AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅನಾರೋಗ್ಯ ನಾಟಕವಾಡಿ ಚುನಾವಣೆ ಮುಂದೂಡಿದ ಅಧಿಕಾರಿ; ಗ್ರಾ.ಪಂ ಸದಸ್ಯರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮದಲ್ಲಿ ಇದೇ ಎರಡರಂದು ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ‌ ನಡೆಯಬೇಕಿತ್ತು. ಸದಸ್ಯರು ಸಕಾಲಕ್ಕೆ ಹಾಜರಾದ್ರು ಚುನಾವಣೆ ನಡೆಸದೆ ಅನಾರೋಗ್ಯದ ಕಾರಣ ಹೇಳಿ ಚುನಾವಣಾ ಅಧಿಕಾರಿ ನಾಪತ್ತೆಯಾಗಿದ್ದಾರೆ.

ದಾವಣಗೆರೆ: ಅನಾರೋಗ್ಯ ನಾಟಕವಾಡಿ ಚುನಾವಣೆ ಮುಂದೂಡಿದ ಅಧಿಕಾರಿ; ಗ್ರಾ.ಪಂ ಸದಸ್ಯರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ
ಸದಸ್ಯರ ಪ್ರತಿಭಟನೆ ವೇಳೆ ಹರಪನಹಳ್ಳಿ ಉಪವಿಭಾಗಾಧಿಕಾರಿ ಟಿವಿ ಪ್ರಕಾಶ್ ಭೇಟಿ ನೀಡಿ ಮಾತುಕತೆ ನಡೆಸಿದರು.
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Aug 09, 2023 | 12:02 PM

Share

ದಾವಣಗೆರೆ, ಆ.09: ಅನಾರೋಗ್ಯದ ನೆಪ ಹೇಳಿ ಅಧಿಕಾರಿಯೊಬ್ಬ ಚುನಾವಣೆಯನ್ನೆ ಮುಂದೂಡಿದ(Official Postpones Election) ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ಅಧಿಕಾರಿ ಕಾಂಗ್ರೆಸ್ ಪಕ್ಷದ ಎಜೆಂಟ್​ನಂತೆ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಇತರ ಸದಸ್ಯರು ಆಕ್ರೋಶಗೊಂಡು ಧರಣಿ ಸತ್ಯಾಗ್ರಹ(Protest) ಮಾಡುತ್ತಿದ್ದಾರೆ‌. ಸತತ ಎರಡನೇ ಸಲ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆ ಹಿನ್ನೆಲೆ ನಿರಂತರ ಹೋರಾಟ ನಡೆಯುತ್ತಿದೆ. ತೊಗರಿಕಟ್ಟೆ ಗ್ರಾ.ಪಂ ಸದಸ್ಯರ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮದಲ್ಲಿ ಇದೇ ಎರಡರಂದು ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ‌ ನಡೆಯಬೇಕಿತ್ತು. ಕಾರಣಾಂತರದಿಂದ ಮೊನ್ನೆ ಚುನಾವಣೆ ನಡೆಸಲು ನಿರ್ಧಾರ ಮಾಡಲಾಗಿತ್ತು. ಸದಸ್ಯರು ಸಕಾಲಕ್ಕೆ ಹಾಜರಾದ್ರು ಚುನಾವಣೆ ನಡೆಸದೆ ಅನಾರೋಗ್ಯದ ಕಾರಣ ಹೇಳಿ ಚುನಾವಣಾ ಅಧಿಕಾರಿ, ಗ್ರಾಮೀಣ ನೀರು ಪೂರೈಕೆ ವಿಭಾಗದ ಇಂಜಿನೀಯರ್ ಪ್ರಸನ್ನ ಅವರು ನಾಪತ್ತೆಯಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಬಂಡೀಪುರ ಸಫಾರಿಗೆ ಹೋಗುವವವರಿಗೆ ಗುಡ್ ನ್ಯೂಸ್: ಪ್ರವಾಸಿಗರಿಗೆ ಇನ್ಮುಂದೆ ವಿಮಾ ಸೌಲಭ್ಯ

19 ಜನ ಸದಸ್ಯ ಬಲದ ಗ್ರಾ.ಪಂನಲ್ಲಿ ಹನ್ನೊಂದು ಜನ ಬಿಜೆಪಿ ಬೆಂಬಲಿತ ಸದಸ್ಯರಿದ್ದು ಉದ್ದೇಶ ಪೂರ್ವಕವಾಗಿ ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯತ್ ಸುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು ಮತ್ತೊಂದೆಡೆ ಚುನಾವಣಾ ಅಧಿಕಾರಿ ಆಸ್ಪತ್ರೆಗೆ ಹೋಗಿ‌ ನಾಟಕವಾಡಿ ಅಲ್ಲಿ ಇಲ್ಲಿ ಸುತ್ತಾಡುತ್ತ ಕಾಲ ಕಳೆಯುತ್ತಿದ್ದಾರೆ. ಸ್ಥಳಕ್ಕೆ ಹರಪನಹಳ್ಳಿ ಉಪವಿಭಾಗಾಧಿಕಾರಿ ಟಿವಿ ಪ್ರಕಾಶ ಭೇಟಿ ನೀಡಿದ್ದರು. ಸದಸ್ಯರ ಜೊತೆ ಮಾತು ಕತೆ ನಡೆಸಿದರು. ಈ ವಿಚಾರವನ್ನ ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇವೆ. ಹೋರಾಟದಿಂದ ಹಿಂದೆ ಸರಿಯಿರಿ ಎಂದು ಸದಸ್ಯರಿಗೆ ವಿನಂತಿಸಿದರು.‌ ಆದ್ರೆ ಸದಸ್ಯರು ಮಾತ್ರ ಅಧಿಕಾರಿಯ ಮಾತನ್ನು ಒಪ್ಪದೇ ಹೋರಾಟ ಮುಂದುವರಿಸಿ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ದಾವಣಗೆರೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:01 pm, Wed, 9 August 23