AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ಸಿನ ಬಾಗಿಲು ಬಳಿ ಇಟ್ಟ 10 ಸಾವಿರ ಮೌಲ್ಯದ ಆರೋಗ್ಯ ಕಿಟ್ ನೆಲಕ್ಕೆ; ಯುವತಿಯಿಂದ ಚಾಲಕ, ನಿರ್ವಹಕನಿಗೆ ತರಾಟೆ

ಚಾಲಕ ಹಾಗೂ ನಿರ್ವಾಹಕರ(Driver and Conductor) ಬೇಜವಾಬ್ದಾರಿ‌ಯಿಂದ ಹತ್ತು ಸಾವಿರ ರೂಪಾಯಿ ಮೌಲ್ಯದ ಆರೋಗ್ಯ ಕಿಟ್​ನ್ನು ಯುವತಿ ಕಳೆದುಕೊಂಡ ಚಿತ್ರದುರ್ಗದಿಂದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ ನಡೆದಿದೆ. ಸಕಾಲಕ್ಕೆ ಬಸ್​ ನಿಲ್ಲಿಸಿದ್ದರೇ, ಯಾವುದೇ ತೊಂದರೆ ‌ಆಗುತ್ತಿರಲಿಲ್ಲ ಎಂದು ಕಿಟ್​​ ಕಳೆದುಕೊಂಡ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Dec 12, 2023 | 2:49 PM

Share

ದಾವಣಗೆರೆ, ಡಿ.12: ಕೆಎಸ್​ಆರ್​ಟಿಸಿ ಬಸ್(KSRTC Bus)​ ಚಾಲಕ ಹಾಗೂ ನಿರ್ವಾಹಕರ(Driver and Conductor) ಬೇಜವಾಬ್ದಾರಿ‌ಯಿಂದ ಹತ್ತು ಸಾವಿರ ರೂಪಾಯಿ ಮೌಲ್ಯದ ಆರೋಗ್ಯ ಕಿಟ್​ನ್ನು ಯುವತಿ ಕಳೆದುಕೊಂಡ ಚಿತ್ರದುರ್ಗದಿಂದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ ನಡೆದಿದೆ. ಬಸ್ಸಿನ ಬಾಗಿಲು ಬಳಿ ಇಟ್ಟ ಆರೋಗ್ಯ ಕಿಟ್ ನೆಲಕ್ಕೆ ಬಿದ್ದಿದೆ. ಆದರೆ, ಚಾಲಕ ಸಕಾಲಕ್ಕೆ ಬಸ್​ ನಿಲ್ಲಿಸದೆ, ಬರೊಬ್ಬರಿ ಒಂದು ಕಿಲೋ ಮೀಟರ್ ಬಳಿಕ ನಿಲ್ಲಿಸಿದ್ದಾನೆ. ಇದರಿಂದ ಕಿಟ್​​ ಕಾಣೆಯಾಗಿದೆ ಎಂದು ಚಾಲಕ ಮತ್ತು ನಿರ್ವಹಕರ‌ನ್ನು ಕಿಟ್ ಕಳೆದುಕೊಂಡು ಯುವತಿ ತರಾಟೆಗೆ ತೆಗೆದುಕೊಂಡಿದ್ದಾಳೆ.

ಬಸ್​ ನಿಲ್ಲಿಸಿದ ಚಾಲಕ, ನಿರ್ವಾಹಕನ ವಿರುದ್ದ ಯುವತಿ ಆಕ್ರೋಶ

ಸಕಾಲಕ್ಕೆ ಬಸ್​ ನಿಲ್ಲಿಸಿದ್ದರೇ, ಯಾವುದೇ ತೊಂದರೆ ‌ಆಗುತ್ತಿರಲಿಲ್ಲ. ಆದ್ರೆ, ದೂರ ಹೋಗಿ ನಿಲ್ಲಿಸಿದ್ದರಿಂದ ಹತ್ತು ಸಾವಿರ ರೂಪಾಯಿ ಆರೋಗ್ಯ ಕಿಟ್ ಅನ್ಯರ ಪಾಲಾಗಿದೆ ಎಂದು ಯುವತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಸಮರ್ಪಕ ಉತ್ತರ ನೀಡಬೇಕು ಎಂದು ಯುವತಿ ಕಿಡಿಕಾರಿದ್ದಾಳೆ. ಆದರೆ,   ಚಾಲಕ ಹಾಗೂ ನಿರ್ವಾಹಕ ಇದಕ್ಕೆ ಉತ್ತರಿಸದೆ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಯುವತಿ ಪಿತ್ತ ನೆತ್ತಿಗೇರುವ ಹಾಗೆ ಮಾಡಿದೆ.

ಇದನ್ನೂ ಓದಿ:KSRTC ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ: ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತಾಂತ್ರಿಕ ದೋಷದಿಂದ ಟಿಕೆಟ್ ನೀಡುವ ಮಷೀನ್ ಬಂದ್; ಬಸ್​ಗಾಗಿ ಕಾದು ಕಾದು ಸುಸ್ತಾದ ಪ್ರಯಾಣಿಕರು

ಯಾದಗಿರಿ: ಟಿಕೆಟ್​ ನೀಡುವ ಯಂತ್ರಗಳಲ್ಲಿ ಸಾಫ್ಟ್‌ವೇರ್ ಅಳವಡಿಕೆ ವೇಳೆ ತಾಂತ್ರಿಕ ಸಮಸ್ಯೆ ತಲೆದೊರಿದ್ದು, ಟಿಕೆಟ್ ನೀಡುವ ಮಷೀನ್ ಹಾಳಾಗಿ ಹೋಗಿದೆ. ಇದರಿಂದ ಬಸ್ ಸಂಚಾರ ವಿಳಂಬವಾಗಿ ಪ್ರಯಾಣಿಕರು ಪರದಾಟ ನಡೆಸಿದ ಯಾದಗಿರಿ ಡಿಪೋಗೆ ಸೇರಿದ ಬಸ್​ನಲ್ಲಿ ನಡೆದಿದೆ. ಯಾದಗಿರಿ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಯಚೂರು ಹಾಗೂ ವಿವಿಧ ಭಾಗಕ್ಕೆ ತೆರಳುವ ಪ್ರಯಾಣಿಕರು ಬೆಳಿಗ್ಗೆಯಿಂದ ಬಸ್​ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಇತ್ತ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಾರಿಗೆ ಸಿಬ್ಬಂದಿಗಳು ಹರಸಾಹಸ ಪಡುವಂತಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Tue, 12 December 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ