ಹೆದ್ದಾರಿ ಪಕ್ಕದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ; 25 ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣ ವಶ
ಅದೊಂದು ನಟೋರಿಯಸ್ ಗ್ಯಾಂಗ್. ಐದಾರು ಜನ ಒಂದು ಗ್ಯಾಂಗ್ ಕಟ್ಟಿಕೊಂಡು ಲಕ್ಷಾಂತರ ರೂಪಾಯಿಯನ್ನ ಏಕ ಕಾಲಕ್ಕೆ ಕೊಳ್ಳೆ ಹೊಡೆಯುತ್ತಾರೆ. ವಿಶೇಷವಾಗಿ ಹೆದ್ದಾರಿಗಳ ಪಕ್ಕದಲ್ಲಿ ಮನೆ ಮಾಡಿಕೊಂಡವರನ್ನೇ ಟಾರ್ಗೆಟ್ ಮಾಡಿ, ಮನೆಯಲ್ಲಿ ಯಾರು ಇಲ್ಲದ್ದನ್ನ ಖಚಿತಪಡಿಸಿಕೊಂಡು ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ: ಜೂನ್ 4ರಂದು ದಾವಣಗೆರೆ(Davanagere)ಯ ಹೊರವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ(Pune Bangalore National Highway) ಗೆ ಹೊಂದಿಕೊಂಡ ಡಾಲರ್ಸ್ ಕಾಲೋನಿಯ ಡಾ. ತಿಪ್ಪೇಸ್ವಾಮಿ ಎಂಬ ವೈದ್ಯ ರೊಬ್ಬರ ಮನೆ ಬೀಗ ಮುರಿದು ಸುಮಾರು 31ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಕಳ್ಳತನ(Robbery) ಮಾಡಿದ್ದರು. ಈ ಬಗ್ಗೆ ವಿದ್ಯಾನಗರ ಪೊಲೀಸ್ ವೈದ್ಯ ಡಾ. ತಿಪ್ಪೇಸ್ವಾಮಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದು ಅವರು ಮನೆಗೆ ಬೀಗ ಹಾಕಿ, ತಮ್ಮ ಸಂಬಂಧಿಕರ ಮದುವೆಗೆ ಹೋಗಿದ್ದರು. ಇದೇ ಪ್ರಕರಣದ ಪತ್ತೆಗೆ ಪೊಲೀಸರು ಬಿದ್ದಾಗ ಹೆದ್ದಾರಿ ಪಕ್ಕದ ಬೀಗ ಹಾಕಿದ ಮನೆಗಳನ್ನ ಟಾರ್ಗೇಟ್ ಮಾಡುತ್ತಿದ್ದ ಆರು ಜನರ ಗ್ಯಾಂಗ್ ಪತ್ತೆಯಾಗಿದೆ. ಹೌದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಗೋವಿಂದ ಬಡಾವಣೆ ನಿವಾಸಿಗಳಾದ ಮಾರುತಿ, ಶಿವರಾಜ್ ಲಮಾಣಿ, ಸುನೀಲ್ ಲಮಾಣಿ, ಮನೋಜ್ ಲಮಾಣಿ, ಅಭಿಷೇಕ ಹಾಗೂ ಮಹಾಂತೇಶ ಬಂಧಿತ ಆರೋಪಿಗಳು. ಇವರಿಂದ 25.75 ಲಕ್ಷ ಮೌಲ್ಯದ ನಗದು ಸಹಿತ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇನ್ನು ಈ ಖತರ್ನಾಕ್ ಗ್ಯಾಂಗ್ ಹೆಸರು ಯಂಗ್ ಸ್ಟಾರ್ ಗ್ಯಾಂಗ್ ಎಂದು ಇಟ್ಟುಕೊಂಡಿದ್ದಾರೆ. ಈ ಗ್ಯಾಂಗ್ಮೂರು ನಾಲ್ಕು ದಿನ ಹೆದ್ದಾರಿ ಪಕ್ಕದ ಜನ ವಸತಿ ಪ್ರದೇಶದಲ್ಲಿ ಯಾರಿಗೂ ಅನುಮಾನ ಬರದಂತೆ ವಿದ್ಯುತ್ ತಂತಿ ಅಥವಾ ಬೈಕ್ನ ಹಿಂದೆ ಮಹಿಳೆಯರನ್ನ ಕುರಿಸಿಕೊಂಡು ಸುತ್ತಾಡಿ ಯಾರು ಎಲ್ಲಿಗೆ ಹೋಗುತ್ತಾರೆ. ಯಾರ ಮನೆ ಬೀಗ ಹಾಕಿದೆ ಎಂಬ ಮಾಹಿತಿ ಪಡೆದು ಗ್ಯಾಂಗ್ಗೆ ಮಾಹಿತಿ ರವಾನಿಸುತ್ತಾರೆ. ಬಳಿಕ ಗ್ಯಾಂಗ್ ತಡ ರಾತ್ರಿ ಬಂದು ದಾಳಿ ಮಾಡಿ, ಜೊತೆಗೆ ಒಂಟಿ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಹೋಗುವ ಪ್ರಕರಣಗಳಲ್ಲಿ ಇವರ ಕೈಚಳಕ ಇದೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
ಇದನ್ನೂ ಓದಿ:ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಕೆಜಿಎಫ್ ಗ್ಯಾಂಗ್ ಬಂಧನ; ಚಿನ್ನಾಭರಣ ಸೇರಿ 1.5 ಲಕ್ಷ ಹಣ ಜಪ್ತಿ
ಹೀಗೆ ಬೆಂಗಳೂರಿನಿಂದ ರಾಜ್ಯದ ಗಡಿ ದಾಟುವ ತನಕ ಅಂದ್ರೆ, ಬೆಂಗಳೂರಿನಿಂದ ಬೆಳಗಾವಿ ತನಕ ಹೆದ್ದಾರಿ ಪಕ್ಕದ ಮನೆಗಳ ಮೇಲೆ ಇವರು ಪೊಲೀಸರಿಗಿಂತ ಹೆಚ್ಚಾಗಿ ನಿಗಾ ಇಟ್ಟಿರುತ್ತಾರೆ. ಕಾರಣ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇವರ ಪ್ರವೇಶ ಆಗುತ್ತದೆ. ಜೊತೆಗೆ ಇವರು ಎಲ್ಲಿಯೇ ಕಳ್ಳತನ ಮಾಡಿದ್ರು, ಸಿಸಿ ಕ್ಯಾಮರಾ ಡಿವಿಆರ್ ಮಾತ್ರ ಬಿಟ್ಟು ಹೋಗುತ್ತಿರಲಿಲ್ಲ. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್ ಇದೀಗ ಅಂದರ್ ಆಗಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ