ದಾವಣಗೆರೆಯಲ್ಲಿ ಮೈಜುಮ್ಮೆನ್ನಿಸುವ ವಿಶೇಷ ಹರಕೆ ಜಾತ್ರೆ; ಬಾಯಲ್ಲಿ ಕಬ್ಬಣದ ರಾಡ್, ಬೆನ್ನಿಗೆ ಹುಕ್‌ ಹಾಕಿಕೊಂಡು ಭಯಾನಕವಾಗಿ ಹರಕೆ ತೀರಿಸಿದ ಭಕ್ತರು

ಮುತ್ತು ಮಾರಮ್ಮನ ಜಾತ್ರೆ. ತಮಿಳುನಾಡು ಮೂಲದ ದೇವಿಯ ಈ ವಿಶೇಷ ಜಾತ್ರೆ ನಡೆದಿರೋದು ದಾವಣಗೆರೆಯಲ್ಲಿ. ದಾವಣಗೆರೆ ನಗರದ ಭಾರತ ಕಾಲೋನಿಯಲ್ಲಿ ಮುತ್ತುು ಮಾರಮ್ಮನ ಜಾತ್ರೆ ನಡೆದಿದ್ದು ಹತ್ತಾರು ಭಕ್ತರು ಅಲ್ಲಿ ಹರಕೆ ತೀರಿಸುತ್ತಿದ್ರು.

ದಾವಣಗೆರೆಯಲ್ಲಿ ಮೈಜುಮ್ಮೆನ್ನಿಸುವ ವಿಶೇಷ ಹರಕೆ ಜಾತ್ರೆ; ಬಾಯಲ್ಲಿ ಕಬ್ಬಣದ ರಾಡ್, ಬೆನ್ನಿಗೆ ಹುಕ್‌ ಹಾಕಿಕೊಂಡು ಭಯಾನಕವಾಗಿ ಹರಕೆ ತೀರಿಸಿದ ಭಕ್ತರು
ಬಾಯಲ್ಲಿ ಕಬ್ಬಣದ ರಾಡ್, ಬೆನ್ನಿಗೆ ಹುಕ್‌ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು
Follow us
TV9 Web
| Updated By: ಆಯೇಷಾ ಬಾನು

Updated on:Jun 10, 2022 | 8:54 AM

ದಾವಣಗೆರೆ: ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಯಾವುದೇ ಜಾತ್ರೆ, ಮಹೋತ್ಸವಗಳು ನಡೆದಿರಲಿಲ್ಲ. ಸದ್ಯ ಪ್ರಕರಣಗಳು ಕಡಿಮೆಯಾದ ಹಿನ್ನೆಲೆ ಈ ಬಾರಿ ಯಾವುದೇ ಜಾತ್ರೆ ಹಾಗೂ ಮಹೋತ್ಸವಗಳಗೆ ನಿರ್ಬಂಧನೆಗಳಿರಲಿಲ್ಲ. ಜಿಲ್ಲೆಯಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿದೆ. ಮಾರಮ್ಮನ ಜಾತ್ರೆಯಲ್ಲಿ ಭಕ್ತರು ಮಾರುದ್ದದ ಕಬ್ಬಿಣದ ರಾಡನ್ನ ಬಾಯಲ್ಲೇ ಹಾಯಿಸಿಕೊಂಡು, ಬೆನ್ನಿಗೆ ಹುಕ್‌ ಹಾಕಿಕೊಂಡು ವಾಹನ ಎಳೆದು ತಮ್ಮ ಹರಕೆಗಳನ್ನು ತೀರಿಸಿದ್ದಾರೆ. ಈ ದೃಶ್ಯಗಳು ಮೈ ಜುಮ್ ಎನಿಸುವಂತಿದ್ದವು.

ಮೈಜುಮ್ಮೆನ್ನಿಸುತ್ತೆ ಮುತ್ತು ಮಾರಮ್ಮನ ಜಾತ್ರೆ ಮುತ್ತು ಮಾರಮ್ಮನ ಜಾತ್ರೆ. ತಮಿಳುನಾಡು ಮೂಲದ ದೇವಿಯ ಈ ವಿಶೇಷ ಜಾತ್ರೆ ನಡೆದಿರೋದು ದಾವಣಗೆರೆಯಲ್ಲಿ. ದಾವಣಗೆರೆ ನಗರದ ಭಾರತ ಕಾಲೋನಿಯಲ್ಲಿ ಮುತ್ತುು ಮಾರಮ್ಮನ ಜಾತ್ರೆ ನಡೆದಿದ್ದು ಹತ್ತಾರು ಭಕ್ತರು ಅಲ್ಲಿ ಹರಕೆ ತೀರಿಸುತ್ತಿದ್ರು. ತಮಿಳುನಾಡು ಮೂಲದ ಕೆಲವರು ಕೆಲಸಕ್ಕೆ ಅಂತಾ ಶತಮಾನದ ಹಿಂದೆಯೇ ಬಂದು ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಇಲ್ಲೇ ಸೆಟ್ಲ ಆಗಿರೋ ಅವರೆಲ್ಲಾ ತಮ್ಮ ಸಂಪ್ರದಾಯಕ ಆಚರಣೆ ಮಾತ್ರ ಮರೆತಿಲ್ಲ. ಬಾಯಿಯಲ್ಲಿ ಕಬ್ಬಿಣದ ರಾಡ್‌ ತೂರಿಸಿಕೊಂಡು ಹರಕೆ ತೀರಿಸುತ್ತಾರೆ. ಪ್ರತಿ ವರ್ಷ ಇಂತಹದೊಂದು ಹರಕೆ ತೀರಿಸಲೇ ಬೇಕಂತೆ. ಈ ರೀತಿ ಹರಕೆ ತೀರಿಸಿದ್ರೆ, ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ, ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ ಸರಿ ಹೋಗುತ್ತೆ ಅನ್ನೋದು ಭಕ್ತರ ನಂಬಿಕೆ. ಇದನ್ನೂ ಓದಿ: ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್​ಗೆ ಪರಿಹಾರ ಇಲ್ಲಿದೆ

muthu maramma jatre

ಬಾಯಲ್ಲಿ ಕಬ್ಬಣದ ರಾಡ್, ಬೆನ್ನಿಗೆ ಹುಕ್‌ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು

ಇನ್ನು ಕೇವಲ ಬಾಯಿಗೆ ಮಾತ್ರ ಅಲ್ಲದೆ, ಬೆನ್ನಿಗೆ ಕಬ್ಬಿಣದ ಹುಕ್ ಹಾಕಿಕೊಂಡು ದೇವಿಯ ವಿಗ್ರಹವನ್ನ ಎಳೆದುಕೊಂಡು ಹೋಗ್ತಾರೆ. ಬೆನ್ನಿನ ಚರ್ಮದ ಸಹಾಯದಿಂದ ಆಟೋ ಒಂದನ್ನ ಎಳೆದುಕೊಂಡು ಹೋಗಿ ದೇವಿಯ ಹರಕೆ ತೀರಿಸೋ ದೃಶ್ಯವಂಥೂ ಮೈಜುಮ್ಮೆನ್ನಿಸುತ್ತೆ. ತಮಿಳು ಭಾಷಿಕರೇ ಹೆಚ್ಚು ಇರೋ ಇದೇ ಏರಿಯಾದ ಜನ ಮೂರು ದಿನ ಉಪವಾಸ ವ್ರತ ಆಚರಣೆ ಮಾಡಿ ಬಳಿಕ ಹರಕೆ ತೀರಿಸುತ್ತಾರೆ. ಚಿಕ್ಕನಳ್ಳಿಯ ಹಳ್ಳಕ್ಕೆ ಹೋಗಿ ಗಂಗೆ ಪೂಜೆ ಮಾಡಿಕೊಂಡು ಬರುವ ರಸ್ತೆಯೂದ್ದಕ್ಕೂ ಹರಕೆ ತೀರಿಸುತ್ತಾ ಬರುತ್ತಾರೆ.

ಒಟ್ನಲ್ಲಿ ಒಂದು ಸಣ್ಣ ಸೂಜಿ ತಾಗಿದ್ರೆ ಸಾಕು ಅಳು ಬರುತ್ತೆ. ಆದ್ರೆ ಇಲ್ಲಿ ಮಾತ್ರ ಮಾರುದ್ದ ರಾಡನ್ನೇ ಬಾಯಿಯಲ್ಲೇ ತೂರಿಸಿಕೊಂಡು ದೇವಿಯ ಹರಕೆ ತೀರಿಸುತ್ತಾರೆ. ಯಾವ ನೋವು ಇಲ್ಲದೆ ಆರಾಮಾಗಿ ಇರ್ತಾರೆ. ಇದೆಲ್ಲಾ ದೇವಿಯ ಮಹಿಮೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಇದನ್ನೂ ಓದಿ: ಧನ ಲಾಭ ರಹಸ್ಯ: ಯಾವ ರಾಶಿಯವರು ಯಾವ ದೇವರ ಆರಾಧನೆ ಮಾಡುವುದರಿಂದ ಧನ ಲಾಭ ಪ್ರಾಪ್ತಿಯಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

muthu maramma jatre

ಮುತ್ತು ಮಾರಮ್ಮನ ಜಾತ್ರೆ

muthu maramma jatre

ಮುತ್ತು ಮಾರಮ್ಮನ ಜಾತ್ರೆ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:34 am, Fri, 10 June 22

ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ