ಸಿದ್ದೇಶ್ವರ್ ಪತ್ನಿಗೆ ಟಿಕೆಟ್: ಬಿಜೆಪಿ ಭೀಷ್ಮ ರವೀಂದ್ರನಾಥ ಸಹ ಪಕ್ಷದ ನಿರ್ಧಾರಕ್ಕೆ ವಿರೋಧ, ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಭೇಟಿಗೆ ನಿರ್ಧಾರ

ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸುವಂತೆ ಬಿಜೆಪಿ ಹೈಕಮಾಂಡ್ ಗಮನ ಸೆಳೆಯಲು ರೇಣುಕಾಚಾರ್ಯ ಅಂಡ್ ಟೀಂ ವತಿಯಿಂದ ಮಾಜಿ ಸಚಿವ ಎಸ್ಎ ರವೀಂದ್ರನಾಥ್ ರವರ ನಿವಾಸದಲ್ಲಿ ಗೌಪ್ಯ ಸಭೆ ನಡೆಸಲಾಯಿತು. ಪ್ರಧಾನಿ ಮೋದಿ ಗಮನಕ್ಕೆ ತರುವುದು ಮತ್ತು ಹೋರಾಟ ನಿರಂತರವಾಗಿ ಜಾರಿಯಲ್ಲಿರುವಂತೆ ರೇಣು ಟೀಮ್ ನಿರ್ಧರಿಸಿದೆ.

ಸಿದ್ದೇಶ್ವರ್ ಪತ್ನಿಗೆ ಟಿಕೆಟ್: ಬಿಜೆಪಿ ಭೀಷ್ಮ ರವೀಂದ್ರನಾಥ ಸಹ ಪಕ್ಷದ ನಿರ್ಧಾರಕ್ಕೆ ವಿರೋಧ, ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಭೇಟಿಗೆ ನಿರ್ಧಾರ
ಪಕ್ಷದ ನಿರ್ಧಾರಕ್ಕೆ ಬಿಜೆಪಿ ಭೀಷ್ಮ ರವೀಂದ್ರನಾಥ ಸಹ ವಿರೋಧ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Mar 15, 2024 | 11:05 AM

ಬೆಣ್ಣೆ ನಗರಿ ಕೇಸರಿ ಪಡೆಯಲ್ಲಿ ಭಿನ್ನಮತ ಸ್ಟೋಟಗೊಂಡಿದೆ. ಜಿಲ್ಲೆಯ ಬಿಜೆಪಿ ಭೀಷ್ಮ ಎಂದೇ ಹೆಸರುವಾಸಿ ಎಸ್ ಎ ರವೀಂದ್ರನಾಥ (SA Rabindranath) ಸಹ ಬಿಜೆಪಿ ಪಕ್ಷದ ನಿರ್ಧಾರಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಹಾಲಿ ಸಂಸದ ಜಿಎಂ ಸಿದ್ದೇಶ್ವರ (GM Siddeshwar Wife) ವಿರುದ್ಧ ದೊಡ್ಡ ಹೋರಾಟವೇ ಸುರುವಾಗಿದೆ. ಶಿವಮೊಗ್ಗ ಬರುವ ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತಮ್ಮ ಅಸಮಧಾನ ಹೇಳಿಕೊಳ್ಳಲು ಅಸಮಾಧಾನಗೊಂಡವರ ತಂಡ ನಿರ್ಧರಿದೆ. ಇಲ್ಲಿದೆ ನೋಡಿ ಬಿಜೆಪಿ ಸ್ಪೋಟ ಸ್ಟೋರಿ (Davangere Lok Sabha Constituency)

ಸಂಸದ ಜಿಎಂ‌ ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಕೆರಳಿದ ರೇಣುಕಾಚಾರ್ಯ ಅಂಡ್ ಟೀಂ ನಿಂದ ಸಭೆ ನಡೆಸಿತು. ಡಿಸೇಲ್ ಸುರಿದುಕೊಂಡು ವ್ಯಕ್ತಿ ಹೈಡ್ರಾಮಾ ಮಾಡಿದ ಘಟನೆಯೂ ನಡೆದಿದೆ. ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಘೋಷಣೆಯಾಗಿದೆ‌. ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ರವರ ವಿರುದ್ಧ ಎಂಪಿ ರೇಣುಕಾಚಾರ್ಯ ನೇತೃತ್ವದ ಅತೃಪ್ತ ಬಣದ ಆಕ್ರೋಶಕ್ಕೆ ಕಾರಣವಾಗಿದೆ.

ಅಭ್ಯರ್ಥಿಯನ್ನು ಬದಲಿಸುವಂತೆ ಹೈಕಮಾಂಡ್ ಗಮನ ಸೆಳೆಯಲು ರೇಣುಕಾಚಾರ್ಯ ಅಂಡ್ ಟೀಂ ಮಾಜಿ ಸಚಿವ ಎಸ್ಎ ರವೀಂದ್ರನಾಥ್ ರವರ ನಿವಾಸದಲ್ಲಿ ಗೌಪ್ಯ ಸಭೆ ನಡೆಸಲಾಯಿತು. ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಹೌಡ್ರಾಮಾ ನಡೆದು ಹೋಯಿತು. ಯುವಕನೊಬ್ಬ ಮೈಮೇಲೆ ಡಿಸೇಲ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ‌

ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ರವರ ನಿವಾಸದಲ್ಲಿ ಎಂಪಿ ರೇಣುಕಾಚಾರ್ಯ ರವರ ನೇತೃತ್ವದಲ್ಲಿ ಸಂಸದ ಜಿಎಂ‌ಸಿದ್ದೇಶ್ವರ್ ವಿರುದ್ಧ ಅತೃಪ್ತರು ಗೌಪ್ಯ ಸಭೆ ನಡೆಸಿದರು. ಈ ಸಭೆಯಲ್ಲಿ ಮಾಜಿ ಸಚಿವ ಎಸ್ಎ ರವೀಂದ್ರನಾಥ್, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌, ಎಂಪಿ ರೇಣುಕಾಚಾರ್ಯ, ಮಾಜಿ ಶಾಸಕ ಬಸವರಾಜ್ ನಾಯ್ಕ್, ದಾವಣಗೆರೆ ದಕ್ಷಿಣ ಪರಾಜೀತ ಅಭ್ಯರ್ಥಿ ಬಿಜಿ ಅಜಯ್ ಕುಮಾರ್, ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಸೇರಿದ್ದರಿಂದ ಸಭೆಗೆ ಹಾಜರಾಗಿದ್ದ ಸಂಸದರ ಬಳಗಕ್ಕೆ ಬೇವರು ಬರುವಂತೆ ಮಾಡಿತ್ತು.

ಟಿಕೆಟ್ ನೀಡಿದ ಅಭ್ಯರ್ಥಿಯಾದ ಗಾಯಿತ್ರಿ ಸಿದ್ದೇಶ್ವರ್ ರವರನ್ನು ಬದಲಾಯಿಸಬೇಕು, ಆಕಾಂಕ್ಷಿಯಾದ ಡಾ.ರವಿಕುಮಾರ್ ರವರಿಗೆ ಟಿಕೆಟ್ ಕೊಡ್ಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಗೆ ಚನ್ನಗಿರಿ, ಜಗಳೂರು, ಹರಪನಹಳ್ಳಿ, ದಾವಣಗೆರೆ ದ, ದಾವಣಗೆರೆ ಉ, ಮಾಯಕೊಂಡ, ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಸಾಕಷ್ಟು ಮುಖಂಡರು ಸಭೆ ಸೇರಿ ಗೋ ಬ್ಯಾಕ್ ಸಿದ್ದೇಶ್ವರ್, ಸಿದ್ದೇಶ್ವರ್ ಹಠಾವೊ ದಾವಣಗೆರೆ ಬಚಾವೋ ಎಂದು ಘೋಷಣೆ ಕೂಗಿದರು.ಅಲ್ಲದೇ ಓರ್ವ ಕಾರ್ಯಕರ್ತ ಡಾ. ರವಿಕುಮಾರ್ ರವರಿಗೆ ಟಿಕೆಟ್ ಕೊಡಿ ಎಂದು ಡಿಸೇಲ್ ಸುರಿದು ಕೊಂಡು ಬೆಂಕಿ ಇಟ್ಟುಕೊಳ್ಳಲು ಯತ್ನಿಸಿದನು.

Also Read: ದಾವಣಗೆರೆ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಕಾಡುತ್ತಿದೆ ಜೀವ ಭಯ! ಯಾಕೆ ಹೀಗೆ?

ಈ ವೇಳೆ ಸ್ಥಳೀಯರು ತಡೆದರು.ದಾವಣಗೆರೆ ಶಿರಮಗೊಂಡನಹಳ್ಳಿಯಲ್ಲಿ ಅತೃಪ್ತ ಬಿಜೆಪಿ ಮುಖಂಡರ ಸಭೆ ನಡೆಸಿದ ಬಳಿಕ ಎಂಪಿ ರೇಣುಕಾಚಾರ್ಯ ಮಾತನಾಡಿ ಸಮೀಕ್ಷೆ ಜಿ ಎಂ ಸಿದ್ದೇಶ್ವರ್ ವಿರುದ್ಧವಾಗಿದೆ, ನೂರಕ್ಕೆ ನೂರಷ್ಟು ಸಮೀಕ್ಷೆ ಅವರ ವಿರುದ್ಧವಾಗಿದೆ, ಡಾ ರವಿಕುಮಾರ್ ಗೆ ಟಿಕೇಟ್ ನೀಡಬೇಕೆಂದು ಒಮ್ಮತದಿಂದ ಹೈಕಮಾಂಡ್ ಗೆ‌ ಮನವಿ ಮಾಡಿದ್ದೇವು, ಆದ್ರೆ ಜಿ ಎಂ ಸಿದ್ದೇಶ್ವರ್ ಬಂಡತನದಿಂದ ತಮ್ಮ ಕುಟುಂಬಕ್ಕೆ ಟಿಕೇಟ್ ಪಡೆದಿದ್ದಾರೆ ಎಂಬುದೇ ಇಲ್ಲಿನ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೇ ವೇಳೆ ಪ್ರಮುಖರು ವ್ಯಂಗ್ಯ ಕೂಡಾ ಮಾಡಿದರು. ವೈದ್ಯರ ಮಗ ವೈದ್ಯನಾಗಲು ಎಂಬಿಬಿಎಸ್ ಮಾಡಬೇಕು ಬರಿ ಸ್ಟೆತಸ್ಕೋಪ್ ಹಿಡಕೊಂಡ್ರೆ ನಕಲಿ‌ ವೈದ್ಯನಾಗುತ್ತಾನೆ, ಅವರ ಮಗ ಹೆಂತಿಗೆ ಕೊಡೋಕೆ ದಾವಣಗೆರೆಗೆ ಅವರ ಕೊಡುಗೆ ಏನಿದೆ, ಅವರ ಹೆಂಡತಿ‌ ಮಗ ಬಿಜೆಪಿಗೆ‌ ಜೈ ಎಂದು ಹೇಳಿದ್ದಾರಾ, ಬಿಜೆಪಿಗೆ ಅವರ ಹೆಂಡತಿ ಮಗನ ಕೊಡುಗೆ ಏನು.ಗೂಂಡಾಗಿರಿ ದಾದಾಗಿರಿ ನಡೆಯೋಲ್ಲ ರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ, ಕೆಲವರಿಗೆ ಬೆದರಿಕೆ ಹಾಕಿದ್ದಾರೆ, ಅಮಿತಾ ಷಾ ಕೈ ಪಟ್ಟಿಯಲ್ಲಿ ಇವರ ಹೆಸರು ಇಲ್ಲ, ರವಿಕುಮಾರ್ ಗೆ ನಾವು ಬುಕ್ ಆಗಿಲ್ಲ, ಶಾಮನೂರು ಕುಟುಂಬದ ವಿರುದ್ಧ ಸ್ಪರ್ಧಿಸಲು ನಮಗಷ್ಟೇ ಸಾಮಾರ್ಥ್ಯ ಇದೆ ಎಂದು ಹೈಕಮಾಂಡ್ ಗೆ ತಪ್ಪು ಮಾಹಿತಿ ನೀಡಿದ್ದಾರೆ, ನಾವು ಬಿಜೆಪಿಯಲ್ಲಿ ಸಮರ್ಥರಿದ್ದೇವೆ, ಎಸ್ ಎ ರವೀಂದ್ರನಾಥ ದಾವಣಗೆರೆಯಲ್ಲಿ ಬಿಜೆಪಿ ಕಟ್ಟಿಸಿದ ಭೀಷ್ಮ. ದುಡ್ಡಿದ್ದರೇ ಏನು ಬೇಕಾದ್ರು ಮಾಡಬಹುದು ಎಂದು ಇವರು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪ್ರಧಾನ ಮಂತ್ರಿ ಮೋದಿ ಗಮನಕ್ಕೆ ತರುವುದು ಮತ್ತು ಹೋರಾಟ ನಿರಂತರವಾಗಿ ಜಾರಿಯಲ್ಲಿರುವಂತೆ ರೇಣು ಟೀಮ್ ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ