ಹರಿಹರ ರಸ್ತೆ ಬದಿಯಲ್ಲಿ ದರ್ಗಾ: 11 ವರ್ಷ ಬಳಿಕ ಬಗೆಹರಿಯಿತು ರಸ್ತೆ ಅಗಲೀಕರಣ ವಿವಾದ, ಶುರುವಾಯ್ತು ರಸ್ತೆ ಕಾಮಗಾರಿ
ರಸ್ತೆಯ ಬದಿಯಲ್ಲಿ ದರ್ಗಾ ಸಮ್ಮುಖದಲ್ಲಿ ಆರೋಪ ಪ್ರತ್ಯಾರೋಪ, ವಾದ ವಿವಾದ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂವಿ ವೆಂಕಟೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಪಿಎನ್ ಲೋಕೇಶ್, ಎಸ್ಪಿ ಉಮಾ ಪ್ರಶಾಂತ ಸೇರಿ ದಿಟ್ಟ ನಿರ್ಧಾರ ತೆಗೆದುಕೊಂಡ ಹಿನ್ನೆಲೆ ವಿವಾದ ಸರಳವಾಗಿ ಮುಕ್ತಾಯವಾಗಿದೆ. ಹರಿಹರದ ಜನರಂತೂ ನಿಟ್ಟುಸಿರುಬಿಟ್ಟಿದ್ದಾರೆ.
ದಿನ ಬೆಳಗಾದ್ರೆ ಜಗಳ. ಇನ್ನೇನು ಘರ್ಷಣೆಗಳೇ ಸಂಭವಿಸಿಬಿಡುತ್ತದೆ ಎಂಬ ಭಯ. ವಾಹನ ಚಾಲಕಿಗೆ ಹಿಂಸೆ. ಹೀಗೆ ಹನ್ನೊಂದು ವರ್ಷದಿಂದ ನಡೆಯುತ್ತಿದ್ದ ವಿದ್ಯಮಾನ ಅದು. ಇಂತಹ ಸ್ಥಳದಲ್ಲಿ ಖಾಕಿ ಸರ್ಪಗಾವಲು. ಜೆಸಿಬಿ ವಾಹನಗಳ ಘರ್ಜನೆ ಶುರುವಾಗಿತ್ತು. ಇನ್ನೇನು ನೂರಾರು ಜನ ಸೇರುತ್ತಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂಬ ಭೀತಿ ಇತ್ತು. ಆದ್ರೆ ಯಾರು ಕೂಡಾ ಇತ್ತ ತಲೆಯೇ ಹಾಕಲಿಲ್ಲ. ಬದಲಿಗೆ ಹನ್ನೊಂದು ವರ್ಷದ ಬಳಿಕ ಹರಿಹರದ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟರು. 11 ವರ್ಷದ ಹರಸಾಹಸ ಸ್ಟೋರಿ ಇಲ್ಲಿದೆ (Dispute) ನೋಡಿ. ಕೊನೆಗೂ ಬಗೆಹರಿದ ರಸ್ತೆ ಅಗಲೀಕರಣ ವಿವಾದ. ಹನ್ನೊಂದು ವರ್ಷಗಳ ಬಳಿಕ ಶುರುವಾದ ರಸ್ತೆ ಕಾಮಗಾರಿ. ಜೆಸಿಬಿ ಯಂತ್ರಗಳ ಘರ್ಜನೆ. ಜೊತೆಗೆ ಪೊಲೀಸ್ ಬಿಗಿ ಬಂದೋಬಸ್ತ್. ಖಾಕಿ ಸರ್ಪಗಾವಲಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ. ಇದು ದಾವಣಗೆರೆ (Davanagere) ಜಿಲ್ಲೆಯ ಹರಿಹರನಗರದ ತುಂಗಭದ್ರ ಸೇತುವೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ (Harihar Road) ತಾಜಾ ವಿದ್ಯಮಾನ.
ಕೆಲ ಹೊತ್ತು ರಸ್ತೆ ಅಗಲೀಕರಣದ ವೇಳೆ ಮಾತಿನ ಚಕಮಕಿ. 50 ಅಡಿ ರಸ್ತೆ ನಿರ್ಮಿಸಲು ನಿನ್ನೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧಾರ ಆಗಿತ್ತು. ಈ ನಿರ್ಧಾರದಂತೆ ಕಾಮಗಾರಿ ಆರಂಭಿಸಬೇಕು ಎಂಬುದನ್ನ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಸಭೆಯಲ್ಲಿ ನಿರ್ಧರಿಸಿದಂತೆ ರಸ್ತೆ ಅಗಲೀಕರಣ ಆರಂಭಗೊಂಡಿದೆ. ಹನ್ನೊಂದು ವರ್ಷಗಳ ಬಳಿಕ ಶುರುವಾದ ಕಾಮಗಾರಿ ಅದು. ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಹರಿಹರದ ಜನ. ನಿಯಮಾನುಸಾರ ಆ ಕಡೆ 30 ಇಡಿ ಈಗ ಕಡೆ 20 ಹೀಗೆ 60 ಅಡಿ ರಸ್ತೆ ಆಗಬೇಕಿತ್ತು. ಅಲ್ಲೊಂದು ದರ್ಗಾ ಇದ್ದ (Dargah) ಹಿನ್ನೆಲೆ ಗೊಂದಲಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚತ್ತುಕೊಂಡ ಜಿಲ್ಲಾಡಳಿತ ಹರಿಹರದ ಜನಪ್ರತಿನಿಧಿಗಳ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬಂದು ರಸ್ತೆ ಕಾಮಗಾರಿ ಆರಂಭಿಸಿದೆ.
ಇಲ್ಲಿ ಈ ಹಿಂದೆ ಜೆಡಿಎಸ್ ನ ಎಚ್ ಎಸ್ ಶಿವಶಂಕರ ಶಾಸಕರಾಗಿದ್ದಾಗ ಒಂದು ಸರ್ವೇ ಆಗಿತ್ತು. ಇದಾದ ಬಳಿಕ ಕಾಂಗ್ರೆಸ್ಸಿನ ರಾಮಪ್ಪ ಶಾಸಕರಾಗಿದ್ದಾಗ ಇನ್ನೊಂದು ಸರ್ವೇ ಆಗಿತ್ತು. ಈ ಸರ್ವೇಗಳಲ್ಲಿ ಹತ್ತಾರು ಭಿನ್ನಾಪ್ರಾಯಗಳು ಬಂದಿದ್ದವು. ಈ ರಸ್ತೆ ಅಗಲೀಕರಣ ವಿಚಾರದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಬಿಪಿ ಹರೀಶ್ ತೀವ್ರ ಆಕ್ರೋಶ ಗೊಂಡಿದ್ದರು.
ವಿಶೇಷ ಅಂದ್ರೆ ವಿಷಯ ಸಿಎಂ ಸಿದ್ದರಾಮಯ್ಯ ಅವರ ಬಳಿ ಸಹ ಹೋಗಿತ್ತು. ಸಿಎಂ ಅವರು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಸೂಚನೆ ನೀಡಿದ್ದರು. ರಸ್ತೆಯಲ್ಲಿ ದರ್ಗಾ ಹೋಗುತ್ತದೆ ಎಂಬ ತಪ್ಪು ಮಾಹಿತಿ ಹಬ್ಬಿತ್ತು. ಆದ್ರೆ ರಸ್ತೆ ಮಾಡಲಿ ದರ್ಗಾಕ್ಕೆ ತೊಂದರೆ ಆಗುವುದೆ ಬೇಡ ಎಂದು ಸ್ವತಹ ಶಾಸಕ ಹರೀಶ್ ಅವರೇ ಹೇಳಿದ್ದರು.
Also Read: ಮೂರು ದಿನ ನಡೆಯೋ ಉರುಸ್ ಆಚರಣೆಯನ್ನು ಇಲ್ಲಿ ಹಿಂದೂಗಳ ಹಬ್ಬವೆಂದು ಕರೆಯುತ್ತಾರೆ! ಸಹಬಾಳ್ವೆ ಅಂದ್ರೆ ಇದೇ ಅಲ್ಲವಾ?
ಹೀಗೆ ಆರೋಪ ಪ್ರತ್ಯಾರೋಪ, ವಾದ ವಿವಾದ. ಕಾಂಗ್ರೆಸ್ ನವರು ದರ್ಗಾ ಪರ ಇದ್ದಾರೆ. ಬಿಜೆಪಿ ಶಾಸಕಕ ದುರ್ಗಾ ವಿರುದ್ಧ ಇದ್ದಾರೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆ ಹತ್ತಾರು ವಿವಾದಗಳು ಹಬ್ಬಿದ್ದವು. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂವಿ ವೆಂಕಟೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಪಿಎನ್ ಲೋಕೇಶ್, ಎಸ್ಪಿ ಉಮಾ ಪ್ರಶಾಂತ ಸೇರಿ ದಿಟ್ಟ ನಿರ್ಧಾರ ತೆಗೆದುಕೊಂಡ ಹಿನ್ನೆಲೆ ವಿವಾದ ಸರಳವಾಗಿ ಮುಕ್ತಾಯವಾಗಿದೆ. ನಿಜಕ್ಕೂ ಹರಿಹರದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ