11 ವರ್ಷದ ಬಾಲಕನಿಗೆ ಉಚ್ಚಂಗೆಮ್ಮನ ರುಂಡ ಮಾಲೆ ಪಟ್ಟಾಭಿಷೇಕ; 60 ವರ್ಷದ ಬಳಿಕ ನಡೆದ ಅಪರೂಪದ ಕಾರ್ಯಕ್ರಮ
1963 ರಲ್ಲಿ ಗ್ರಾಮದ ವೈಯಾಳಿ ದುರುಕೆಂಚ್ಚಪ್ಪ ಎನ್ನುವ ವ್ಯಕ್ತಿಯನ್ನು ಪಟ್ಟಕಟ್ಟಿದ್ದರೂ ದುರುಕೇಂಚ್ಚಪ್ಪ ವಯೋಸಹಜ ಮರಣವನ್ನು ಹೊಂದಿದ್ದಾರೆ. ಹೀಗಾಗಿ ಇಂದು (ನವೆಂಬರ್ 17) ಇದೇ ವೈಯ್ಯಾಳಿ ಮನೆತನದ ಹನುಮಂತಪ್ಪನನ್ನು ಆನೆ ಹೊಂಡದಲ್ಲಿ ಸ್ನಾನ ಮಾಡಿಸಿ, ಅದ್ದೂರಿಯಾಗಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಗಿತು.
ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಧ ಉಚ್ಚಂಗಿದುರ್ಗದಲ್ಲಿ ಶಕ್ತಿದೇವತೆ ಉಚ್ಚೆಂಗೆಮ್ಮ ನೆಲೆಸಿದ್ದಾಳೆ. ಶ್ರೀ ಕ್ಷೇತ್ರದಲ್ಲಿ ದೇವಿಯ ಉತ್ಸವ ಮೂರ್ತಿಯು ಪ್ರತಿ ಹುಣ್ಣಿಮೆಗೆ ಆನೆಹೊಂಡಕ್ಕೆ ಗಂಗೆಪೂಜೆಗೆ ಹೋಗುವುದು, ಯುಗಾದಿ ಹಬ್ಬದಲ್ಲಿ ಗ್ರಾಮದ ಓಕಳಿ ಉತ್ಸವ, ದಸರಾದಲ್ಲಿ ಬನ್ನಿ ಉತ್ಸವ, ಹಿರೇ ಮೆಗಳಗೆರೆ, ಕಂಚಿಕೆರೆ ಹೀಗೆ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಉಚ್ಚಂಗೆಮ್ಮನ ದೇವರ ಉತ್ಸವ ಮೂರ್ತಿಯ ಮುಂದೆ, ಗ್ರಾಮಸ್ಥರ ಸಮ್ಮುಖದಲ್ಲಿ ಪಟ್ಟಕಟ್ಟಿದ ಗ್ರಾಮದ ವೈಯಾಳಿ ಮನೆತನದವರೂ ದೇವಿಯ ರುಂಡ ಮಾಲೆಯನ್ನು ಧರಿಸಿ ಹೋಗುವುದು ಇತಿಹಾಸ ಕಾಲದಿಂದ ನಡೆದುಕೊಂಡು ಬಂದಿದೆ.
1963 ರಲ್ಲಿ ಗ್ರಾಮದ ವೈಯಾಳಿ ದುರುಕೆಂಚ್ಚಪ್ಪ ಎನ್ನುವ ವ್ಯಕ್ತಿಯನ್ನು ಪಟ್ಟಕಟ್ಟಿದ್ದರೂ ದುರುಕೇಂಚ್ಚಪ್ಪ ವಯೋಸಹಜ ಮರಣವನ್ನು ಹೊಂದಿದ್ದಾರೆ. ಹೀಗಾಗಿ ಇಂದು (ನವೆಂಬರ್ 17) ಇದೇ ವೈಯ್ಯಾಳಿ ಮನೆತನದ ಹನುಮಂತಪ್ಪನನ್ನು ಆನೆ ಹೊಂಡದಲ್ಲಿ ಸ್ನಾನ ಮಾಡಿಸಿ, ಅದ್ದೂರಿಯಾಗಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಗಿತ್ತು. ದೇವಸ್ಥಾನ ಸುತ್ತಮುತ್ತ ಬಾಳೆಕಂಬ ಹಾಗೂ ಮಾವಿನಸಪ್ಪಿನ ಅಲಂಕಾರ ಮಾಡಲಾಗಿತ್ತು.
ಉಚ್ಚಂಗಿದುರ್ಗದ ಸರ್ವ ಗ್ರಾಮಸ್ಥರ ಸಮ್ಮುಖದಲ್ಲಿ ಉಚ್ಚಗೇಂಮ್ಮನ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ದೇವಿಯ ರುಂಡಮಾಲೆಯನ್ನು ಗ್ರಾಮದ ವೈಯಾಳಿ ಮನೆತನದ 06 ಕುಟುಂಬದಲ್ಲಿ ದೇವಿಯ ಅನುಗ್ರಹ ದೊರೆತ ಹನುಮಂತಪ್ಪ ಎನ್ನುವ ಬಾಲಕನಿಗೆ ಪಟ್ಟಾಧಿಕಾರ ನೀಡಲಾಯಿತು.
ರುಂಡ ಮಾಲೆ ಪಟ್ಟಾಭಿಷೇಕ ಅಂದರೆ ಏನು? ಪ್ರತಿ ಪುಣ್ಯಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಸಂಪ್ರದಾಯ ಇದ್ದೆ ಇರುತ್ತದೆ. ಉಚ್ಚಂಗೆಮ್ಮನ ಪುಣ್ಯಕ್ಷೇತ್ರ ಮುಜರಾಯಿ ಇಲಾಖೆಗೆ ಸೇರಿದೆ. ವರ್ಷದಲ್ಲಿ ಪುಣ್ಯಕ್ಷೇತ್ರದಲ್ಲಿ ಉತ್ಸವಗಳು ನಡೆಯುತ್ತವೆ. ಈ ಉತ್ಸವಕ್ಕೆ ಚಾಲನೆ ನೀಡುವ ಸಂಪ್ರದಾಯವಿದೆ. ಇಂತಹ ಸಂಪ್ರದಾಯದ ವೈಯ್ಯಾಳಿ ಮನೆಯನಕ್ಕೆ ಇದೆ. ರುಂಡ ಮಾಲೆ ಅಂದರೆ ದೇವಿ ಉತ್ಸವ ಆರಂಭವಾದಾಗ ಪಟ್ಟಾಭಿಷೇಕ ಮಾಡಿದ ವ್ಯಕ್ತಿ ಮಾಲೆ ಹಾಕಿಕೊಂಡು ಉತ್ಸವಕ್ಕೆ ಚಾಲನೆ ನೀಡಬೇಕು. ಇದು ಆತನ ಜೀವಿತಾವಧಿವರೆಗೆ ಚಾಲ್ತಿಯಲ್ಲಿ ಇರುತ್ತದೆ. ಈ ಹಿಂದೆ 1963 ರಲ್ಲಿ ಆಗಿತ್ತು. ಇಂದು ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ದೇವಸ್ಥಾನದ ಸಿಬ್ಬಂದಿಗಳು, ದೇವರ ಸೇವೆ ಮಾಡುವವರು, ಅರ್ಚಕರು, ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಸಾಕ್ಷಿಯಾದರು.
ಇದನ್ನೂ ಓದಿ: ಪೀಠವೇರಿದ ಮೇಲೂ ನಿಲ್ಲದ ಓದು; ಎಂಎ ಓದಿ 6 ಚಿನ್ನದ ಪದಕ ಪಡೆದ ಹಾಸನದ ಯಸಳೂರು ತೆಂಕಲಗೂಡು ಸ್ವಾಮೀಜಿ
ಮಹದೇಶ್ವರ ಬೆಟ್ಟದ ಮಠಕ್ಕೆ ನೂತನ ಸ್ವಾಮೀಜಿ, ಬ್ರಾಹ್ಮಿ ಮುಹೂರ್ತದಲ್ಲಿ ಪಟ್ಟಾಭಿಷೇಕ
Published On - 9:48 am, Wed, 17 November 21