4 ಕಿಮೀ ನಡೆದು ಶಾಲೆಗೆ ಹೋಗುವಾಗ ಕೆಟ್ಟ ಜನರ ಕಾಟ: ನಮ್ಮೂರಿಗೆ ಬಸ್​ ಬಿಡಿ ಎಂದ ಶಾಲಾ ಬಾಲಾಕಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 29, 2024 | 6:14 PM

ದಾವಣಗೆರೆ ತಾಲೂಕಿನ ಗಿಡದಹಳ್ಳಿ ಗ್ರಾಮದಲ್ಲಿ ಬಸ್​ ಸೌಲಭ್ಯವಿಲ್ಲ. ಹೀಗಾಗಿ 3 ರಿಂದ 4 ಕಿ.ಮೀ.ದೂರದಷ್ಟು ಗುಡ್ಡಗಾಡು ಪ್ರದೇಶದಲ್ಲಿ ಕಾಲು ನಡಿಗೆಯಲ್ಲೇ ಹೋಗಬೇಕಾದ ಪರಿಸ್ಥಿತಿ ಇದೆ. 2016 ರಿಂದ ಇಲ್ಲಿಯವರೆಗೂ ಗುಡ್ಡದಹಳ್ಳಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಇಲ್ಲದಿರುವುದರ ಬಗ್ಗೆ ಹಲವಾರು ಬಾರಿ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ.

4 ಕಿಮೀ ನಡೆದು ಶಾಲೆಗೆ ಹೋಗುವಾಗ ಕೆಟ್ಟ ಜನರ ಕಾಟ: ನಮ್ಮೂರಿಗೆ ಬಸ್​ ಬಿಡಿ ಎಂದ ಶಾಲಾ ಬಾಲಾಕಿ
4 ಕಿಮೀ ನಡೆದು ಶಾಲೆಗೆ ಹೋಗುವಾಗ ಕೆಟ್ಟ ಜನರ ಕಾಟ: ನಮ್ಮೂರಿಗೆ ಬಸ್​ ಬಿಡಿ ಎಂದ ಶಾಲಾ ಬಾಲಾಕಿ
Follow us on

ದಾವಣಗೆರೆ, ಆಗಸ್ಟ್​ 29: ಹೇಗಾದರೂ ಮಾಡಿ ನಮ್ಮೂರಿಗೆ ಬಸ್ (bus)​​ ಬಿಡಿ. ಇಲ್ಲಾಂದ್ರೆ ನಮ್ಮ ಅಪ್ಪ-ಅಮ್ಮಾ ಸೇರಿ ಮದುವೆ ಮಾಡಿ ಬಿಡುತ್ತಾರೆ. ನಮಗೆ ಓದ ಬೇಕು. ಜೀವನದಲ್ಲಿ ಸಾಧನೆ ಮಾಬೇಕೆಂಬ ಆಸೆ ಇದೆ. ಆದರೆ ಗ್ರಾಮದಲ್ಲಿ ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಹೋಗಿ ಶಾಲೆ ಸೇರಬೇಕು. ದಾರಿಯಲ್ಲಿ ಕೆಟ್ಟ ಜನರ ಕಾಟ. ಇದನ್ನ ಮನೆಯಲ್ಲಿ ಹೇಳಿದರೆ ಶಾಲೆ ಬಿಡಿಸಿ ಮದುವೆ ಮಾಡುತ್ತಾರೆ ಎಂದು ದಾವಣಗೆರೆ ತಾಲೂಕಿನ ಗಿಡದಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಬಾಲಕಿಯ ಅಳಲು ತೊಡಿಕೊಂಡಿದ್ದಾರೆ.

ಸಾರಿಗೆ ಸೌಲಭ್ಯ ಇಲ್ಲ

2016 ರಿಂದ ಹಿಡಿದು ಇಲ್ಲಿಯವರೆಗೂ ಗುಡ್ಡದಹಳ್ಳಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಇಲ್ಲದಿರುವುದರ ಬಗ್ಗೆ ಹಲವಾರು ಬಾರಿ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಅವರಿಂದ ಯಾವುದೇ ಹಿಂಬರಹವಾಗಲೀ ಅಥವಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಾಗಲೀ ನಡೆದಿಲ್ಲ. ಗ್ರಾಮದಿಂದ ಶಾಲೆ-ಕಾಲೇಜ್, ಉದ್ಯೋಗಕ್ಕಾಗಿ, ಹಿರಿಯ ನಾಗರಿಕರಿಗೆ ಆರೋಗ್ಯ ಸಮಸ್ಯೆಗೆ ದಾವಣಗೆರೆ ಜಿಲ್ಲೆಗೆ ಹೋಗಿ ಬರಲು ತುಂಬಾ, ತೊಂದರೆ ಉಂಟಾಗುತ್ತಿದ್ದು, ಈಗಿರುವ ಬಸ್ ನಿಲ್ದಾಣಕ್ಕೆ ಹೋಗಲು ಸುಮಾರು 3 ರಿಂದ 4 ಕಿ.ಮೀ.ದೂರದಷ್ಟು ಗುಡ್ಡಗಾಡು ಪ್ರದೇಶದಲ್ಲಿ ಕಾಲು ನಡಿಗೆಯಲ್ಲೇ ಹೋಗಬೇಕಾಗಿರುತ್ತದೆ.

ಇದನ್ನೂ ಓದಿ: ನಮ್ಮೂರಿಗೆ ಬಸ್​​ ಒದಗಿಸಿ ಇಲ್ಲವಾದ್ರೆ ಮದ್ವೆ ಮಾಡ್ತಾರೆ: ಶಾಲಾ ಬಾಲಕಿ ಅಳಲು

ಇದರಿಂದ ಹಿರಿಯ ನಾಗರೀಕರಿಗೆ ಮತ್ತು ಮಕ್ಕಳಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಹಾಗೂ ಗ್ರಾಮಕ್ಕೆ ಸಲ್ಲಬೇಕಾದ ಮೂಲಭೂತ ಸೌಕರ್ಯದಿಂದಲೂ ವಂಚಿತಗೊಂಡಿದ್ದು, ಕುಡಿಯುವ ನೀರು, ಒಳಚರಂಡಿ, ರಸ್ತೆ ಸೇರಿದಂತ, ಹಲವು ಬಗೆಯ ಸಮಸ್ಯೆಗಳಿಂದ ಗ್ರಾಮಸ್ಥರು ತೊಂದರೆಗೀಡಾಗಿದ್ದಾರೆ. ಸ್ಥಳೀಯ ಸರ್ಕಾರಿ ಶಾಲೆಯ, ಪರಿಸ್ಥಿತಿಯಂತೂ ಈಗಲೋ ಆಗಲೋ ಬೀಳುವ ಪರಿಸ್ಥಿತಿಯಲ್ಲಿದ್ದು, ಮೇಲ್ಛಾವಣಿ ಈಗಾಗಲೇ ಬಿದ್ದು, ಪ್ಲಾಸ್ಟಿಕ್ ಶೀಟ್ ಒದಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಈ ಸಂಬಂಧವಾಗಿ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಕ್ರಮ ಕೈಗೊಂಡಿರುವುದಿಲ್ಲ.

ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ, ಮೂಲಭೂತ ಸೌಕರ್ಯ ಹಾಗೂ ವ್ಯವಸ್ಥಿತ ಶಿಕ್ಷಣ ಸೇರಿದಂತೆ ಹಲವು ಬಗೆಯ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಂಡು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.

ಇದನ್ನೂ ಓದಿ: ನಾಳೆ ಚನ್ನಪಟ್ಟಣದಲ್ಲಿ ಉದ್ಯೊಗ ಮೇಳ: SSLC ಫೇಲ್ ಆಗಿದ್ರೂ ಜಾಬ್ ಸಿಗುತ್ತೆ

ನರನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡದಹಟ್ಟಿ, ರೇಷನ್ ತರಲು, ಚಿಕಿತ್ಸೆ, ಬಸ್ ಹಾಗೂ ಶುದ್ದ ಕುಡಿಯುವ ನೀರು ತರಲು 4 ಕಿಮೀ ನಡೆದು ಹೋಗಬೇಕು. ಹೀಗೆ ನಡೆದುಕೊಂಡು ಹೋಗುವಾಗ ಕೆಟ್ಟ ಜನರ ಕಾಟ. ಜೊತೆಗೆ ಬೈಕ್ ಲಿಪ್ಟ ಕೊಟ್ಟರು ಕೆಟ್ಟ ಶಬ್ದಗಳಿಂದ ನಿಂದನೆ ತಪ್ಪಿದ್ದಲ್ಲ. ಇದಕ್ಕೆ ಗ್ರಾಮಸ್ಥರು ಸುಸ್ತಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.