್ಲಿಂದ ಜಿಲ್ಲೆಯ ಹರಿಹರ, ಜಗಳೂರು ಹೊನ್ನಾಳಿ ಹಾಗೂ ದಾವಣಗೆರೆ ಹೀಗೆ ನಾಲ್ಕು ತಾಲೂಕು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮತ್ತು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಹೀಗೆ ಆರು ತಾಲೂಕಿಗಳಿಗೆ ಮದ್ಯ ಪೂರೈಕೆ ಇಲ್ಲಿಂದಲೇ ಆಗುತ್ತದೆ. ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರವಾಗುತ್ತದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲೀಗ ಕೋಮು ಸಾಮರಸ್ಯದ ಚಿಲುವೆ: ಒಟ್ಟಿಗೆ ಗಣೇಶ ಹಬ್ಬ ಆಚರಣೆಗೆ ಮುಂದಾದ ಹಿಂದೂ- ಮುಸ್ಲಿಂ

ಈಗ ಗಣೇಶ ಹಬ್ಬ ಬೇರೆ. ನಿರಂತರ ರಜೆಗಳಿವೆ. ಹೀಗಾಗಿ ತುರ್ತಾಗಿ ಆರು ತಾಲೂಕುಗಳಲ್ಲಿ ಲೋಡು ಲೋಡು ಮದ್ಯ ಪೂರೈಕೆ ಆಗಬೇಕು. ಆದರೆ ಡಿಪೋ ಮುಂದೆ ಲಾರಿ ಲೋಡ್ ಮಾಡುವ ಕಾರ್ಮಿಕರೇ ಹೋರಾಟಕ್ಕೆ ಮುಂದಾಗಿದ್ದರು. ಒಂದು ರೀತಿಯಲ್ಲಿ ಡಿಪೋದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಪೊಲೀಸರು ಸಹ ಬಂದಿದ್ದರು. ಇಲ್ಲಿ ಡಿಪೋದ ವ್ಯವಸ್ಥಾಪಕ ಗುಡದಯ್ಯ ಅವರು ಇಲ್ಲಿನ 36 ಜನ ಕಾರ್ಮಿಕರನ್ನ ಕೆಲಸದಿಂದ ತೆಗೆದು ಹಾಕಿ ತಮಗೆ ಬೇಕಾದವರನ್ನ ಸೇವೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನಾವು ದುಡಿದ ಹಣದಲ್ಲಿ ನಿತ್ಯ ಐದು ಸಾವಿರ ರೂ. ಹಣ ಗುಡದಯ್ಯ ಅವರಿಗೆ ಕಮಿಷನ್ ಕೊಡಬೇಕು. ಅದು ಆಗಲ್ಲ ಎಂದಿದಕ್ಕೆ ನಮ್ಮನ್ನ ಕೆಲಸದಿಂದ ವಜಾ ಮಾಡಿದ್ದಾರೆ. ಜೊತೆಗೆ ಕೆಲವರಿಂದ ಇದೇ ವ್ಯವಸ್ಥಾಪಕ ಗುಡದಯ್ಯ ಶೌಚಾಲಯ ತೊಳೆಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಮಿಕರಿಂದ ಪ್ರತಿಭಟನೆ ಮಾಡಲಾಗಿದೆ.

ಲಾರಿಗೆ ಮದ್ಯದ ಬಾಕ್ಸ್​ ಹಾಕುವುದು. ಬೇರೆ ಕಡೆಯಿಂದ ಬರುವ ಬಾಕ್ಸ್​ಗಳನ್ನ ಡಿಪೋದಲ್ಲಿ ಇಳಿಸುವುದು. ಇವರಲ್ಲಿ ಬಹುತೇಕರು ಹತ್ತರಿಂದ ಹದಿನೈದು ವರ್ಷ ಸೇವೆ ಸಲ್ಲಿಸಿದವರೇ ಇದ್ದಾರೆ. ಒಂದು ಬಾಕ್ಸ್​ಗೆ 40 ಪೈಸಾ ದರವಿದೆ. ಹೀಗೆ ಇದರಿಂದಲೇ ಇವರೆಲ್ಲರ ಜೀವನ ನಿರ್ವಹಣೆ ಆಗುತ್ತದೆ. ತಮಗೆ ಬೇಕಾದವರನ್ನ ಕೆಲಸಕ್ಕೆ ತೆಗೆದುಕೊಳ್ಳಲು ಈ ರೀತಿ ಹುನ್ನಾರ ಮಾಡುತ್ತಿದ್ದಾರೆ ಎಂಬುದು ಆರೋಪಿಸಲಾಗಿದೆ.

ಮೇಲಾಗಿ ಯಾವುದೇ ಬಾಕ್ಸ್ ಕೈ ತಪ್ಪಿ ಬಿದ್ದರೇ ಬಾಟಲ್ ಹಾಳಾದರೆ ಇದನ್ನೆಲ್ಲಾ ನಮ್ಮ ಸಂಬಳದಲ್ಲಿಯೇ ಕಟ್ ಮಾಡುತ್ತಾರೆ ಎಂಬುದು ಕಾರ್ಮಿಕರ ಕಿಡಿಕಾಡಿದ್ದಾರೆ. ಆದರೆ ಈ ಬಗ್ಗೆ ಉತ್ತರಿಸಿದ ಅಬಕಾರಿ ಡಿಪೋದ ವ್ಯವಸ್ಥಾಪಕ ಗುಡದಯ್ಯ ಅವರು ಹೇಳುವುದೇ ಬೇರೆ. ಕಾರ್ಮಿಕರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿವೆ ಎನ್ನಾತ್ತಾರೆ.

ಇದನ್ನೂ ಓದಿ: ರಾಜ್ಯದ ಏಕೈಕ ಗೌರಿ ದೇವಾಲಯ ಈ ಜಿಲ್ಲೆಯಲ್ಲಿದೆ: ಗಣೇಶನಿಗೂ ಮೊದಲು ಗೌರಿಗೆ 12 ದಿನ ವಿಶೇಷ ಪೂಜೆ

ಹೀಗೆ ಭರ್ಜರಿ ಕೆಲಸ ಇರುವ ವೇಳೆಯಲ್ಲಿಯೇ ವ್ಯವಸ್ಥಾಪಕರು ಹಾಗೂ ಕೂಲಿ ಕಾರ್ಮಿಕರ ನಡುವೆ ಸಂಘರ್ಷ ಶುರುವಾಗಿದೆ. ಇದಕ್ಕೆ ಬೇಸತ್ತ ಬಾರ್ ರೆಸ್ಟಾರೆಂಟ್ ಮಾಲೀಕರು ಸ್ವತಃ ವಾಹನ ತಂದು ತಮ್ಮದೇ ಕಾರ್ಮಿಕರನ್ನ ಕರೆದುಕೊಂಡು ಬಂದು ಮದ್ಯ ತೆಗೆದುಕೊಂಡು ಹೋಗುತ್ತಿದ್ದಾರೆ. ಎರಡು ದಿನ ರಜೆ ಇದ್ದ ಹಿನ್ನಲೆ ಮದ್ಯ ಮಾರಾಟ ಕೂಡ ಭರ್ಜರಿಯಾಗಿದೆ. ಆದರೆ ಹತ್ತಾರು ವರ್ಷಗಳಿಂದ ಇದೇ ಕೆಲಸ ನಂಬಿಕೊಂಡು ಬದುತ್ತಿರುವ ಕೂಲಿಕಾರ್ಮಿಕರಿಗೆ ನ್ಯಾಯಸಿಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.