AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಅಪಘಾತವಾಗಿ 5 ವರ್ಷವಾದರೂ ಪರಿಹಾರ ನೀಡದ ಸಾರಿಗೆ ಇಲಾಖೆ; ಕೋರ್ಟ್​ನಿಂದ 2 ಬಸ್​ಗಳ ಜಪ್ತಿ

1.32 ಕೋಟಿ ರೂಪಾಯಿಯನ್ನು ಮೃತರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಕೋರ್ಟ್​ ಆದೇಶ ನೀಡಿತ್ತು. ಅಪಘಾತ ಸಂಭವಿಸಿ ಐದು ವರ್ಷವಾದರೂ ಸಾರಿಗೆ ಇಲಾಖೆ ಪರಿಹಾರ ನೀಡಲಿಲ್ಲ.

ದಾವಣಗೆರೆಯಲ್ಲಿ ಅಪಘಾತವಾಗಿ 5 ವರ್ಷವಾದರೂ ಪರಿಹಾರ ನೀಡದ ಸಾರಿಗೆ ಇಲಾಖೆ; ಕೋರ್ಟ್​ನಿಂದ 2 ಬಸ್​ಗಳ ಜಪ್ತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 15, 2022 | 2:42 PM

Share

ದಾವಣಗೆರೆ: ಅಪಘಾತ ಸಂಭವಿಸಿ 5 ವರ್ಷವಾದರೂ ಸಾರಿಗೆ ಇಲಾಖೆ (Transport Department) ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೋರ್ಟ್​ ಸಿಬ್ಬಂದಿ 2 ಬಸ್​ಗಳನ್ನು​ ಜಪ್ತಿ ಮಾಡಿದ್ದಾರೆ. 2019ರ ಮೇ 6ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಳಿ ಕಾರಿಗೆ ಬಸ್​ ಡಿಕ್ಕಿಯಾಗಿ (Bus Accident) ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ 1.32 ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್​ ಸೂಚಿಸಿತ್ತು. ಆದರೆ, ಇನ್ನೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ಬಸ್​ ಜಪ್ತಿ ಮಾಡಿದ್ದಾರೆ.

ಅಪಘಾತ ಸಂಭವಿಸಿ ಐದು ವರ್ಷವಾದರೂ ಸಾರಿಗೆ ಇಲಾಖೆ ಪರಿಹಾರ ನೀಡಲಿಲ್ಲ. 1.32 ಕೋಟಿ ರೂಪಾಯಿಯನ್ನು ಮೃತರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಕೋರ್ಟ್​ ಆದೇಶ ನೀಡಿತ್ತು. ಪರಿಹಾರಕ್ಕಾಗಿ ಮೃತ ಪ್ರಾಧ್ಯಾಪಕನ ಪತ್ನಿ ಪರದಾಡುತ್ತಿದ್ದಾರೆ. ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೋರ್ಟ್​ ಸಿಬ್ಬಂದಿ ಎರಡು ಬಸ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಮೈಜುಮ್ಮೆನ್ನಿಸುವ ವಿಶೇಷ ಹರಕೆ ಜಾತ್ರೆ; ಬಾಯಲ್ಲಿ ಕಬ್ಬಣದ ರಾಡ್, ಬೆನ್ನಿಗೆ ಹುಕ್‌ ಹಾಕಿಕೊಂಡು ಭಯಾನಕವಾಗಿ ಹರಕೆ ತೀರಿಸಿದ ಭಕ್ತರು

ದಾವಣಗೆರೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಎರಡು ಬಸ್​ಗಳನ್ನು ಕೋರ್ಟ್​ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. 2019ರ ಮೇ 6ರಂದು ಈ ಘಟನೆ ನಡೆದಿತ್ತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಳಿಯ ಕಾರ್ ಗೆ ಸಾರಿಗೆ ಇಲಾಖೆ ಬಸ್ ಡಿಕ್ಕಿ ಹೊಡೆದು, ದಾವಣಗೆರೆ ಎವಿಕೆ ಕಾಲೇಜ್ ಪ್ರಾಧ್ಯಾಪಕ ನಂಜುಂಡಸ್ವಾಮಿ ಸೇರಿ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಓರ್ವನಿಗೆ ಗಂಭೀರ ಗಾಯಗಳಾಗಿತ್ತು. ಹೀಗಾಗಿ, ಪರಿಹಾರಕ್ಕಾಗಿ ಪುತ್ರನೊಂದಿಗೆ ಮೃತ ನಂಜುಂಡಸ್ವಾಮಿ ಅವರ ಪತ್ನಿ ಸುಮಾ ಕೋರ್ಟ್​ಗೆ ಅಲೆದಾಡುತ್ತಲೇ ಇದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ