ವಾಲ್ಮೀಕಿ ಜಾತ್ರೆಗೆ ಈ ಬಾರಿ ನಟ ಕಿಚ್ಚ ಸುದೀಪ್ ಗೆ ಆಹ್ವಾನ ( invitation) ನೀಡಿಲ್ಲ. ಕಾರಣ ಪ್ರತಿ ವಾಲ್ಮೀಕಿ ಜಾತ್ರೆಯಲ್ಲಿ ಸುದೀಪ್ ಬಂದರೂ ಗದ್ದಲ, ಬಾರದಿದ್ದರೂ ಗದ್ದಲವೇ! ಹಾಗಾಗಿ ಈ ಬಾರಿ ವಾಲ್ಮೀಕಿ ಸಮುದಾಯದ ನಾಯಕ ನಟ ಸುದೀಪ್ (Actor kiccha Sudeep) ಗೆ ವಾಲ್ಮೀಕಿ ಜಾತ್ರೆಗೆ ಆಹ್ವಾನ ನೀಡದಿರಲು ನಿರ್ಧಾರ ಮಾಡಲಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಫೆಬ್ರವರಿ 8, 9ಕ್ಕೆ ವಾಲ್ಮೀಕಿ ಜಾತ್ರೆ (Valmiki jatre, Harihar) ನಡೆಯುತ್ತದೆ. ವಾಲ್ಮೀಕಿ ಮಠದಲ್ಲಿ ಎರಡು ದಿನಗಳ ಕಾಲ ನಡೆಯುವ ವಾಲ್ಮೀಕಿ ಜಾತ್ರೆಗೆ ಮಠ ಸಜ್ಜಾಗುತ್ತಿದೆ. ಇಲ್ಲಿದೆ ನೋಡಿ ವಾಲ್ಮೀಕಿ ಜಾತ್ರೆ ಸಚಿತ್ರ.
ಮತ್ತೆ ಬಂದಿದೆ ವಾಲ್ಮೀಕಿ ಜಾತ್ರೆ. ಇದೇ 8 ಮತ್ತು 9 ರಂದು ಎರಡು ದಿನಗಳ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ಜಾತ್ರೆ ನಡೆಯಲಿದೆ. ಹಿಂದಿನ ಜಾತ್ರೆಯಲ್ಲಿ ನಟ ಸುದೀಪ್ ಬಂದಿದ್ದರು. ಹೀಗೆ ಬಂದ ನಟನನ್ನ ನೋಡಲು ನೂಕುನುಗ್ಗಲು. ಜಾತ್ರೆಯಲ್ಲಿ ಗದ್ದಲ. ಕಳೆದ ಜಾತ್ರೆಗೆ ನಟ ಸುದೀಪ್ ಬಂದಿರಲಿಲ್ಲ. ಬರುತ್ತಾರಾ ಬರುತ್ತಾರೆ ಎಂಬ ಹೇಳಿಕೆಯಲ್ಲಿ ಜಾತ್ರೆ ಮುಕ್ತಾಯವಾಗಿತ್ತು. ವಾಲ್ಮೀಕಿ ಸಮಾಜದ ನಟ ಸುದೀಪ್ ನೋಡಲು ಜನ ಸಾಗರವೇ ಸೇರುತ್ತದೆ. ಬಂದಾಗ ಜಾತ್ರೆಯಲ್ಲಿ ಆಗುತ್ತಿರುವ ಗಲಾಟೆ ಗೊಂದಲಗಳಿಂದ ಸುದೀಪ್ ಕರೆಸದಿರಲು ಜಾತ್ರಾ ಕಮಿಟಿ ನಿರ್ಧಾರ ಮಾಡಿದೆ.
ಕಳೆದ ಬಾರಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಬರುತ್ತಾರೆ ಅಂತ ಹೇಳಲಾಗಿತ್ತು ಕೊನೆಗೆ ಸುದೀಪ್ ಬರಲ್ಲ ಎಂದು ಹೇಳುತಿದ್ದಂತೆ ಅಭಿಮಾನಿಗಳು ಚೇರ್ ಗಳ ಮುರಿದು ಆಕ್ರೋಶ ಹೊರ ಹಾಕಿದ್ದರು. ಈ ಹಿಂದೆ ಒಮ್ಮೆ ಸುದೀಪ್ ಬರುತಿದ್ದಂತೆ ಅಭಿಮಾನಿಗಳು ವೇದಿಕೆಗೆ ನುಗ್ಗಿ ಬಂದಿದ್ದರು. ಆಗ ಅಲ್ಲಿದ್ದ ಹಿರಿಯರು ಮಕ್ಕಳಿಗೆ ಗಾಯ ಕೂಡ ಆಗಿದ್ದವು. ಈ ಎಲ್ಲ ಗೊಂದಲಗಳಿಂದ ನಟ ಸುದೀಪ್ ಕರೆಸದಿರಲು ವಾಲ್ಮೀಕಿ ಜಾತ್ರ ಸಮಿತಿ ನಿರ್ಧರಿಸಿದೆ. ಅಚ್ಚುಕಟ್ಟಾಗಿ ಜಾತ್ರೆ ನಡೆಸುವ ಸಲುವಾಗಿ ಸುದೀಪ್ ರನ್ನು ಕರೆಸದಿರಲು ತೀರ್ಮಾನಿಸಲಾಗಿದೆ ಎಂದು ಪ್ರಸನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ ರಾಜನಹಳ್ಳಿ, ಹೇಳಿದ್ದಾರೆ.
Also Read: ಕಿಚ್ಚ ಸುದೀಪ್ ಎಷ್ಟು ಸ್ವೀಟ್ ನೋಡಿ; ಅವರು ಇಷ್ಟ ಆಗೋದೇ ಈ ಕಾರಣಕ್ಕೆ..
ಎಂಟರಂದು ಬೆಳಿಗ್ಗೆ ಕುಂಬ ಮೇಳ. ರಾಜ್ಯದ ಬಹುತೇಕ ಕಡೆಯಿಂದ ಲಕ್ಷಾಂತರ ಜನರ ಆಗಮನ. ಮಹಿಳಾ ಗೋಷ್ಠಿ ಹಾಗೂ ನೌಕರರ ಗೋಷ್ಠಿಗಳು. ಎಂಟರಂದು ಧರ್ಮ ಸಭೆ – ಐವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಧರ್ಮ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ನಂತರ ಬಹಿರಂಗ ಸಭೆಗೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಗಳಾದ ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಪ್ರತಿ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಚಂದ್ರಶೇಖರ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ