ಶ್ರೀಮಂತ ಯುವಕರ ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದ ಗ್ಯಾಂಗ್​​ ಅಂದರ್​​: ಬಂಧಿತರೆಲ್ಲ ಕಾಲೇಜು ವಿದ್ಯಾರ್ಥಿಗಳು!

ದಾವಣಗೆರೆಯ ಬಟ್ಟೆ ಅಂಗಡಿ ಮಾಲೀಕನನ್ನು ಅಪಹರಿಸಿ 10 ಲಕ್ಷ ರೂಪಾಯಿ ಹಣಕ್ಕಾಗಿ ಬೆದರಿಕೆ ಹಾಕಿದ್ದ 10 ಮಂದಿಯ ಗ್ಯಾಂಗ್​​ನ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಓರ್ವ ಆರೋಪಿಯ ವಿರುದ್ಧ ದಾವಣಗೆರೆ ಮತ್ತು ಅನ್ಯ ಜಿಲ್ಲೆಗಳಲ್ಲಿ ಸೇರಿದಂತೆ ಒಟ್ಟು ಮೂರು ಪ್ರಕರಣ ಇರುವುದು ತನಿಖೆ ವೇಳೆ ಗೊತ್ತಾಗಿದೆ.

ಶ್ರೀಮಂತ ಯುವಕರ ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದ ಗ್ಯಾಂಗ್​​ ಅಂದರ್​​: ಬಂಧಿತರೆಲ್ಲ ಕಾಲೇಜು ವಿದ್ಯಾರ್ಥಿಗಳು!
ಆರೋಪಿ ಗಂಗಾರಾಮ ಪವಾರ್ ಮತ್ತು ವಶಕ್ಕೆ ಪಡೆಯಲಾದ ಕಾರು
Image Credit source: Tv9 Kannada
Edited By:

Updated on: Sep 28, 2026 | 3:19 PM

ದಾವಣಗೆರೆ, ಸೆಪ್ಟೆಂಬರ್​​ 28: ಶ್ರೀಮಂತ ಯುವಕರ ಟಾರ್ಗೆಟ್ ಮಾಡಿ ಹಣಕ್ಕೆ ಬೇಡಿಕೆ ಇಡ್ತಿದ್ದ ಖತರ್ನಾಕ್​​ ಗ್ಯಾಂಗ್ ಒಂದನ್ನು ದಾವಣಗೆರೆ ಪೊಲೀಸರ ಖೆಡ್ಡಾಕ್ಕೆ ಕೆಡವಿದ್ದಾರೆ. ದಾವಣಗೆರೆಯ ಬಟ್ಟೆ ವ್ಯಾಪಾರಿಯಾಗಿರುವ 28 ವರ್ಷದ ವ್ಯಕ್ತಿಯ ಕಿಡ್ನಾಪ್ ಮಾಡಿದ್ದ ಗ್ಯಾಂಗ್​​ ಬಾಸುಂಡೆ ಬರುವ ರೀತಿ ಹಲ್ಲೆ ನಡೆಸಿತ್ತು. ನಿಮ್ಮ ತಂದೆಗೆ ಫೋನ್ ಮಾಡಿ ಹತ್ತು ಲಕ್ಷ ಹಣ ತರಿಸದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿತ್ತು ಎನ್ನಲಾಗಿದೆ. ವ್ಯಾಸಂಗಕ್ಕಾಗಿ ದಾವಣಗೆರೆಗೆ ಬಂದಿದ್ದ ವಿವಿಧ ಕಾಲೇಜಿನ 10 ವಿದ್ಯಾರ್ಥಿಗಳು ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಕರಣ ಏನು?

ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡೋದಿದೆ ಬಾ ಎಂದು ಬಟ್ಟೆ ಅಂಗಡಿ ಮಾಲೀಕ 26 ವರ್ಷದ ಯುವಕನನ್ನು ಆತನ ಸ್ನೇಹಿತ ಅಬ್ಬಾಸ್ ಎಂಬಾತ ಪುಸಲಾಯಿಸಿ ಶಾಮನೂರು ಬಳಿಯ ಸಮುದಾಯ ಭವನ ಬಳಿ ಕರೆದೊಯ್ದಿದ್ದ. ಈ ವೇಳೆ ಸಮುದಾಯ ಭವನ ಬಳಿ ಕಾರಿನಲ್ಲಿ ನಾಲ್ವರು ಬಂದಿದ್ದರು. ಆ ಬಳಿಕ ಆಂಜನೇಯ ಬಡಾವಣೆಯ ಮನೆಗೆ ಕರೆದೊಯ್ದು ಬಟ್ಟೆ ವ್ಯಾಪಾರಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಲಾಗಿದೆ. ಮರದ ತುಂಡು ಮತ್ತು ಬಿಯರ್ ಬಾಟಲಿಯಿಂದ ಹಲ್ಲೆ ಮಾಡಲಾಗಿದ್ದು, ಹತ್ತು ಲಕ್ಷ ಹಣ ತರಿಸದಿದ್ರೆ ಕೊಲೆ ಮಾಡೋದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ನಡುವೆ ಬಟ್ಟೆ ವ್ಯಾಪಾರಿ ದಿನಂಪ್ರತಿ ಫ್ಯಾಮಿಲಿ ವಾಟ್ಸಪ್ ಗ್ರೂಪ್‌‌ನಲ್ಲಿ ಮೊಬೈಲ್ ಲೈವ್ ಲೋಕೇಷನ್ ಶೇರ್ ಮಾಡ್ತಿದ್ದ ಕಾರಣ, ಅದನ್ನು ಆಧರಿಸಿ ಆಂಜನೇಯ ಬಡಾವಣೆ ಬಳಿ ಹುಡುಕಾಟ ನಡೆಸಲಾಗಿತ್ತು. ಜನ ಸೇರಿದ್ದು ನೋಡಿ ಬಟ್ಟೆ ವ್ಯಾಪಾರಿ ಬಿಟ್ಟು ಖದೀಮರು ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಫೇಸ್‌ಬುಕ್ ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಆ ಬಳಿಕ ದಾವಣಗೆರೆಯ ವಿದ್ಯಾನಗರ ಠಾಣೆಗೆ ಬಟ್ಟೆ ವ್ಯಾಪಾರಿ ದೂರು ನೀಡಿದ್ದು, ತನಿಖೆ ನಡೆಸಿ ಒಟ್ಟು ಹತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಕಾರನ್ನು ಸಹ ವಶಕ್ಕೆ ಪಡೆದಿದ್ದಾರೆ. ಖಾಸಗಿ ಕಾಲೇಜಿನ ವಿದ್ಯಾರ್ಥಿ ಗಂಗಾರಾಮ ಪವಾರ್ ಅಲಿಯಾಸ್ ಬಬ್ಲು ಸೇರಿ 10 ಜನ ಬಂಧಿತರಾಗಿದ್ದು, ಆರೋಪಿ ಗಂಗಾರಾಮ್ ವಿರುದ್ಧ ದಾವಣಗೆರೆ ಮತ್ತು ಅನ್ಯ ಜಿಲ್ಲೆಗಳು ಸೇರಿದಂತೆ ಒಟ್ಟು ಮೂರು ಪ್ರಕರಣ ಇರುವುದು ತನಿಖೆ ವೇಳೆ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us