ದಾವಣಗೆರೆ: ಅಪಘಾತ ಸಂಭವಿಸಿ 5 ವರ್ಷವಾದರೂ ಸಾರಿಗೆ ಇಲಾಖೆ (Transport Department) ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ 2 ಬಸ್ಗಳನ್ನು ಜಪ್ತಿ ಮಾಡಿದ್ದಾರೆ. 2019ರ ಮೇ 6ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಳಿ ಕಾರಿಗೆ ಬಸ್ ಡಿಕ್ಕಿಯಾಗಿ (Bus Accident) ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ 1.32 ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿತ್ತು. ಆದರೆ, ಇನ್ನೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ಬಸ್ ಜಪ್ತಿ ಮಾಡಿದ್ದಾರೆ.
ಅಪಘಾತ ಸಂಭವಿಸಿ ಐದು ವರ್ಷವಾದರೂ ಸಾರಿಗೆ ಇಲಾಖೆ ಪರಿಹಾರ ನೀಡಲಿಲ್ಲ. 1.32 ಕೋಟಿ ರೂಪಾಯಿಯನ್ನು ಮೃತರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಪರಿಹಾರಕ್ಕಾಗಿ ಮೃತ ಪ್ರಾಧ್ಯಾಪಕನ ಪತ್ನಿ ಪರದಾಡುತ್ತಿದ್ದಾರೆ. ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ಎರಡು ಬಸ್ ಜಪ್ತಿ ಮಾಡಿದ್ದಾರೆ.
ದಾವಣಗೆರೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಎರಡು ಬಸ್ಗಳನ್ನು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. 2019ರ ಮೇ 6ರಂದು ಈ ಘಟನೆ ನಡೆದಿತ್ತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಳಿಯ ಕಾರ್ ಗೆ ಸಾರಿಗೆ ಇಲಾಖೆ ಬಸ್ ಡಿಕ್ಕಿ ಹೊಡೆದು, ದಾವಣಗೆರೆ ಎವಿಕೆ ಕಾಲೇಜ್ ಪ್ರಾಧ್ಯಾಪಕ ನಂಜುಂಡಸ್ವಾಮಿ ಸೇರಿ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಓರ್ವನಿಗೆ ಗಂಭೀರ ಗಾಯಗಳಾಗಿತ್ತು. ಹೀಗಾಗಿ, ಪರಿಹಾರಕ್ಕಾಗಿ ಪುತ್ರನೊಂದಿಗೆ ಮೃತ ನಂಜುಂಡಸ್ವಾಮಿ ಅವರ ಪತ್ನಿ ಸುಮಾ ಕೋರ್ಟ್ಗೆ ಅಲೆದಾಡುತ್ತಲೇ ಇದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ