ದಾವಣಗೆರೆ: ಬರಗಾಲದಿಂದ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶ, 119 ಕೋಟಿ ರೂ. ನಷ್ಟ

ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದೆ. ಇದರಿಂದ ರಾಜ್ಯದಲ್ಲಿ ಕುಡಿಯುವ ನೀರಿಗೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಮಳೆ ಇಲ್ಲದೆ ಬರಗಾಲ ಆವರಿಸಿದ್ದು, ನೀರು ಇಲ್ಲದೆ ಬೆಳಗಳು ಒಣಗುತ್ತಿವೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಭೀಕರ ಬರಗಾಲಕ್ಕೆ ದಾವಣಗೆರೆ ಜಿಲ್ಲೆಯಲ್ಲಿ 1.50 ಲಕ್ಷ ಹೆಕ್ಟರ್​ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.

ದಾವಣಗೆರೆ: ಬರಗಾಲದಿಂದ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶ, 119 ಕೋಟಿ ರೂ. ನಷ್ಟ
ಸಾಂದರ್ಭಿಕ ಚಿತ್ರ
Follow us
|

Updated on: Feb 11, 2024 | 11:11 AM

ದಾವಣಗೆರೆ, ಫೆಬ್ರವರಿ 11: ಬೇಸಿಗೆ (Summer) ಆರಂಭದಲ್ಲೆ ರಾಜ್ಯದಲ್ಲಿ ಜೀವ ಜಲಕ್ಕೆ ಹಾಹಾಕಾರ ಭುಗಿಲೆದ್ದಿದೆ. ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ (Davangere) ಜಿಲ್ಲೆಗೂ ಬರಸಿಡಿಲು ಅಪ್ಪಳಿಸಿದ್ದು, ಮಳೆ ಬಾರದೆ ಬೆಳೆ ಸಂಪೂರ್ಣ ಬೂದಿಯಾಗುತ್ತಿದೆ. ಬರದ ಛಾಯೆ ಅಡಕೆ ಬೆಳೆಗೂ ತಟ್ಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಈ ವರ್ಷ ಬರೋಬರಿ 119 ಕೋಟಿ ರೂಪಾಯಿ ಅಡಕೆ ಬೆಳೆ (Crop) ನಷ್ಟವಾಗಿದೆ. ಇಷ್ಟೇ ಅಲ್ಲ, ಇತರೆ ಬೆಳೆಗಳು ಕೂಡ ಒಣಗಿ ಹೋಗಿದ್ದು ರೈತರು ಕಂಗಾಲಾಗಿ ಕೂತಿದ್ದಾರೆ.

1 ಲಕ್ಷದ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶ

ದಾವಣೆಗೆರೆ ಜಿಲ್ಲೆಯಲ್ಲಿ ಬೆಳೆಯನ್ನೆ ನಂಬಿಕೊಂಡಿರುವ ರೈತರಿಗೆ ಶಾಕ್ ಎದುರಾಗಿದೆ. ಜಿಲ್ಲೆಯಲ್ಲಿ 1 ಲಕ್ಷದ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಹಾಳಾಗಿದೆ. ಮುಂಗಾರು ವೇಳೆ 2 ಲಕ್ಷದ 27 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು‌. ಮಳೆ ಕೈಕೊಟ್ಟಿದ್ದರಿಂದ 1 ಲಕ್ಷದ 50 ಸಾವಿರ ಹೇಕ್ಟರ್ ‌ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ, ಕಾಳು ಕಟ್ಟದ ರಾಗಿ, ಈರುಳ್ಳಿ ಹೀಗೆ ಎಲ್ಲವೂ ಒಣಗಿ ಹೋಗಿದೆ. ಇನ್ನು ಮಳೆಯಾಶ್ರಿತ ಪ್ರದೇಶವಾದ ಜಗಳೂರು ತಾಲೂಕಿನಲ್ಲಿ ಭೀಕರ ಬರದ ದೃಶ್ಯಗಳು ಕಾಣಿಸುತ್ತಿವೆ.

ಬರದ ತಾಂಡವಕ್ಕೆ ಜಗಳೂರು ಜನರು ಕಂಗಾಲು

ಜಗಳೂರು ತಾಲೂಕಿನಲ್ಲಿ ಬರದ ತಾಂಡವಕ್ಕೆ ಜನರು ಕಂಗಾಲಾಗಿ ಕೂತಿದ್ದಾರೆ. ಇತ್ತೀಚಿಗೆ ಇದೆ ಪ್ರದೇಶಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು. ದಾವಣಗೆರೆ ಜಿಲ್ಲೆಯಲ್ಲಿ 47 ಸಾವಿರ ರೈತರು ಈಗಾಗಲೆ ಬೆಳೆ ವಿಮೆ ಮಾಡಿಸಿದ್ದಾರೆ. ಅಡಕೆ ತೋಟವೂ ಒಣಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಬೆಳೆಗಾರರು ದಿಕ್ಕು ತೋಚದಂತೆ ಆಗಿದ್ದಾರೆ. ಸರ್ಕಾರ ಸೂಕ್ತ ಬರ ಪರಿಹಾರ ನೀಡುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಇದನ್ನೂ ಓದಿ: ಭೀಕರ ಬರಗಾಲ: ಗುಳೆ ಹೊರಟ ಕುಟುಂಬಗಳು: ಬಡ ಮಕ್ಕಳ ಶಿಕ್ಷಣಕ್ಕೆ ಕುತ್ತು! 

ಬೋರ್​ ವೆಲ್​ನಲ್ಲಿ ನೀರಿಲ್ಲ, ಒಣಗಿದ ಅಡಕೆ ಬೆಳೆ

ಇಷ್ಟೇ ಅಲ್ಲ, ಬೋರ್ ​ವೇಲ್​​ಗಳಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಹೋಗಿದೆ. ಕೆರೆ ಕಟ್ಟೆಗಳು ಬತ್ತಿದ್ದು ಹನಿ ಹನಿ ನೀರಿಗೂ ಜನರು ಪರದಾಡುವ ಸ್ಥಿತಿ ಎದುರಾಗಿದೆ. ಮೊದಲು 180 ರಿಂದ 250 ಅಡಿಗೆ ನೀರು ಸಿಗುತ್ತಿತ್ತು. ಆದರೆ ಈಗ ಬರೋಬರಿ 600 ರಿಂದ 800 ಅಡಿ ಬೋರ್ ​ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ರೈತರು ಮುಂದೆ ಹೇಗಪ್ಪ ಅಂತಾ ಕೂರುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಅಡಕೆ ತೋಟ ಒಣಗಿ ಹೋಗುತ್ತಿರುವುದನ್ನು ನೋಡಿ ತೋಟದ ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ.

ಬರದ ತಾಂಡವಕ್ಕೆ ತತ್ತರಿಸಿದ ಜಾನುವಾರುಗಳು

ದಾವಣಗೆರೆ, ಹೊನ್ನಾಳಿ, ಹರಿಹರ, ಜಗಳೂರು, ಚನ್ನಗಿರಿ ಹಾಗೂ ನ್ಯಾಮತಿ ಒಟ್ಟು 6 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಕಳೆದ 25 ವರ್ಷಗಳಲ್ಲಿ 16 ವರ್ಷ ಜಗಳೂರು ತಾಲೂಕು ಬರದಿಂದ ನಲುಗಿದೆ. ಅಲ್ಲದೆ ಜಾನುವಾರುಗಳು ಕೂಡ ಬರದ ಹೊಡೆತಕ್ಕೆ ನಲುಗಿವೆ. ಗೋ ಶಾಲೆಗಳನ್ನು ಆರಂಭಿಸಿ ಮೇವು ಪೂರೈಸುವಂತೆ ರೈತರು ಆಗ್ರಹಿಸಿದ್ದಾರೆ. ನೀರಿಲ್ಲದೇ ಪ್ರಾಣಿ, ಪಕ್ಷಿಗಳು ಪರದಾಡುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್