ಮಂಗಳೂರು, ಮೈಸೂರು ಬಳಿಕ ದಾವಣಗೆರೆಯಲ್ಲೊಬ್ಬ ಕುಖ್ಯಾತ ರೌಡಿಶೀಟರನ ಕೊಲೆ: ಆರೋಪಿಗಳಿಗೆ ಬಲೆ ಬೀಸಿದ ಪೊಲೀಸ್​

ದಾವಣಗೆರೆಯಲ್ಲಿ ಕುಖ್ಯಾತ ರೌಡಿಶೀಟರ್ ಸಂತೋಷ್ ಅಲಿಯಾಸ್‌ ಕಣುಮಾನನ್ನು 8 ಯುವಕರು ಹತ್ಯೆ ಮಾಡಿದ್ದಾರೆ. ಕೊಲೆ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕಣುಮಾ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಘಟನೆಯಿಂದ ದಾವಣಗೆರೆ ಜನರು ಬೆಚ್ಚಿಬಿದ್ದಿದ್ದಾರೆ.

ಮಂಗಳೂರು, ಮೈಸೂರು ಬಳಿಕ ದಾವಣಗೆರೆಯಲ್ಲೊಬ್ಬ ಕುಖ್ಯಾತ ರೌಡಿಶೀಟರನ ಕೊಲೆ: ಆರೋಪಿಗಳಿಗೆ ಬಲೆ ಬೀಸಿದ ಪೊಲೀಸ್​
ರೌಡಿಶೀಟರ್ ಸಂತೋಷ್ ಅಲಿಯಾಸ್ ಕಣುಮಾ
Updated By: ಗಂಗಾಧರ​ ಬ. ಸಾಬೋಜಿ

Updated on: May 06, 2025 | 3:05 PM

ದಾವಣಗೆರೆ, ಮೇ 06: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ, ರೌಡಿಶೀಟರ್ (Rowdy-Sheeter) ಸುಹಾಸ್ ಶೆಟ್ಟಿ ಹತ್ಯೆ ಮತ್ತು ಮೈಸೂರಿನಲ್ಲಿ ರೌಡಿಶೀಟರ್ ಕಾರ್ತಿಕ್ ಹತ್ಯೆ​ ಬೆನ್ನಲ್ಲೇ ಇತ್ತ ದಾವಣಗೆರೆಯಲ್ಲಿ (Davangere) ಕೂಡ ಕುಖ್ಯಾತ ರೌಡಿಶೀಟರ್ ಸಂತೋಷ್ ಅಲಿಯಾಸ್ ಕಣುಮಾ ನನ್ನು ಹತ್ಯೆ ಮಾಡಲಾಗಿದೆ. ನಿನ್ನೆ ಸಂಜೆ 8 ಜನ ಯುವಕರ ಗುಂಪೊಂದು ನಗರದ ಹದಡಿ ರಸ್ತೆಯ ಸೋಮೇಶ್ವರ ಆಸ್ಪತ್ರೆ ಎದುರಿಗಿರುವ ಕ್ಲಬ್​​ನಲ್ಲಿ ರೌಡಿಶೀಟರ್​ನ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದವರೇ ವಿಡಿಯೋ ಕೂಡ ಮಾಡಿದ್ದಾರೆ. ಸದ್ಯ ಡಿವೈಎಸ್​​ಪಿ ಶರಣಬಸವೇಶ್ವರ ನೇತ್ರತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ದಾವಣಗೆರೆಯಲ್ಲಿ ಕುಖ್ಯಾತ ರೌಡಿಶೀಟರ್ ಸಂತೋಷ್ ಅಲಿಯಾಸ್ ಕಣುಮಾ ಹೆಸರು ಹೇಳಿದರೆ ಸಾಕು ಕೆಲ ಜನರಿಗೆ ನಡುಕ ಹುಟ್ಟುತ್ತಿತ್ತು. ವಿಶೇಷವಾಗಿ ಯಾವುದಾದರೂ ಜಗಳ ಇರುವ ಜಾಗಾಗಳಿದ್ದರೇ ಬುದ್ಧಿವಂತರು ಇತನಿಗೆ ಹೇಳುತ್ತಿದ್ದರು. ಹೀಗೆ ಕೊಲೆ ಸುಲಿಗೆ ಸೇರಿದಂತೆ ಹತ್ತಾರು ಪ್ರಕರಣಗಳು ಆತನ ಮೇಲಿದ್ದವು. ಇಂತಹ ಕುಖ್ಯಾತ ರೌಡಿಶೀಟರ್​ ಇದೀಗ ಕೊಲೆ ಆಗಿದ್ದಾನೆ.

ಇದನ್ನೂ ಓದಿ: ರಾಯಚೂರು: ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್​​ ಶವವಾಗಿ ಪತ್ತೆ, ದೂರು ನೀಡಿದ ಪತ್ನಿ

ಇದನ್ನೂ ಓದಿ
ಲವ್ವರ್​ ಜತೆ ಪತ್ನಿ ಚಕ್ಕಂದ; ಕಣ್ಣಾರೆ ಕಂಡ ಪತಿ ಮಾಡಿದ್ದೇನು ಗೊತ್ತಾ?
ಪಲ್ಯ‌, ಸಾಂಬಾರ್ ಸರಿ ಮಾಡಲ್ಲ ಎಂದು ಹೆಂಡ್ತಿಯನ್ನೇ ಕೊಂದ ಪತಿ
ವೇಷ ಬದಲಿಸಿಕೊಂಡು ಬಂದು ಅತ್ತೆಯ ಕಣ್ಣಿಗೆ ಖಾರದಪುಡಿ ಎರಚಿ ಒಡವೆ ದೋಚಿದ ಅಳಿಯ
ಅಪ್ರಾಪ್ತೆಯನ್ನ ಕರೆದೊಯ್ದು ಅತ್ಯಾಚಾರ ಎಸಗಿದ ಇಬ್ಬರು ಸ್ನೇಹಿತರು!

ಸಂತೋಷ ಅಲಿಯಾಸ್ ಕಣುಮಾ ದಾವಣಗೆರೆಯ ಕುಖ್ಯಾತ ರೌಡಿಶೀಟರ್​ಗಳಲ್ಲಿ ಇತ ಒಬ್ಬ. ಒಂದು ರೀತಿಯಲ್ಲಿ ನೋಡಲು ಕಟ್ಟು ಮಸ್ತಾದ ಆಳು. ಎದುರು ನಾಲ್ಕು ಜನ ಬಂದ್ರು ಮುಗಿಸಿ ಹಾಕಿ ಬಿಡುತ್ತೇನೆ ಎಂಬ ಹುಚ್ಚು ಸಾಹಸದ ವ್ಯಕ್ತಿ. ಇಂತಹ ಕುಖ್ಯಾತ ರೌಡಿಶೀಟರ್​ನ್ನು ಮುಖದ ಮೇಲೆ ಮೀಸೆ ಬಾರದ ಐದಾರು ಯುವಕರು ಸೇರಿ ಕೊಲೆ ಮಾಡಿದ್ದಾರೆ.

ಕೇವಲ 30 ಸೆಕೆಂಡ್​​ನಲ್ಲಿ ಕೊಲೆ

ದಾವಣಗೆರೆ ನಗರದ ಹದಡಿ ರಸ್ತೆಯ ಸೋಮೇಶ್ವರ ಆಸ್ಪತ್ರೆಯ ಎದುರಿಗೆ ಇರುವ ಇಸ್ಪೀಟ್ ಕ್ಲಬ್​ನಲ್ಲಿ ಕೊಲೆ ಮಾಡಲಾಗಿದೆ. ವೈರಲ್​ ಆದ ವಿಡಿಯೋದಲ್ಲಿ ಮೊದಲು ಬಂದು ಮಾತಾಡಿದ್ದಾರೆ. ಆ ಮೇಲೆ ಅವರ ಪ್ಲಾನ್​​ ಪ್ರಕಾರ ಕೆಳಕ್ಕೆ ಹಾಕಿ ನೇರವಾಗಿ ಕೋಣ ಕಡಿಯುವ ಮಚ್ಚಿನಿಂದ ಹೊಡೆದಿದ್ದಾರೆ. ತಲೆ, ಮುಖದ ಭಾಗಕ್ಕೆ ನಾಲ್ಕು ಏಟು ಹಾಕಿದ್ದಾರೆ. ಸತ್ತಿದ್ದಾನೆ ಎಂದು ಖಚಿತ ಪಡಿಸಿಕೊಳ್ಳಲು ಹೊಟ್ಟೆಗೆ ಚಾಕು ಹಾಕಿದ್ದಾರೆ. ಕೇವಲ 30 ಸೆಕೆಂಡ್​​ನಲ್ಲಿ ಮಾಡಿ ಮುಗಿಸಿದ್ದಾರೆ.

ಕುಖ್ಯಾತ ರೌಡಿಶೀಟರ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಜನ ಸಾಗರವೇ ಸೇರಿತ್ತು. ಹದಡಿ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಕೊಲೆ ಮಾಡಿದವರು ಸ್ಥಳೀಯರಾಗಿದ್ದು, ಅದರಲ್ಲೂ ಆತನ ಜೊತೆಗಿರುವವ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಈ ಕಣುಮಾ ಮೊದಲು ಬಾಲ್ಯದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ. ನಂತರ ಹಂದಿ ಸಾಗಾಣಿಕೆ ಶುರು ಮಾಡಿದ್ದ. ಆಗಲೇ ಕೈಗೆ ಸ್ವಲ್ಪ ದುಡ್ಡು ಬಂದ ಹಿನ್ನೆಲೆ ರೌಡಿಸಂ ಗೆ ಕೈ ಹಾಕಿದ್ದ. ಬೆಂಗಳೂರಿನ ಕೆಲ ರೌಡಿಶೀಟರ್​ಗಳ ಜೊತೆಗೆ ಇತನ ಸಂಪರ್ಕವಿತ್ತು. ಈ ಹಿಂದೆ ಓರ್ವ ರೌಡಿಶೀಟರ್ ಮುಗಿಸಲು ಬೆಂಗಳೂರಿನ ಗ್ಯಾಂಗ್ ಕರೆಸಿ ಸಿಕ್ಕು ಬಿದಿದ್ದ. ಮೇಲಾಗಿ ಕೆಲ ವರ್ಷಗಳಿಂದ ಕಾಂಗ್ರೆಸ್​ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಆತನ ಅತ್ತೆಯನ್ನ ಕಾಂಗ್ರೆಸ್​ನಿಂದ ಕಾರ್ಪೊರೇಟರ್ ಮಾಡಿದ್ದ. ಇಂತಹ ವ್ಯಕ್ತಿ ಸಣ್ಣ ಹುಡುಗರ ಕೈಗೆ ಸಿಕ್ಕು ಹತನಾಗಿದ್ದಾನೆ.

ಇದನ್ನೂ ಓದಿ: ಕಣ್ಮುಚ್ಚಿ ಬಿಡುವಷ್ಟರಲ್ಲೇ ಕೊಚ್ವಿ ಕೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್ ಮಾಡಿ ವಿಕೃತಿ

ಪೂರ್ವ ವಲಯ ಐಜಿಪಿ ಡಾ. ಬಿ.ಆರ್ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಯ ತಜ್ಞರು, ಶ್ವಾನ ದಳ ಸೇರಿದಂತೆ ವಿವಿಧ ತಂಡಗಳು ಬಂದು ಪರಿಶೀಲನೆ ಮಾಡಿದ್ದಾರೆ. ಈ ರೌಡಿಶೀಟರ್ ಕೊಲೆಯ ವಿಚಾರ ಇಷ್ಟಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇನ್ನಷ್ಟು ಪ್ರತೀಕಾರ ಶುರುವಾಗಲಿರುವ ಸಂಶಯಗಳು ವ್ಯಕ್ತವಾಗಿವೆ. ಆದಷ್ಟು ಬೇಗ ಪೊಲೀಸರು ಆರೋಪಿಗಳನ್ನ ಬಂಧಿಸಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.