ದಾವಣಗೆರೆ: ಅನೈತಿಕ ಸಂಬಂಧ ಆರೋಪಿಸಿ ಮಹಿಳೆ ಮೇಲೆ ಹಲ್ಲೆ, 6 ಮಂದಿ ಅರೆಸ್ಟ್​

ಅನೈತಿಕ ಸಂಬಂಧ ಆರೋಪಿಸಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಆರು ಮಂದಿ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 9 ರಂದು ನಡೆದ ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲ್ಲೆಗೊಳಗಾದ ಮಹಿಳೆ ಏಪ್ರಿಲ್ 19 ರಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಲಿದ್ದಾರೆ. ಪೊಲೀಸರು ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ದಾವಣಗೆರೆ: ಅನೈತಿಕ ಸಂಬಂಧ ಆರೋಪಿಸಿ ಮಹಿಳೆ ಮೇಲೆ ಹಲ್ಲೆ, 6 ಮಂದಿ ಅರೆಸ್ಟ್​
ಮಹಿಳೆ ಮೇಲೆ ಹಲ್ಲೆ
Updated By: ವಿವೇಕ ಬಿರಾದಾರ

Updated on: Apr 16, 2025 | 5:33 PM

ದಾವಣಗೆರೆ, ಏಪ್ರಿಲ್​ 16: ಅನೈತಿಕ ಸಂಬಂಧ (Illegal relationship) ಆರೋಪ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ಚನ್ನಗಿರಿ ಪೊಲೀಸ್ ಠಾಣೆ ಪೊಲೀಸರು (Channagiri Police) ಬಂಧಿಸಿದ್ದಾರೆ. ಮಹ್ಮದ್ ನಯಾಜ್ (32), ಮಹ್ಮದ್ ಗೌಸ್ ಪೀರ್ (45), ಚಾಂದ್ ಪೀರ್(35), ಇನಾಯಿತ್ ಉಲ್ಲಾ(51), ದಸ್ತಗೀರ್(24) ಹಾಗೂ ರಸೂಲ್ ಟಿಆರ್ (42) ಹಲ್ಲೆ ಮಾಡಿದ ಆರೋಪಿಗಳು. ಹಲ್ಲೆಗೊಳಗಾದ ಮಹಿಳೆ ಮೇಲೆ ಅನೈತಿಕ ಸಂಬಂಧ ಆರೋಪ ಹೊರಿಸಿ ಬಂಧಿತ ಆರೋಪಿಗಳು ಏಪ್ರಿಲ್​ 9ರಂದು ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದ ಜಾಮಿಯಾ ಮಸೀದಿ ಬಳಿ ಕಲ್ಲು, ಕಬ್ಬಿಣದ ಪೈಪ್​, ದೊಣ್ಣೆಯಿಂದ ಹಲ್ಲೆ ಮಾಡಿದ್ದರು.

ಮಹಿಳೆ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ಏಪ್ರಿಲ್​ 13ರಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಹಲ್ಲೆಗೊಳಗಾದ ಮಹಿಳೆಯ ಸಂಬಂಧಿಕರೊಬ್ಬರು ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ಇಳಿದ ಪೊಲೀಸರು, ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಇನ್ನು, ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆ ಏಪ್ರಿಲ್​ 19ರಂದು ಚನ್ನಗಿರಿ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ: ತನ್ನಿಬ್ಬರು ಮಕ್ಕಳನ್ನು ಕೊಮದು ತಂದೆ ಆತ್ಮಹತ್ಯೆಗೆ ಶರಣು

ಇದನ್ನೂ ಓದಿ
ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಬಸ್​ನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
ಬ್ಯಾಂಕ್ ದರೋಡೆ ಮಾಡಲೆಂದೇ ಆ ವೆಬ್​ ಸಿರೀಸ್ ನೋಡಿದ್ದ ಸಹೋದರರು
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ದಾವಣಗೆರೆ: ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಜಲಸಮಾಧಿ

ಇಬ್ಬರು ಮನೆಗಳ್ಳರ ಬಂಧನ

ಬೆಂಗಳೂರು: ಸಿದ್ದಾಪುರ ಪೊಲೀಸರು ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದಾರೆ. ಸೈಯದ್ ಇಮ್ತಿಯಾಜ್, ಇಮ್ರಾನ್ ಖಾನ್ ಬಂಧಿತ ಆರೋಪಿಗಳು. ಆರೋಪಿಗಳು ಮೊದಲು ಬೈಕ್ ಕಳ್ಳತನ ಮಾಡುತ್ತಿದ್ದರು. ಬಳಿಕ ಕದ್ದ ಬೈಕ್​ನಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಆರೋಪಿಗಳ ಬಳಿಯಿಂದ ಇಪತ್ತು ಬೈಕ್ ಮತ್ತು ಚಿನ್ನ ಆಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಇಪತ್ತಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಬೆಂಗಳೂರಿನ ವಿವಿಧ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕಳ್ಳತನ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ