ಕಾರಗೃಹದಲ್ಲಿ ಗಾಂಜಾ, ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆ ಪ್ರಕರಣ; ದಾವಣಗೆರೆ ಎಸ್ಪಿ ಹೇಳಿದ್ದಿಷ್ಟು
ಚೀಫ್ ಜೈಲ್ ಸೂಪರಿಡೆಂಟ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಕಾರಗೃಹಕ್ಕೆ ಆಕಸ್ಮಿಕ ಭೇಟಿ ವೇಳೆ ಕಾರಗೃಹದಲ್ಲಿ ಗಾಂಜಾ, ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆ, ಫೆ.06: ಕಾರಗೃಹದಲ್ಲಿ ಗಾಂಜಾ, ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದಾವಣಗೆರೆ ಎಸ್ಪಿ(Davangere SP) ಉಮಾ ಪ್ರಶಾಂತ್, ‘ ಜೈಲ್ ಆಫೀಸ್ನಲ್ಲಿದ್ದ ಪುಸ್ತಕದಲ್ಲಿ 3.5 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ವಿರುದ್ಧ ಜೊತೆಗೆ ಜೈಲು ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧವೂ ದೂರು ದಾಖಲಾಗಿದೆ. ಈ ಕುರಿತು ತನಿಖೆ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ. 2 ಗುಂಪುಗಳ ಗಲಾಟೆಗೂ ಇದಕ್ಕೂ ಸಂಬಂಧ ಕಂಡು ಬರುತ್ತಿಲ್ಲ. ಆ ಗಲಾಟೆ ಕುರಿತು ಈಗಾಗಲೇ ಕೇಸ್ ದಾಖಲಾಗಿದೆ ಎಂದರು.
ಮೈಸೂರು ಕಾರಾಗೃಹದಲ್ಲಿ ಪೊಲೀಸ್ ಅಧಿಕಾರಿಗಳ ದಿಢೀರ್ ದಾಳಿ
ಮೈಸೂರು: ಕಾರಾಗೃಹದಲ್ಲಿ ಪೊಲೀಸ್ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಪೊಲೀಸರ ತಪಾಸಣೆ ವೇಳೆ ಚಾಕು, ನಗದು, ಮೊಬೈಲ್ ಚಾರ್ಜರ್ಗಳು ಪತ್ತೆಯಾಗಿದೆ. ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸೂಚನೆ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ, ಎಸಿಪಿ, ಪಿಐ, ಪಿಎಸ್ಐಗಳು ಹಾಗೂ ಶ್ವಾನದಳದಿಂದ ಜೈಲಿನಲ್ಲಿ ಶೋಧ ನಡೆಸಲಾಗಿತ್ತು. ಈ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಧಾರವಾಡ ಕಾರಾಗೃಹದಲ್ಲಿ ಕೈದಿ ಮತ್ತು ಜೈಲು ಸಿಬ್ಬಂದಿ ನಡುವೆ ಹೊಡೆದಾಟ
ಕಳೆದ ಅಕ್ಟೋಬರ್ನಲ್ಲಿ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿ ಹಾಗೂ ಜೈಲು ಸಿಬ್ಬಂದಿ ನಡುವೆ ಹೊಡೆದಾಟ ನಡೆದಿತ್ತು. ಜೈಲು ಸಿಬ್ಬಂದಿ ಮೋಹನ ಸಿದ್ದಪ್ಪ ಬಡಿಗೇರ ಹಾಗೂ ಅನೇಕ ದಿನಗಳಿಂದ ಕಾರಗೃಹದಲ್ಲಿ ಕೈದಿಯಾಗಿರುವ ಪ್ರಶಾಂತ ಅಲಿಯಾಸ್ ಪಾಚು ಗಾಯಗೊಂಡಿದ್ದರು. ಜೈಲಿನಲ್ಲಿ ಚಾಕು ಇಲ್ಲದಿರುವ ಹಿನ್ನೆಲೆ ಬಾಚಣಿಗೆಯನ್ನೇ ಚಾಕೂವಿನಂತೆ ಬಳಸಿ ಸಿಬ್ಬಂದಿ ಮೇಲೆ ಕೈದಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ