ಕರ್ನಾಟಕದಲ್ಲಿ 33 ಲಕ್ಷ ರೈತರಿಗೆ ಸಾಲ ಕೊಡಲು ನಿರ್ಧಾರ; ಸಚಿವ ಎಸ್​ಟಿ ಸೋಮಶೇಖರ್ ಮಾಹಿತಿ

| Updated By: sandhya thejappa

Updated on: Jun 28, 2022 | 11:27 AM

ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲಕ್ಕೆ ಆಸ್ಪದವಿಲ್ಲ. ಅಕ್ಟೋಬರ್ 2ರಿಂದ ಯಶಸ್ವಿನಿ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ. ಮಹತ್ವಾಕಾಂಕ್ಷೆ ಯಶಸ್ವಿನಿ ಯೋಜನೆ ಮತ್ತೆ ಆರಂಭವಾಗಲಿದೆ.

ಕರ್ನಾಟಕದಲ್ಲಿ 33 ಲಕ್ಷ ರೈತರಿಗೆ ಸಾಲ ಕೊಡಲು ನಿರ್ಧಾರ; ಸಚಿವ ಎಸ್​ಟಿ ಸೋಮಶೇಖರ್ ಮಾಹಿತಿ
ಸಚಿವ ಎಸ್​ಟಿ ಸೋಮಶೇಖರ್
Follow us on

ದಾವಣಗೆರೆ: ರಾಜ್ಯದಲ್ಲಿ 33 ಲಕ್ಷ ರೈತರಿಗೆ (Farmers) 24 ಸಾವಿರ ಕೋಟಿ ರೂ. ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಸಹಹಾರ ಇಲಾಖೆ ಸಚಿವ ಎಸ್​ಟಿ ಸೋಮಶೇಖರ್ (ST Somashekar) ಮಾಹಿತಿ ನೀಡಿದ್ದಾರೆ. ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲಕ್ಕೆ ಆಸ್ಪದವಿಲ್ಲ. ಅಕ್ಟೋಬರ್ 2ರಿಂದ ಯಶಸ್ವಿನಿ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ. ಮಹತ್ವಾಕಾಂಕ್ಷೆ ಯಶಸ್ವಿನಿ ಯೋಜನೆ ಮತ್ತೆ ಆರಂಭವಾಗಲಿದೆ. ಈಗಾಗಲೇ ಇಲಾಖೆ ಕಡೆಯಿಂದ ಎಲ್ಲ ತಯಾರಿ ಆಗಿದೆ ಎಂದು ತಿಳಿಸಿದ ಸಚಿವರು, ಈಗಾಗಲೇ ಹಾಲು ಉತ್ಪಾಕರಿಗೆ ಅನುಕೂಲ ಆಗುವಂತೆ ಕ್ಷೀರ ಸಹಕಾರ ಬ್ಯಾಂಕ್ ಆರಂಭಿಸುವ ಯೋಜನೆ ಇದೆ. 9 ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಉದ್ದೇಶವಿದೆ ಎಂದು ಹೇಳಿದರು.

ಕುಮಾರಸ್ವಾಮಿಗೆ ಸೋಮಶೇಖರ್ ಎಚ್ಚರಿಕೆ:
ಇದೇ ವೇಳೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸೋಮಶೇಖರ್, ಮಾತನಾಡುವಾಗ ಹೆಚ್​ಡಿಕೆ ಸ್ವಲ್ಪ ಘನತೆಯಿಂದ ಮಾತಾಡಲಿ. ಆರ್​ಎಸ್​ಎಸ್​ನವರಿಗೆ 40% ಕಮಿಷನ್ ಕೊಡುತ್ತಾರೆ ಅಂದರೆ ಏನು ಅರ್ಥ. ದೇಶಭಕ್ತ ಸಂಘಟನೆ ಆರ್​ಎಸ್​ಎಸ್​ ಬಗ್ಗೆ ಮಾತನಾಡುವುದು ಸರಿಯಲ್ಲ ಕುಮಾರಸ್ವಾಮಿಗೆ ಏನು ಮಾತಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಸಂಪೂರ್ಣ ಹತಾಶರಾಗಿದ್ದಾರೆ. ಇದೇ ಕಾರಣಕ್ಕೆ ಈ ರೀತಿಯಾದ ಆರೋಪಗಳನ್ನ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ಸ್ವಲ್ಪ ವಿಚಾರಿಸಿ ಮಾತನಾಡಬೇಕು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಂಡ್ಯ: ಮರ್ಡರ್ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಹಂತಕರು ಅಡ್ಡಗಟ್ಟಿದ ಬೈಕ್ ಸೀಜರ್ ಗೆ ಬಹಳ ಕೂಲಾಗಿ ಕೊಲೆ ಮಾಡಿ ಬರ್ತಾ ಇದ್ದೀವಿ ಅನ್ನುತ್ತಾರೆ!

ಇದನ್ನೂ ಓದಿ
Viral Video: ನಿಮ್ಮ ವಿದ್ಯಾರ್ಹತೆ ಏನೆಂದು ಕೇಳಿದ ಟ್ವಿಟ್ಟಿಗನಿಗೆ ಅಚ್ಚರಿಯ ಉತ್ತರ ನೀಡಿದ ಆನಂದ್ ಮಹೀಂದ್ರಾ
Pallonji Mistry: ಶತಕೋಟ್ಯಧಿಪತಿ ಉದ್ಯಮಿ, ಟಾಟಾ ಸಮೂಹದ ಪ್ರಮುಖ ಷೇರುದಾರರು ಪಲ್ಲೋಂಜಿ ಮಿಸ್ತ್ರಿ 93ನೇ ವಯಸ್ಸಿನಲ್ಲಿ ನಿಧನ
Ganesh Birthday: ಜನ್ಮದಿನದ ಸಲುವಾಗಿ ಅಭಿಮಾನಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡ ‘ಗೋಲ್ಡನ್​ ಸ್ಟಾರ್​’ ಗಣೇಶ್​
Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ

ಪ್ರಮುಖ ನಾಯಕರು ಬಿಜೆಪಿಗೆ ಬರಲಿದ್ದಾರೆ- ಭೈರತಿ ಬಸವರಾಜ್:
ಬೇರೆ ಪಕ್ಷಗಳ ಪ್ರಮುಖ ನಾಯಕರು ಬಿಜೆಪಿಗೆ ಬರಲಿದ್ದಾರೆ ಎಂದು ಸಚಿವ ಭೈರತಿ ಬಸವರಾಜ್ ದಾವಣಗೆರೆಯಲ್ಲಿ ಹೇಳಿಕೆ​ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಕಷ್ಟು ನಾಯಕರು ಪಕ್ಷಕ್ಕೆ ಬರಲಿದ್ದಾರೆ. ಯಾರೆಲ್ಲ ಬರುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.

ಪಠ್ಯ ಪರಿಷ್ಕರಣೆ ವಿಚಾರವನ್ನು ಕಾಂಗ್ರೆಸ್ ದೊಡ್ಡದು ಮಾಡುತ್ತಿದೆ. ಕಾಂಗ್ರೆಸ್​ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಕೈ ಬಿಡಲಿ. ಪಠ್ಯ ಪರಿಷ್ಕರಣೆ ವಿಚಾರವಾಗಿ ಎಲ್ಲರ ಮನವಿಗಳಿಗೂ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ ಎಂದು ಭೈರತಿ ಬಸವರಾಜ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Viral Video: ನಿಮ್ಮ ವಿದ್ಯಾರ್ಹತೆ ಏನೆಂದು ಕೇಳಿದ ಟ್ವಿಟ್ಟಿಗನಿಗೆ ಅಚ್ಚರಿಯ ಉತ್ತರ ನೀಡಿದ ಆನಂದ್ ಮಹೀಂದ್ರಾ

Published On - 11:22 am, Tue, 28 June 22