ತುಂಗಭದ್ರಾ ಆರತಿಗಾಗಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ 108 ಯೋಗ ಮಂಟಪಗಳು

ಗಂಗಾ ನದಿ ಪಾತ್ರದಲ್ಲಿ ನಿತ್ಯ ನಡೆಯುವ ಗಂಗಾ ಆರತಿ ರೀತಿಯಲ್ಲಿ ಇನ್ನು ಮೇಲೆ ತುಂಗಭದ್ರೆಗೂ ನಡೆಯಲಿದೆ. ಇದಕ್ಕಾಗಿಯೇ ಮೂವತ್ತು ಕೋಟಿ ರೂಪಾಯಿ ಯೋಜನೆ ರೂಪಗೊಂಡಿದೆ. ತುಂಗಭದ್ರಾ ನದಿಯ ದಡದಲ್ಲಿ 108 ಯೋಗ ಮಂಟಪಗಳ ನಿರ್ಮಾಣ ಆಗುತ್ತಿವೆ.‌ ಅಷ್ಟ ದೇವರ ಭಾವಚಿತ್ರಗಳು ಪ್ರತಿಷ್ಠಾಪನೆ ಆಗಲಿವೆ. ಇಲ್ಲಿದೆ ದಕ್ಷಿಣ ಭಾರತದ ವಿಶಿಷ್ಟ ಸ್ಥಳದ ಸ್ಟೋರಿ.

ತುಂಗಭದ್ರಾ ಆರತಿಗಾಗಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ 108 ಯೋಗ ಮಂಟಪಗಳು
ತುಂಗಭದ್ರಾ ಆರತಿಗಾಗಿ ಮೂವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ 108 ಯೋಗ ಮಂಟಪಗಳು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 22, 2024 | 8:56 PM

ದಾವಣಗೆರೆ, ಆ.22: ಉತ್ತರ ಭಾರತದ ವಾರಣಾಸಿಯಲ್ಲಿ ನಿತ್ಯ ಗಂಗಾ ನದಿಗೆ ಸಂಜೆ ಮಂಗಳಾರುತಿ ಆಗುತ್ತದೆ. ಅದಕ್ಕೆ ಗಂಗಾರುತಿ ಎನ್ನುತ್ತಾರೆ. ಇದೇ ರೀತಿ ದಾವಣಗೆರೆ(Davanagere)ಯ ಹರಿಹರ ನಗರಕ್ಕೆ ಹೊಂದಿಕೊಂಡು ಹರಿಯುತ್ತಿರುವ ತುಂಗಭದ್ರಾ ನದಿಗೆ ತುಂಗಭದ್ರಾ ಆರತಿ ಶುರುವಾಗಲಿದೆ. ಇಲ್ಲಿನ ರಾಘವೇಂದ್ರ ಮಠದ ಹಿಂಭಾಗದಲ್ಲಿ ತುಂಗಭದ್ರಾ ಆರತಿಗಾಗಿ ನಿರ್ಮಿಸಲು ಉದ್ದೇಶಿಸಿದ್ದ 108 ಯೋಗ ಮಂಟಪಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ ಮಾಡಿದ್ದರು. ಇದರ ಉಸ್ತುವಾರಿ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ವಹಿಸಿದ್ದು, ಈಗ ಕಾಮಗಾರಿ ಭರ್ಜರಿಯಾಗಿ ನಡೆದಿದೆ.‌

ವಿಶೇಷವಾಗಿ ಈ ಪರಿಕಲ್ಪನೆ ಹಾಗೂ ಇಂತಹವೊಂದು ತುಂಗಭದ್ರಾ ಆರತಿ ಮಾಡಬೇಕು ಎಂದು ಪ್ರಯತ್ನ ಮಾಡಿದವರು ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ. ಹಿಂದಿನ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಯೋಜನೆ ಮಂಜೂರು ಮಾಡುವಂತೆ ಒತ್ತಡ ಹಾಕಿದ್ದರು. ಇದಾದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರಕ್ಕೆ ಬಂದ ಬಳಿಕ ನೀರಾವರಿ ನಿಗಮ ಇಂಜಿವೀಯರ್ ಗುದಿಗೆ ಎಂಬುವರು ಇದಕ್ಕೊಂದು ಪ್ಲಾನ್ ಮಾಡಿದರು. ಇದೀಗ ದೇಶದ ಗಮನ ಸೆಳೆಯಲು ಸಜ್ಜಾಗುತ್ತಿದೆ.

ಇದನ್ನೂ ಓದಿ:ಹರಿಹರ: ಜನವರಿಯಲ್ಲಿ ಶುರುವಾಗಲಿದೆ ತುಂಗ ಭದ್ರಾ ಆರತಿ

ಮಕರ ಸಂಕ್ರಾಂತಿಯೆಂದು ಉದ್ಘಾಟನೆಯಾಗಲಿದೆ

ಬರುವ ಜನವರಿ 14 ಮಕರ ಸಂಕ್ರಾಂತಿಯ ದಿನ ಇದು ಉದ್ಘಾಟನೆ ಆಗಲಿದ್ದು, ಇದರಿಂದ ಹರಿಹರ ಒಂದು ಪುಣ್ಯಕ್ಷೇತ್ರವಾಗಲಿದೆ. ಇಲ್ಲಿ ಶಂಕರರಾಚಾರ್ಯ, ಬಸವಣ್ಣ ಸೇರಿದಂತೆ ಎಂಟು ಮಂಟಪ ನಿರ್ಮಾಣವಾಗುತ್ತಿದೆ.‌ ರಾಘವೇಂದ್ರ ಸ್ವಾಮೀಜಿ ಬೃಂದಾವನ, ಹರಿಹರೇಶ್ವರ ದೇವಸ್ಥಾನ ಇದೇ ಸ್ಥಳದಲ್ಲಿ ನಿರ್ಮಾಣ ಆಗಲಿದೆ. ಚಾಳುಕ್ಯ ಹೊಯ್ಸಳ ಶೈಲಿಯ ಶಿಲ್ಪದಲ್ಲಿ ದೇವಸ್ಥಾನ ಸಿದ್ದವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ