ದಾವಣಗೆರೆ, ಮಾ.15: ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ (GM Siddeshwar) ಅವರ ಪತ್ನಿ ಗಾಯತ್ರಿ ಅವರಿಗೆ ನೀಡಲಾಗಿದೆ. ಇದರಿಂದಾಗಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಆರ್.ಅಶೋಕ್ ಭಾಗಿಯಾಗಿದ್ದ ಸಿದ್ದೇಶ್ವರ್ ಅವರ 10 ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ರೇಣುಕಾಚಾರ್ಯ, ಮತ್ತೊಬ್ಬ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಗೈರಾಗಿದ್ದಾರೆ.
ಹಾಲಿ ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಟ್ಟಿದ್ದನ್ನ ವಿರೋಧಿಸಿ ಕಾರ್ಯಕ್ರಮದಿಂದ ರವೀಂದ್ರನಾಥ ಹಾಗೂ ರೇಣುಕಾಚಾರ್ಯ ಬಣ ದೂರ ಉಳಿದಿದೆ. ಇವರಲ್ಲದೆ, ಹರಿಹರ ಶಾಸಕ ಬಿಪಿ ಹರೀಶ್, ವಿಧಾನ ಪರಿಷತ್ ಸದಸ್ಯ ಎಸ್ ರವಿಕುಮಾರ, ಮಾಜಿ ಸಚಿವ ಭೈರತಿ ಬಸವರಾಜ್ ಸೇರಿದಂತೆ ಪ್ರಮುಖರ ಕಾರ್ಯಕ್ರಮದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಟಿಕೆಟ್ ಫೈಟ್ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ, ಮೋದಿಯವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಇಡೀ ದೇಶದಲ್ಲಿ 400 ಕ್ಕೂ ಹೆಚ್ವು ಸೀಟ್ ಗೆಲ್ಲಲು ಹೊರಟಿದ್ದೇವೆ. ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರ ಪತ್ನಿಗೆ ಟಿಕೇಟ್ ನೀಡಿದ್ದು, ಏನೇ ಗೊಂದಲು ಇದ್ದರೂ ಮೋದಿ ಪ್ರಧಾನಿಯಾವುದೊಂದೆ ನಮ್ಮ ಗುರಿ. ಟಿಕೇಟ್ ಕೊಟ್ಟ ಮೇಲೆ ಎಲ್ಲಾ ಕಡೆ ಗೊಂದಲಗಳು ಇದ್ದೇ ಇರುತ್ತದೆ. ಒಂದು ವಾರ ಕಳೆದ ನಂತರ ಎಲ್ಲಾವೂ ಸುಧಾರಣೆಯಾಗುತ್ತದೆ ಎಂದರು.
ಇದನ್ನೂ ಓದಿ: ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಲೇ ಬೇಕು, ಸಿದ್ದೇಶ್ವರ ಗೂಂಡಾಗಿರಿ ನಡೆಯಲ್ಲ: ಎಂಪಿ ರೇಣುಕಾಚಾರ್ಯ
ಯಾರು ಕೂಡ ರೆಬಲ್ ಆಗಿ ನಿಲ್ಲುವ ಪರಿಸ್ಥಿತಿ ಇಲ್ಲಿ ಇಲ್ಲ. ನಾನು ರೇಣುಕಾಚಾರ್ಯ ಜೊತೆ ಮಾಡುತ್ತೇನೆ, ಎಸ್ ಎ ರವೀಂದ್ರನಾಥ್ ಕೂಡ ಹಿರಿಯರು. ಅವರ ಜೊತೆ ಮಾತನಾಡುತ್ತೇನೆ. ಬೆಂಗಳೂರಿನಲ್ಲಿ ಒಂದು ಕಡೆ ಎಲ್ಲಾರನ್ನು ಕರೆದು ಮಾತನಾಡುತ್ತೇನೆ. ರೇಣುಕಾಚಾರ್ಯ ಸಿದ್ದೇಶ್ವರ್ ಅವರ ಶಿಷ್ಯ, ಕಳೆದ ಚುನಾವಣೆಯ ಗೊಂದಲದಿಂದ ಹೀಗೆ ಆಗಿದೆ ಎಂದರು.
ಈಶ್ವರಪ್ಪ ಡಿಸಿಎಂ ಆಗಿ ಮಂತ್ರಿಗಳಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದವರು. ಮಗನಿಗೆ ಟಿಕೇಟ್ ಸಿಕ್ಕಿಲ್ಲ ಎಂದು ಹೀಗೆ ಮಾತನಾಡಿರಬಹುದು, ಎಲ್ಲವೂ ಸರಿಯಾಗುತ್ತದೆ. ಕೇಂದ್ರ ನಾಯಕರು ಈಗಾಗಲೇ ಈಶ್ವರಪ್ಪ ಅವರನ್ನು ಸಂಪರ್ಕ ಮಾಡಿದ್ದಾರೆ. ಈ ಚುನಾವಣೆಗೆ ಯಾವುದೇ ತೊಂದರೆಯಾಗಿವುದಿಲ್ಲ ಎಂದರು.
ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದ ಭೂಮಿಯನ್ನು ಬಳಕೆ ಮಾಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ವಿವಾದ ಪ್ರಕರಣಕ್ಕೆ ಮರು ಜೀವ ನೀಡಲು ಹೊರಟ ಸರ್ಕಾರದ ನಡೆಗೆ ಆರ್ ಆಶೋಕ್ ಖಂಡನೆ ವ್ಯಕ್ತಪಡಿಸಿದ್ದು, ಯಾರು ಕೂಡ ದ್ವೇಷದ ರಾಜಕಾರಣ ಯಾರು ಮಾಡಬಾರದು. ಅಧಿಕಾರ ಇವತ್ತು ಇರುತ್ತೆ ನಾಳೆ ಇರುವುದಿಲ್ಲ. ಯಾರು ಶಾಶ್ವತ ಅಲ್ಲ. ಸಿದ್ದರಾಮಯ್ಯ ಅವರು ಕೂಡ ವಿರೋಧ ಪಕ್ಷದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಮೈಸೂರು ರಾಜರ ಮೇಲೆ ಈ ರೀತಿ ಧ್ವೇಷದ ರಾಜಕಾರಣ ಮಾಡಬಾರದು ಎಂದರು.
ಜಗದೇಶ್ ಶೆಟ್ಟರ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅಶೋಕ್, ಜಗದೀಶ್ ಶೆಟ್ಟರ್ ಜೊತೆ ಈಗಾಗಲೇ ಮಾತನಾಡಿದ್ದಾರೆ. ಬೆಳಗಾವಿಯಿಂದಲೇ ಸ್ಪರ್ಧೆ ಮಾಡಿವ ಸಾಧ್ಯತೆ ಇದೆ ಎಂದರು. ಬಿಜೆಪಿ ಸಂಸದರನ್ನು ಕಾಂಗ್ರೆಸ್ ಸೆಳೆಯುತ್ತದೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ನ ಮಂತ್ರಿಮಂಡಲದಲ್ಲಿ ಇದ್ದವರನ್ನು ಚುನಾವಣೆಗೆ ನಿಲ್ಲಿ ಎಂದು ಕೇಳಿದ್ದಾರೆ. ಯಾರೂ ಕೂಡ ರೆಡಿ ಇಲ್ಲ. ಹೀಗಾಗಿ ನಮ್ಮ ಬಿಜೆಪಿ ಸಂಸದರ ಹಿಂದೆ ಬಿದ್ದಿದ್ದಾರೆ. ಕಾಂಗ್ರೆಸ್ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಗತಿಗೆಟ್ಟ ಪಾರ್ಟಿಯಾಗಿ ಕಾಂಗ್ರೆಸ್ ಮಾರ್ಪಟ್ಟಿದೆ. ಬೆಂಗಳೂರು ಗ್ರಾಮಾಂತರಕ್ಕೆ ಗೆಲ್ಲುವಂತಹ ಅಭ್ಯರ್ಥಿಗೆ ಬಿಜೆಪಿ ಟಿಕೇಟ್ ನೀಡಿದೆ. ಈ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದರು.
ಟಿಕೇಟ್ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಬೈರತಿ ಬಸವರಾಜ್, ನಮ್ಮ ಹಿರಿಯರನ್ನು ಕರೆದು ಮಾತನಾಡಿವ ಕೆಲಸ ನಮ್ಮ ನಾಯಕರು ಮಾಡುತ್ತಾರೆ. ದೇಶದ ಪ್ರತಿಯೊಬ್ಬ ಮತದಾರರರೂ ಕೂಡ ಬಿಜೆಪಿಗೆ ಮತ ಹಾಕಲು ಕಾತುರದಿಂದ ಇದ್ದಾರೆ. ನಮ್ಮ ಪಕ್ಷದಲ್ಲಿ ಡ್ಯಾಮೇಜ್ ಮುಂದುವರೆಯುವುದಿಲ್ಲ. ಟಿಕೇಟ್ ಕೇಳುವುದು ಸಹಜ, ಸಿಕ್ಕಿಲ್ಲ ಎಂದರೆ ಬೇಸರ ಕೂಡ ಸಹಜ. ಅವರನ್ನೇಲ್ಲ ನಮ್ಮ ಪಕ್ಷದ ನಾಯಕರು ಮಾತನಾಡಿಸಿ ಸರಿಪಡಿಸುತ್ತಾರೆ ಎಂದರು.
ಬಿಜೆಪಿಗೆ ದೊಡ್ಡ ದೊಡ್ಡ ಕಂಪನಿಗಳು ಹಣ ಹೂಡಿಕೆ ಮಾಡಿದ್ದಾರೆ ಎಂಬ ದಿನೇಶ್ ಗುಂಡೂರಾವ್ ಆರೋಪಕ್ಕೆ ತಿರುಗೇಟು ನೀಡಿದ ಬಸವರಾಜ್, ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಿದ ಪಟ್ಟಯೇ ಇದೆ. ಎಲ್ಲಾ ಪಕ್ಷಗಳಿಗೂ ಕೂಡ ಹಣ ಹೂಡಿಕೆ ಮಾಡುತ್ತಾರೆ. ಯಡಿಯೂರಪ್ಪ ಪೋಕ್ಸೋ ವಿಚಾರ ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಚಕ್ರ ಯಾವಾಗಲೂ ತಿರುಗುತ್ತದೆ, ಮೇಲೆ ಇದ್ದಿದ್ದು ಕೆಳಗೆ ಬರಲೇಬೇಕು. ಜನ ಅಧಿಕಾರ ಕೊಟ್ಟಿದ್ದಾರೆ ಎಂದು ಏನೇನೋ ಮಾಡಲು ಹೊರಟಿದ್ದೀರಿ. ಮುಂದೆ ಕಾಲ ಬರುತ್ತದೆ, ಆಗ ಅನುಭವಿಸುತ್ತೀರಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ