AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡುಕರ ಅಡ್ಡವಾದ ಶಾಲಾ ಆವರಣ: ಜ್ಞಾನದೇಗುಲ ಅಂಗಳದಲ್ಲಿ ಬರೋಬರಿ 12 ನೂರು ಮದ್ಯದ ಬಾಟಲ್​ಗಳು ಪತ್ತೆ

ಶಾಲಾ ಆವರಣದಲ್ಲಿ‌ ಕುಡುಕರ ಹಾವಳಿ ಹೆಚ್ಚಾಗಿದ್ದು, ಶಾಲೆಯ ಅಂಗಳದಲ್ಲಿ‌ಬರೋಬರಿ 12 ನೂರು ಮದ್ಯದ ಬಾಟಲ್​ಗಳು ಪತ್ತೆ ಆಗಿರುವಂತಹ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಕುಡುಕರ ಅಡ್ಡವಾದ ಶಾಲಾ ಆವರಣ: ಜ್ಞಾನದೇಗುಲ ಅಂಗಳದಲ್ಲಿ ಬರೋಬರಿ 12 ನೂರು ಮದ್ಯದ ಬಾಟಲ್​ಗಳು ಪತ್ತೆ
ಪತ್ತೆಯಾದ ಮದ್ಯ ಬಾಟಲ್​ಗಳು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 01, 2023 | 2:04 PM

Share

ದಾವಣಗೆರೆ: ಶಾಲಾ ಆವರಣದಲ್ಲಿ‌ ಕುಡುಕರ ಹಾವಳಿ ಹೆಚ್ಚಾಗಿದ್ದು, ಶಾಲೆಯ (school) ಅಂಗಳದಲ್ಲಿ‌ ಬರೋಬರಿ 12 ನೂರು ಮದ್ಯದ ಬಾಟಲ್ (liquor bottles) ​ಗಳು ಪತ್ತೆ ಆಗಿರುವಂತಹ ಘಟನೆ ದಾವಣಗೆರೆ ತಾಲ್ಲೂಕಿನ ಜರೇಕಟ್ಟೆ ಗ್ರಾಮದ ಸರ್ಕಾರಿ ಅನುದಾನಿತ ಶ್ರೀ ಆಂಜನೇಯ ಸ್ವಾಮೀ ವಸತಿ ಪ್ರೌಢ ಶಾಲೆಯ ಆವರಣದಲ್ಲಿ ಕಂಡುಬಂದಿದೆ. ರಾತ್ರಿ ಆಗುತ್ತಿದ್ದಂತೆ ಶಾಲಾ ಆವರಣ ಬಾರ್​ ಆಗುತ್ತಿದೆ. ಕುಡಿದ ಮತ್ತಿನಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಕಿ ಹೋಗುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿ ಪ್ರಶ್ನೆ ಮಾಡಿದ್ರೆ ಕುಡುಕರು ಹಲ್ಲೆಗೆ‌ ಮುಂದಾಗುತ್ತಿದ್ದಾರೆ. ಶಾಲಾಮಕ್ಕಳು ಆಟವಾಡುವಾಗ ಗಾಜಿನ ಚೂರುಗಳು ಚುಚ್ಚಿ ಗಾಯಗಳಾಗಿವೆ ಅಲ್ಲದೆ ಮಾನಸಿಕವಾಗಿ ಮಕ್ಕಳಲ್ಲಿ ಮದ್ಯದ ಬಗೆಗಿನ ಆಸಕ್ತಿ ಹೆಚ್ಚುತ್ತಿದೆ. ಇದು ದುರಂತಕಾರಿ ಬೆಳವಣಿಗೆ ಎಂದು ಶಾಲೆಯ ಶಿಕ್ಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: 43 ವರ್ಷ ಬಳಿಕ ತುಂಬಿದ ಅಣಜಿ ಕೆರೆಯಿಂದ ನೀರು ಹೊರಬಿಡಿ ಎಂಬ ಅಚ್ಚರಿಯ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ! ಏನು ಕಾರಣ?

ಪೊಲೀಸರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ‌

ಶಾಲೆಯ ಸುತ್ತಮುತ್ತ ಕಾಂಪೌಂಡ್ ಇಲ್ಲದೇ ಇರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಸಂಬಂಧಪಟ್ಟವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಕಷ್ಟುಬಾರಿ ಮನವಿ ಮಾಡಿದರು ಏನು ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥ ಮಹಿಳೆಯರು ಆರೋಪಿಸಿದ್ದಾರೆ. ಈ ಬಗ್ಗೆ ಸ್ಥಳೀಯ ‌ಪೊಲೀಸರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ‌. ಇದನ್ನು ಮನಗಂಡ ಯುವಾ ಬ್ರಿಗೇಡ್ ದಾವಣಗೆರೆ ತಂಡ ಶಾಲೆಯ ಸುತ್ತಮುತ್ತ ಬಿದ್ದಿದ್ದ 1200ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ಸೂಕ್ತ ಜಾಗದಲ್ಲಿ ವಿಸರ್ಜಿಸಿದ್ದಾರೆ. ಗ್ರಾಮದ ಜನರಲ್ಲಿ ಸ್ವಚ್ಚತೆಯ ಬಗೆಗಿನ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ: ದಾವಣಗೆರೆ: ಇಲ್ಲಿ ದೀಪಗಳದ್ದೆ ದರ್ಬಾರು! ಆದ್ರೆ ಅದು ದೀಪಾವಳಿಯಲ್ಲ: ಇಲ್ಲಿದೆ ಸ್ಪೆಷಲ್ ದೀಪೋತ್ಸವದ ದೃಶ್ಯ ವೈಭವ

ಐತಿಹಾಸಿಕ ಅಣಜಿ‌ ಕೆರೆ ಕೋಡಿ ಒಡೆದು ನೀರು ಹೊರಕ್ಕೆ 

ಐತಿಹಾಸಿಕ ಅಣಜಿ‌ ಕೆರೆ ಕೋಡಿ ಒಡೆದು ನೀರು ಹೊರಕ್ಕೆ ಬಿಟ್ಟ ವಿಚಾರವಾಗಿ ಡಿಸಿ ಶಿವಾನಂದ ಕಾಪಶಿ ಹಾಗೂ ಶಾಸಕ ಪ್ರೊ.ಲಿಂಗಣ್ಣ ಸ್ಥಳಕ್ಕೆ ಭೇಟಿ ನೀಡಿದರು. ಕೋಡಿ‌ನೀರು ಹೊರ ಬಿಟ್ಟ ಹಿನ್ನೆಲೆ ತಮ್ಮ ಜಮೀನಿಗೆ ನೀರು ನುಗ್ಗುತ್ತಿದೆ ಎಂದು ಕೆರೆ ಕೆಳಭಾಗದ ರೈತರು ಆಕ್ರೋಶ ವ್ಯಕ್ತ ಪಡಿಸಿದರು. ಕೆರೆ ನೀರು ಕಡಿಮೆ ಮಾಡಿಬೇಕು ಅಂದು ಕೆರೆ ಮೇಲ್ಭಾಗದ ರೈತರು ಆಗ್ರಹಿಸಿದ್ದರು. ಸರ್ವೇಗೆ ಮುಂದಾದ ಡಿಸಿ-ಒತ್ತುವರಿದಾರರಿಗೆ ನಡುಕ ಶುರುವಾಗಿದೆ. ಕೆರೆ ನೀರಿನಿಂದ ಅಪಾರ ಪ್ರಮಾಣದ ಹಾನಿ ಆಗಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದರು. ಇಡಿ ಕೆರೆ ಜಮೀನು ಸರ್ವೇಗೆ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಸರ್ವೇ ಆದ ಬಳಿಕ‌ ಉದ್ಯೋಗ ಖಾತ್ರಿ ಅಥವಾ ಬೇರೆ ಅನುದಾನ ಪಡೆದು ಕೆರೆ ಜಮೀನು ಹದ್ದು ಬಸ್ತು ಮಾಡಲು ನಿರ್ಧರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.