ಕೋರ್ಟ್ ಆದೇಶ ನೀಡಿದರೂ ಅಪಘಾತದಿಂದ ಮೃತಪಟ್ಟ ಕುಟುಂಬಸ್ಥರಿಗೆ ಸಿಗದ ಪರಿಹಾರ; ಇಲಾಖೆಗೆ ಪಾಠ ಕಲಿಸಲು ಕೋರ್ಟ್ ಸಿಬ್ಬಂದಿ ಮಾಡಿದ್ದೇನು ಗೊತ್ತಾ?
ಕುಟುಂಬಸ್ಥರಿಗೆ 1.32 ಕೋಟಿ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿತ್ತು. ಆದ್ರೆ ಕೋರ್ಟ್ ಆದೇಶಕ್ಕೆ ತಲೆ ಕೆಡಿಸಿಕೊಳ್ಳದೆ ಪರಿಹಾರ ನೀಡದ ಹಿನ್ನೆಲೆ ಸಿಬ್ಬಂದಿ ಬಸ್ ಜಪ್ತಿ ಮಾಡಿದ್ದಾರೆ.
ದಾವಣಗೆರೆಃ ಅಪಘಾತ(Accident) ಸಂಭವಿಸಿ 3 ವರ್ಷವಾದರೂ ಸಾರಿಗೆ ಇಲಾಖೆ ಪರಿಹಾರ(Composition) ನೀಡದ ಹಿನ್ನೆಲೆ ಕೋರ್ಟ್ ಸಿಬ್ಬಂದಿ 2 ಬಸ್ ಜಪ್ತಿ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. 2019ರ ಮೇ 6 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಳಿ ಕಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರು. ಕುಟುಂಬಸ್ಥರಿಗೆ 1.32 ಕೋಟಿ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿತ್ತು. ಆದ್ರೆ ಕೋರ್ಟ್ ಆದೇಶಕ್ಕೆ ತಲೆ ಕೆಡಿಸಿಕೊಳ್ಳದೆ ಪರಿಹಾರ ನೀಡದ ಹಿನ್ನೆಲೆ ಸಿಬ್ಬಂದಿ ಬಸ್ ಜಪ್ತಿ ಮಾಡಿದ್ದಾರೆ.
ಘಟನೆ ಹಿನ್ನೆಲೆ ಪತಿ ದಾವಣಗೆರೆಯ ಪ್ರತಿಷ್ಠಿತ ಎವಿಕೆ ಕಾಲೇಜ್ ನಲ್ಲಿ ಪ್ರಾಧ್ಯಾಪಕ. ಮೇಲಾಗಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ. ನಗರದಲ್ಲಿ ಸಹ ಒಳ್ಳೆಯ ಹೆಸರು. ಇದ್ದೊಬ್ಬ ಮಗನಿಗೆ ಉನ್ನತ ಶಿಕ್ಷಣ ಕೊಡಿಸಿದ್ರೆ ಇನ್ನಷ್ಟು ಜೀವನಕ್ಕೆ ಸಂಭ್ರಮ ಬರುತ್ತದೆ ಎನ್ನುವಂತಹ ಕುಟುಂಬ. ಆದ್ರೆ ಖಾಸಗಿ ಕೆಲ್ಸಕ್ಕಾಗಿ ಸ್ವಂತ ಕಾರ್ ನಲ್ಲಿ ಪುತ್ರ ಹಾಗೂ ಸ್ನೇಹಿತನ ಜೊತೆಗೆ ಧಾರವಾಡಕ್ಕೆ ಹೋಗಿ ಬರುವಾಗ ಸಂಭವಿಸಿದ ದುರಂತದಲ್ಲಿ ಪತಿ ಹಾಗೂ ಆತನ ಸ್ನೇಹಿತ ಸಾವನ್ನಪ್ಪಿದರು. ವಯಸ್ಸಿಗೆ ಬಂದ ಪುತ್ರನಿಗೆ ಗಂಭೀರ ಗಾಯಗಳಾಗಿದ್ದವು. ಪತಿಯ ಸ್ನೇಹಿತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಗಾಯಾಳು ಪತಿ ದಾವಣಗೆರೆ ಎಸ್ಎಸ್ ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದರು. ಇದನ್ನೂ ಓದಿ: Internet Explorer: 27 ವರ್ಷಗಳ ಬಳಿಕ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸ್ಥಗಿತ..!
ಸದ್ಯ ದಾವಣಗೆರೆ ಕೆಬಿ ಬಡಾವಣೆ ನಿವಾಸಿ ಸುಮಾರ ಪತಿ 2019 ಮೇ 6ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಸಮೀಪ ಕಾರ್ ನಲ್ಲಿ ಬರುವಾಗ ಸಾರಿಗೆ ಇಲಾಖೆಯ ಬಸ್ಸು ಯೂಟರ್ನ್ ತೆಗೆದುಕೊಂಡು ಡಿಕ್ಕಿ ಹೊಡೆದಿತ್ತು. ಇವರ ಪತಿ ನಂಜುಂಡಸ್ವಾಮಿ ಅವರು ತೀವ್ರ ಗಾಯಗೊಂಡು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಹೀಗೆ ಪತಿ ಸಾವನ್ನಪ್ಪಿದ ಬಳಿಕ ಆಕಾಶವೇ ಕಳಚಿ ಮೇಲೆ ಬಿದ್ದಂತೆಕುಳಿತುಕೊಳ್ಳದ ಸುಮಾ ತೀವ್ರಗಾಯಗೊಂಡ ಪುತ್ರನನ್ನ ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಪಟ್ಟು ಉಳಿಸಿಕೊಂಡಿದ್ದಾರೆ. ಇನ್ನು ಕೆಲ ಶಸ್ತ್ರ ಚಿಕಿತ್ಸೆ ಆಗಬೇಕು. ಸದ್ಯ ಹಣಕಾಸಿನ ಸ್ಥಿತಿ ಸರಿಯಿಲ್ಲದ ಕಾರಣ ಸುಮ್ಮನಾಗಿದ್ದಾರೆ.
ಸುಮಾ ಹೀಗೆ ಪತಿ ಸಾವಿಗೆ ಕಾರಣವಾದ ಸಾರಿಗೆ ಇಲಾಖೆಯ ವಿರುದ್ಧ ಪರಿಹಾರ ಕೊರಿ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣವನ್ನ ವಿಚಾರಣೆ ಮಾಡಿ ಮೃತರ ಕುಟುಂಬಸ್ಥರಿಗೆ ಒಂದು ಕೋಟಿ 32 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ದಾವಣಗೆರೆ ಜಿಲ್ಲಾ ಮತ್ತು ಸತ್ರನ್ಯಾಯಾಲದ ನ್ಯಾಯ ಮೂರ್ತಿಗಳು 2020ರಲ್ಲಿ ಆದೇಶ ಮಾಡಿದ್ದರು. ಇನ್ನೇನು ಪರಿಹಾರ ಬರುತ್ತದೆ ಪುತ್ರನಿಗೆ ಇನ್ನಷ್ಟು ಚನ್ನಾಗಿ ಚಿಕಿತ್ಸೆ ಕೊಡಿಸಬಹುದು ಅಂದು ಕೊಂಡಿದ್ದರು ಸುಮಾ. ಆದ್ರೆ ಕೋರ್ಟ್ ಆದೇಶವಿದ್ದರು ಸಾರಿಗೆ ಇಲಾಖೆ ಮಾತ್ರ ಪರಿಹಾರ ನೀಡುತ್ತಿಲ್ಲ. ಬದಲಿಗೆ ಹೈಕೋರ್ಟ್ನಲ್ಲಿ ಇದನ್ನ ಪ್ರಶ್ನಿಸುತ್ತೇವೆ ಎಂದು ಹೇಳುತ್ತಲೇ ಇದೆ. ಹೀಗೆ ಸಾರಿಗೆ ಇಲಾಖೆಯ ಉದ್ದಟತನವನ್ನ ನ್ಯಾಯವಾದಿಗಳ ಮೂಲಕ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು ಸುಮಾ. ಪರಿಹಾರ ನೀಡದ ಸಾರಿಗೆ ಇಲಾಖೆ ಬಸ್ಸುಗಳನ್ನ ಜಪ್ತಿ ಮಾಡಲು ಆದೇಶ ಮಾಡಲಾಗಿತ್ತು. ಇದನ್ನೂ ಓದಿ: Post Office Monthly Income Scheme: ಪೋಸ್ಟ್ ಆಫೀಸ್ನ ಈ ಯೋಜನೆ ಅಡಿಯಲ್ಲಿ ಹಣ ಉಳಿಸಿ ರೂ. 3300 ಗಳಿಸಿ
ಇದೇ ಕಾರಣಕ್ಕೆ ಕೋರ್ಟ್ ಸಿಬ್ಬಂದಿಗಳು ಬಂದು ಸಾರಿಗೆ ಇಲಾಖೆಗೆ ಸೇರಿದ ಎರಡು ಬಸ್ಸುಗಳನ್ನ ಜಪ್ತಿ ಮಾಡಿದ್ದಾರೆ. ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ಸುಗಳನ್ನ ಜಪ್ತಿ ಮಾಡಿ ಪರಿಹಾರ ನೀಡಿ ಬಸ್ಸು ಬಿಡಿಸಿಕೊಂಡು ಹೋಗುವಂತೆ ಆದೇಶಿಸಲಾಗಿದೆ. ಆದ್ರೆ ಸಾರಿಗೆ ಇಲಾಖೆ ಮಾತ್ರ ಉತ್ತರವೇ ನೀಡುತ್ತಿಲ್ಲ.
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
Published On - 6:21 pm, Wed, 15 June 22