ದಾವಣಗೆರೆ: ಮದುವೆಯಾಗಲ್ಲ ಅಂತ ಹಠ ಹಿಡಿದ ಯುವತಿ ಗ್ರಾಮಕ್ಕೆ ಬಂತು ಬಸ್; ಗ್ರಾಮಸ್ಥರು ಫುಲ್ ಖುಷ್

| Updated By: sandhya thejappa

Updated on: Sep 23, 2021 | 9:30 AM

ಕಳೆದ ಒಂದು ವಾರದ ಹಿಂದೆ ಪಿಎಂ ಹಾಗೂ ಸಿಎಂಗೆ ಪತ್ರ ಬರೆದು ಗಮನ ಸೆಳೆದ ಬಿಂದು ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿತ್ತು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಸ್ವತಹ ಗ್ರಾಮಕ್ಕೆ ನಡೆದುಕೊಂಡು ಹೋಗಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದರು.

ದಾವಣಗೆರೆ: ಮದುವೆಯಾಗಲ್ಲ ಅಂತ ಹಠ ಹಿಡಿದ ಯುವತಿ ಗ್ರಾಮಕ್ಕೆ ಬಂತು ಬಸ್; ಗ್ರಾಮಸ್ಥರು ಫುಲ್ ಖುಷ್
ರಸ್ತೆ ದುರಸ್ತಿ ಆಗುತ್ತಿದೆ, ಗ್ರಾಮಕ್ಕೆ ಬಸ್​ ಸಂಚಾರ ಆರಂಭವಾಗಿದೆ
Follow us on

ದಾವಣಗೆರೆ: ನಮ್ಮೂರಿಗೆ ರಸ್ತೆ ಇಲ್ಲಾ, ಬಸ್ಸು ಇಲ್ಲಾ. ನಮ್ಮೂರಿಗೆ ಯಾರು ಹೆಣ್ಣು ಕೊಡಲ್ಲ, ಯಾರು ಹೆಣ್ಣನ್ನು ತೆಗೆದುಕೊಳ್ಳಲ್ಲ. ನಮ್ಮೂರಿಗೆ ರಸ್ತೆ ಆಗುವ ತನಕ ನಾನು ಮದುವೆನೇ ಆಗಲ್ಲ ಅಂತ ಹಠ ಹಿಡಿದಿದ್ದ ಯುವತಿಯ ಆಸೆ ಕೊನೆಗೂ ಈಡೇರಿದೆ. ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ರಾಂಪುರ ಗ್ರಾಮದ ಬಿಂದು ಎಂಬ ಯುವತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿಭಿನ್ನ ಹೋರಾಟಕ್ಕೆ ಮುಂದಾಗಿದ್ದಳು. ಹೀಗೆ ಹಠಕ್ಕೆ ಬಿದ್ದ ಯುವತಿ ಕೊನೆಗೂ ಅಂದುಕೊಂಡಿದ್ದು ಸಾಧಿಸಿದ್ದಾಳೆ.

ಕಳೆದ ಒಂದು ವಾರದ ಹಿಂದೆ ಪಿಎಂ ಹಾಗೂ ಸಿಎಂಗೆ ಪತ್ರ ಬರೆದು ಗಮನ ಸೆಳೆದ ಬಿಂದು ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿತ್ತು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಸ್ವತಹ ಗ್ರಾಮಕ್ಕೆ ನಡೆದುಕೊಂಡು ಹೋಗಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದರು. ಜೊತೆಗೆ ರಸ್ತೆ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ನೀಡಿದ ಭರವಸೆಯಂತೆ ಮರುದಿನವೇ ರಸ್ತೆ ಕಾಮಗಾರಿ ಆರಂಭವಾಗಿತ್ತು.

ರಸ್ತೆ ದುರಸ್ತಿ ಆಗಿದೆ. ಇನ್ನೂ ಡಾಂಬರ್ ಆಗಬೇಕಿದೆ. ಆದರೆ ಈಗ ಮಾಡಿದ ದುರಸ್ತಿಯಿಂದ ಬಸ್ ಸಂಚಾರ ಆರಂಭಿಸಬಹುದು ಎಂದು ಅರಿತ ಜಿಲ್ಲಾಧಿಕಾರಿ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಹೊತ್ತು ರಾಂಪುರ ಗ್ರಾಮದಿಂದ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ಬಸ್ ಸಂಚಾರ ಶುರುವಾಗಿದ್ದು, ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ

ಹಾಲು, ತಿಂಡಿಯ ಜೊತೆ ಆಲ್ಕೋ ಹಾಲ್ ಮಾರಾಟ; ಮದ್ಯ ಮಾರಾಟ ಮಾಡುತ್ತಿದ್ದವನಿಗೆ ತರಾಟೆಗೆ ತೆಗೆದುಕೊಂಡ ಮಹಿಳೆಯರು

‘ನಾನು ದುರ್ಬಲರು..ಬಡವರ ತಂದೆ‘-ರಾಕೇಶ್​ ಟಿಕಾಯತ್​ಗೆ ತಿರುಗೇಟು ನೀಡಿದ ಅಸಾದುದ್ದೀನ್​ ಓವೈಸಿ

(Bus start to the village has begun at Davanagere)