ಬಿಸಿಯಾಗುತ್ತಿರುವ ಬೆಣ್ಣೆ ನಗರಿ ದಾವಣಗೆರೆ ರಾಜಕಾರಣ; ಕಾಂಗ್ರೆಸ್​ನ ಶಾಮನೂರು ಎದುರು ಸ್ವಪಕ್ಷದಲ್ಲೇ ಹುಟ್ಟಿಕೊಂಡ ಪ್ರತಿಸ್ಪರ್ಧಿಗಳು

ಕಾಂಗ್ರೆಸ್​ನ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ವಪಕ್ಷದಲ್ಲೇ ಪ್ರತಿಸ್ಪರ್ಧಿಗಳು ಇರಲಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಅವರು ಸ್ಪರ್ಧಿಸುತ್ತಿದ್ದ ಕ್ಷೇತ್ರಕ್ಕೆ ಸ್ವಪಕ್ಷದ ನಾಯಕರಿಂದ ಟಿಕೆಟ್​ಗಾಗಿ ಅರ್ಜಿ ಹಾಕಲಾಗಿದೆ.

ಬಿಸಿಯಾಗುತ್ತಿರುವ ಬೆಣ್ಣೆ ನಗರಿ ದಾವಣಗೆರೆ ರಾಜಕಾರಣ; ಕಾಂಗ್ರೆಸ್​ನ ಶಾಮನೂರು ಎದುರು ಸ್ವಪಕ್ಷದಲ್ಲೇ ಹುಟ್ಟಿಕೊಂಡ ಪ್ರತಿಸ್ಪರ್ಧಿಗಳು
ಬಿಸಿಯಾಗುತ್ತಿರುವ ಬೆಣ್ಣೆ ನಗರಿ ದಾವಣಗೆರೆ ರಾಜಕಾರಣ; ಶಾಮನೂರು ಎದುರು ಸ್ವಪಕ್ಷದಲ್ಲೇ ಹುಟ್ಟಿಕೊಂಡ ಪ್ರತಿಸ್ಪರ್ಧಿಗಳು (ಫೋಟೋ: ಶಾಮನೂರು ಶಿವಶಂಕರಪ್ಪ ಮತ್ತು ಬಿಜೆಪಿ ಎಂಎಲ್​ಎ ರವಿಂದ್ರನಾಥ)
Follow us
TV9 Web
| Updated By: Rakesh Nayak Manchi

Updated on:Nov 20, 2022 | 2:13 PM

ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಸಮೀಸುತ್ತಿದ್ದಂತೆ ಬೆಣ್ಣೆ ನಗರಿ ರಾಜಕಾರಣ ದಿನದಿಂದ ದಿನಕ್ಕೆ ಬಿಸಿಯಾಗುತ್ತಿದೆ. ಒಂದುಕಡೆ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರನ್ನ ದೇವರು ಎಂದು ಹೇಳುತ್ತಿದ್ದವರು ಈಗ ಅದೇ ಕ್ಷೇತ್ರಕ್ಕೆ ಟಿಕೆೇಟ್ ಕೇಳುತ್ತಿದ್ದಾರೆ. ಇನ್ನು ಶಾಮನೂರು ಅವರ ಪುತ್ರನೂ ಆಗಿರುವ ಮಾಜಿ ಸಚಿವ ಮಲ್ಲಿಕಾರ್ಜುನ್ ನಡೆ ಇನ್ನೂ ನಿಗೂಢವಾಗಿದೆ. ಇತ್ತ ಬಿಜೆಪಿ ಮತ್ತೊಮ್ಮೆ ರವೀಂದ್ರನಾಥ (MLA Ravindranath) ಅವರನ್ನು ಕಣಕ್ಕಿಳಿಸುವ ಯೋಜನೆ ಹಾಕಿಕೊಂಡಿದೆ. ವಿಚಿತ್ರ ಅಂದರೆ ದಕ್ಷಿಣ ಅಂದರೆ ನಾನೊಬ್ಬನೇ ಎನ್ನುತ್ತಿದ್ದ ಶಾಮನೂರ ವಿರುದ್ಧವೇ ಕೈ ಪಕ್ಷದಲ್ಲಿ ಅಖಾಡ ಸಜ್ಜಾಗಿದೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರು ಮೊದಲು ಟಿಕೇಟ್​ಗೆ ಅರ್ಜಿ ಸಲ್ಲಿಸಬೇಕು. ಹೀಗೊಂದು ನಿಯಮವನ್ನು ಕೆಪಿಸಿಸಿ ಮಾಡಿದೆ. ಇದು ಹತ್ತಾರು ಕುತೂಹಲಕ್ಕೆ ಕಾರಣವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರ ಅಂದರೆ ಶಾಮನೂರು ಶಿವಶಂಕರಪ್ಪ, ಶಾಮನೂರು ಶಿವಶಂಕರಪ್ಪ ಅಂದರೆ ದಕ್ಷಿಣ ಕ್ಷೇತ್ರ ಎನ್ನುವಂತಿತ್ತು. ಅವರಿಗೆ ಸ್ಪಪಕ್ಷದಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲಾ ಎನ್ನವಂತಹ ಪರಿಸ್ಥಿತಿ ಇತ್ತು. ಆದರೆ ಈ ವರ್ಷ ಮಾತ್ರ ಶಾಮನೂರಿಗೆ ಅವರದ್ದೇ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳು ಹುಟ್ಟಿಕೊಂಡಿರುವುದು ಶಾಮನೂರು ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸಾಧಿಕ್ ಪೈಲ್ವಾನ್ ಎಂಬ ಹಿರಿಯ ಕಾಂಗ್ರೆಸ್ ಮುಖಂಡ ಟಿಕೇಟ್​​ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇಷ್ಟುದಿನ ಶಾಮನೂರು ಸ್ಪರ್ಧಿಸುತ್ತಿದ್ದ ಕಾಂಗ್ರೆಸ್ ಟಿಕೇಟ್ ನಮಗೆ ಕೊಡಿ ಎಂದು ಸಾಧಿಕ್ ಪೈಲ್ವಾನ್ ಕೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ಸಿನಲ್ಲಿ ಇದೊಂದು ಹೊಸ ಬದಲಾವಣೆಯಾಗಲಿದೆ. ಮೇಲಾಗಿ ಶಾಮನೂರ ಅವರಿಗೆ ವಯಸ್ಸಾಗಿದೆ ಎಂಬ ವಾದ ಇಟ್ಟುಕೊಂಡು ಟಿಕೇಟ್ ಕೇಳುವ ಪ್ರಯತ್ನ ಇದಾಗಿದೆ. ಇತ್ತೀಚಿಗೆ ಕಕ್ಕರಗೋಳ್ ರಸ್ತೆಯಲ್ಲಿ ಶಾಮನೂರು ಕುಟುಂಬದ ವಿರುದ್ಧ ಕೆಲ ಕಾಂಗ್ರೆಸ್ ಮುಖಂಡರು ಸಭೆ ಮಾಡಿ ಅಚ್ಚರಿ ಮೂಡಿಸಿದ್ದರು. ಈ ಹಿಂದಿನ ಚುನಾವಣೆಯಲ್ಲಿ ಇರುವ ಎಳು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ.

ಇದನ್ನೂ ಓದಿ: ಕಲಘಟಗಿಯಲ್ಲಿ ಸಿದ್ದು ಆಪ್ತ ಸಂತೋಷ್ ಲಾಡ್ ಮತ್ತು ಡಿಕೆಶಿ ಆಪ್ತ ನಾಗರಾಜ್ ಛಬ್ಬಿ ನಡುವೆ ಟಿಕೆಟ್ ಫೈಟ್

“ದಾವಣಗೆರೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಈಗಾಗಲೇ ಹೈಕಮಾಂಡ್ ಮೂರು ಬಾರಿ ಸರ್ವೆ ನಡೆಸಲಾಗಿದೆ. ಅಂತಿಮ ಸರ್ವೆ ಕೂಡ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದರೆ ಸಿದ್ದರಾಮಯ್ಯ ಅವರು ಅರ್ಜಿ ಹಾಕಿದರೆ ಸಾಕು, ಜಿಲ್ಲೆ ಪೂರ್ತಿ ಪಕ್ಷ ಗೆಲ್ಲುತ್ತದೆ” -ಅಬ್ದುಲ್ ಜಬ್ಬಾರ್ ವಿಧಾನ ಪರಿಷತ್ ಸದಸ್ಯ

ಇತ್ತ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ ಅವರ ನಡೆ ಕೂಡಾ ನಿಗೂಢವಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಇವರು ಕಳೆದ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ ವಿರುದ್ಧ ಸೋಲು ಕಂಡಿದ್ದರು. ಹೀಗೆ ಅನಿರೀಕ್ಷಿತ ಸೋಲು ಅರಗಿಸಿಕೊಳ್ಳಲಾಗದೇ ಮೌನಕ್ಕೆ ಶರಣಾಗಿದ್ದರು. ಇನ್ನೇನು 6 ತಿಂಗಳು ಉರುಳಿದರೆ ಚುನಾವಣೆ ಬರುತ್ತದೆ. ಹೀಗಾಗಿ ಟಿಕೆಟ್​ಗಾಗಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಮಾತ್ರ ಇನ್ನೂ ಅರ್ಜಿ ಸಲ್ಲಿಲ್ಲ. ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗಿರುವುದರಿಂದ ಕಾದು ನೋಡಬೇಕಿದೆ. ಆದರೆ ಅತ್ತ ಬಿಜೆಪಿ ಇನ್ನೊಮ್ಮೆ ಮಾಜಿ ಸಚಿವ ಎಸ್.ಎ ರವೀಂದ್ರನಾಥ ಅವರನ್ನ ಉತ್ತರ ಕ್ಷೇತ್ರಕ್ಕೆ ಇಳಿಸಲು ಪ್ಲಾನ್ ಮಾಡಿಕೊಂಡಿದೆ.

“ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟಕ್ಕೆ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಗೆಲ್ಲಿಸಿ ಕೊಡುತ್ತೇನೆ. ಉತ್ತರದಲ್ಲಿ ರವೀಂದ್ರನಾಋ್ ಅವರಿಗೆ ಕೊಡಬೇಕು ಎಂಬುದು ಇದೆ. ಅವರು ನಿಲ್ಲುವುದಿಲ್ಲ ಎಂದರೆ ಇನ್ನೊಬ್ಬ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ” -ಜಿ.ಎಂ. ಸಿದ್ದೇಶ್ವರ, ಸಂಸದ ದಾವಣಗೆರೆ

ಹೀಗೆ ಊರಿಗೆ ನಾನೊಬ್ಬನೇ ರಾಜಾ ಎನ್ನುವಂತಿದ್ದ ಶಾಮನೂರು ಶಿವಶಂಕರಪ್ಪ ಎದುರು ಟಿಕೇಟ್​ಗೆ ಅರ್ಜಿ ಸಲ್ಲಿಸಲು ಅಲ್ಪ ಸಂಖ್ಯಾತರು ಮುಂದಾಗಿದ್ದಾರೆ. ಇನ್ನೊಂದು ಕಡೆ ಶಾಮನೂರು ಕುಟುಂಬದ ವಿರುದ್ಧ ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರೇ ಕೆಂಡ ಕಾರುತ್ತಿದ್ದಾರೆ. ಇದರ ಲಾಭ ಪಡೆದುಕೊಳ್ಳಲು ಕೇಸರಿ ಪಡೆ ಪ್ಲಾನಿಂಗ್ ಮಾಡುತ್ತಲೇ ಇದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Sun, 20 November 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ