ದಾವಣಗೆರೆ, ಡಿಸೆಂಬರ್ 16: ಅಲೆಮಾರಿ ದಂಪತಿಯ 1 ವರ್ಷ ಗಂಡು ಮಗುವನ್ನು (child) ಕಿರಾತಕರು ಅಪಹರಣ ಮಾಡಿರುವಂತಹ ಘಟನೆ ನ.16ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹರಪನಹಳ್ಳಿ ಪೊಲೀಸ್ ಠಾಣೆಗೆ ಮಗವಿನ ತಂದೆ ಯುವರಾಜ್ ದೂರು ನೀಡಿದ್ದರು. ದೂರು ನೀಡಿ 1 ತಿಂಗಳಾದರೂ ಪೊಲೀಸರು ಪತ್ತೆಹಚ್ಚಿಲ್ಲ. ಹೀಗಾಗಿ ಹೆತ್ತವರು ಅಳಲು ತೋಡಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿಕ್ಕಳ್ಳಿ ಮೂಲದ ಯುವರಾಜ್, ಸಾರಿಕಾ ದಂಪತಿ, ಮಗು ಅಪಹರಣವಾಗಿ 1 ತಿಂಗಳಾದರೂ ಸುಳಿವು ಸಿಕ್ಕಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಚಿಕ್ಕಳ್ಳಿ ಮೂಲದ ಕುಟುಂಬ ಗಂಧದ ಎಣ್ಣೆ ವ್ಯಾಪಾರಕ್ಕೆಂದು ಹರಪನಹಳ್ಳಿಗೆ ಬಂದಿದ್ದರು.
ಇದನ್ನೂ ಓದಿ: ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ
ಈ ವೇಳೆ ಹರಪನಹಳ್ಳಿಯ ಯಮಹಾ ಶೋರೂಮ್ ಬಳಿ ಟೆಂಟ್ ಹಾಕಿದ್ದರು. ಪುತ್ರ ಆರ್ಯನ್ ಜತೆ ಟೆಂಟ್ನಲ್ಲೇ ಯುವರಾಜ್, ಸಾರಿಕಾ ನೆಲೆಸಿದ್ದರು. ನವೆಂಬರ್ 16ರ ರಾತ್ರಿ ಟೆಂಟ್ನಲ್ಲಿ ಮಲಗಿದ್ದಾಗ ಮಗುವಿನ ಅಪಹರಣ ಮಾಡಲಾಗಿದೆ.
ಮತ್ತೊಂದು ಪ್ರಕಣದಲ್ಲಿ ಕಂದೇಗಾಲ ಗ್ರಾಮದಲ್ಲಿ ಹೆಜ್ಜೇನು ದಾಳಿಗೆ ರೈತ ಸಾವನ್ನಪ್ಪಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಂದೇಗಾಲದಲ್ಲಿ ನಡೆದಿದೆ. ರೈತ ನಿಂಗೇಗೌಡ (50) ಮೃತ ರೈತ. ರೇಷ್ಮೆ ಸೊಪ್ಪು ಕಟಾವು ವೇಳೆ ನಿಂಗೇಗೌಡರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಈ ವೇಳೆ ಅಸ್ವಸ್ಥರಾಗಿದ್ದ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮನೆಯ ಮುಂದೆ ಕಟ್ಟಿದ್ದ ಎರಡು ಕುರಿಗಳನ್ನು ಹಾಡುಹಗಲೇ ಕಳ್ಳರು ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಟೋದಲ್ಲಿ ಬಂದು ಜ್ಞಾನೇಶ್ ಎಂಬುವವರಿಗೆ ಸೇರಿದ್ದ ಕುರಿಗಳನ್ನು ಕಳ್ಳತನ ಮಾಡಲಾಗಿದೆ.
ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.