ರಾಷ್ಟ್ರೀಯ ಕರಾಟೆ ಚಾಂಪಿಯನ್ ಶೀಪ್​ನಲ್ಲಿ ದಾವಣಗೆರೆ ವಿದ್ಯಾರ್ಥಿನಿಗೆ ಚಿನ್ನದ ಪದಕ

ತನುಜಾ ತಂದೆ ಸತೀಶ್ ಚಿರಡೋಣಿ ಗ್ರಾಮದ ಸರ್ಕಾರ ಶಾಲೆಯ ಶಿಕ್ಷಕ. ಮಗಳಿಗೆ ಕರಾಟೆ ತರಬೇತಿಯನ್ನು ನೀಡಲು ನಿರ್ಧರಿಸಿದ್ದರು. ಇದೇ ವೇಳೆ ಕೆಂಗಾಪುರ ರಾಮಲಿಂಗೇಶ್ವರ ಶಾಲೆಗೆ ಹೊನ್ನಾಳಿ ತಾಲೂಕಿನ ಅಂಬೇಡ್ಕರ ಎಂಬ ಶಿಕ್ಷಕ ಬರುತ್ತಿದ್ದರು.

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶೀಪ್​ನಲ್ಲಿ ದಾವಣಗೆರೆ ವಿದ್ಯಾರ್ಥಿನಿಗೆ ಚಿನ್ನದ ಪದಕ
ಚಿನ್ನದ ಪದಕ ಪಡೆದ ತನುಜಾ
Follow us
TV9 Web
| Updated By: sandhya thejappa

Updated on: Sep 11, 2021 | 2:20 PM

ದಾವಣಗೆರೆ: ಇತ್ತೀಚೆಗೆ ಹಿಮಾಚಲ ಪ್ರದೇಶದ ಸೋಲಾನ್​ನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್​ನಲ್ಲಿ ಚಿನ್ನದ ಪದಕವನ್ನು ತನುಜಾ ಎಂಬ ದಾವಣಗೆರೆ ವಿದ್ಯಾರ್ಥಿನಿ ಮುಡಿಗೇರಿಸಿಕೊಂಡಿದ್ದಾಳೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರದ ನಿವಾಸಿ ಶಿಕ್ಷಕ ಸತೀಶ್ ಹಾಗೂ ಕವಿತಾ ದಂಪತಿಗಳ ಪುತ್ರಿಯಾದ ತನುಜಾ, ಕೆಂಗಾಪುರ ಗ್ರಾಮದ ರಾಮಲಿಂಗೇಶ್ವರ ಆಂಗ್ಲ ಮಾಧ್ಯಯ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾಳೆ. ಈಕೆ ಪುಟ್ಟ ಬಾಲಕಿ ಇದ್ದಾಗಲೂ ಚುರುಕಾಗಿದ್ದಳು. ಇವಳ ಚಲನ ವಲನ ನೋಡಿ ತಂದೆಗೆ ಎನೋ ಉತ್ಸಾಹ. ಮಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಸಮಾಜದಲ್ಲಿ ಸ್ವಾಭಿಮಾನದ ಬದುಕು ನಡೆಸಬೇಕು ಎಂಬ ಹಂಬಲವಿತ್ತು. ಹೀಗೆ ಅಂದುಕೊಂಡ ತಂದೆ ಆಸೆ ಕೊನೆಗೂ ಈಡೇರಿದೆ.

ತನುಜಾ ತಂದೆ ಸತೀಶ್ ಚಿರಡೋಣಿ ಗ್ರಾಮದ ಸರ್ಕಾರ ಶಾಲೆಯ ಶಿಕ್ಷಕ. ಮಗಳಿಗೆ ಕರಾಟೆ ತರಬೇತಿಯನ್ನು ನೀಡಲು ನಿರ್ಧರಿಸಿದ್ದರು. ಇದೇ ವೇಳೆ ಕೆಂಗಾಪುರ ರಾಮಲಿಂಗೇಶ್ವರ ಶಾಲೆಗೆ ಹೊನ್ನಾಳಿ ತಾಲೂಕಿನ ಅಂಬೇಡ್ಕರ ಎಂಬ ಶಿಕ್ಷಕ ಬರುತ್ತಿದ್ದರು. ಅವರು ಕರಾಟೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಅವರಿಗೆ ಶಿಷ್ಯೆಯಾಗಿ ತನುಜಾ ಕರಾಟೆ ತರಬೇತಿ ಪಡೆದಳು. ತರಬೇತಿ ಪಡೆದ ತನುಜಾ ನಿರಂತರವಾಗಿ ಶಾಲಾ ವಾರ್ಷಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುತ್ತಲೇ ಹೋದಳು.

ಗುರು ಅಂಬೇಡ್ಕರ ನಿತ್ಯ ಹತ್ತಾರು ಪ್ರಕಾರದ ಕಸರತ್ತು ಮಾಡಿಸುತ್ತಿದ್ದರು. ತಾವೇ ಶಿಷ್ಯಳೊಂದಿಗೆ ಕರಾಟೆ ಆಗುತ್ತಿದ್ದರು. ಕರಾಟೆಗೆ ಸಂಬಂಧಿಸಿದ ಕೆಲ ವಿಡಿಯೋಗಳನ್ನ ತೋರಿಸುತ್ತ ತನುಜಾಗೆ ಪಾಠ ಮಾಡುತ್ತಿದ್ದರು. ತನುಜಾ ಕೂಡಾ ಹೆಚ್ಚು ಆಸಕ್ತಿ ವಹಿಸಿ ಬೆಳಿಗ್ಗೆ ಆರು ಗಂಟೆಯಿಂದ ಎರಡರಿಂದ ಮೂರು ಗಂಟೆಗಳ ಕಾಲ ಕರಾಟೆ ಅಭ್ಯಾಸ ಮಾಡುತ್ತಿದ್ದಳು. ಗ್ರಾಮ ಮಟ್ಟದಿಂದ ಶುರುವಾದ ತನುಜಾಳ ಕರಾಟೆ ಹೋರಾಟ ಈಗ ರಾಷ್ಟ್ರ ಮಟ್ಟಕ್ಕೆ ತಲುಪಿದೆ.

ತಾಲೂಕು, ಜಿಲ್ಲಾ ಹಾಗೂ ರಾಜ್ಯದಲ್ಲಿ ಹತ್ತು ಹಲವಾರು ಪ್ರಶಸ್ತಿ ಗೆದ್ದ ಹೈಸ್ಕೂಲ್ ಮಕ್ಕಳಿಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಸೋಲಾನ್​ನಲ್ಲಿ ನಡೆದ ಸ್ಪರ್ಧೆಯಲ್ಲಿ ತನುಜಾ ಪಾಲ್ಗೊಂಡಿದ್ದಳು. ಸತತ ಮೂರು ಸುತ್ತಿನಲ್ಲಿ ಎದುರಾಳಿಗೆ ಸಖತ್ ಪಂಚ್ ನೀಡಿ, ಹೈಸ್ಕೂಲ್ ವಿದ್ಯಾರ್ಥಿನಿಯರ ವಿಭಾಗದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

ಇದನ್ನೂ ಓದಿ

US Open 2021: ದಾಖಲೆಯ 31ನೇ ಬಾರಿ ಗ್ರ್ಯಾನ್ ಸ್ಲಾಮ್ ಫೈನಲ್​ಗೆ ಜೋಕೊವಿಚ್: ಇತಿಹಾಸ ನಿರ್ಮಿಸುವ ಅವಕಾಶ

BAN vs NZ: ನ್ಯೂಜಿಲೆಂಡ್ ವಿರುದ್ಧದ ಸರಣಿಯೂ ವಶ: ಒಂದೇ ತಿಂಗಳಲ್ಲಿ ಮೂರು ಸರಣಿ ಗೆದ್ದ ಬಾಂಗ್ಲಾದೇಶ

(Davanagere student won the gold medal in the National Karate Championship)