ದಾವಣೆಗೆರೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಪುತ್ರ ಪ್ರಶಾಂತ್ಗೆ ಇಡಿ ಭೀತಿ
ಮಾಡಾಳ್ ಪ್ರಶಾಂತ್ ಮನೆಯಲ್ಲಿ ಕೋಟ್ಯಂತರ ಹಣ ಪತ್ತೆ ಹಿನ್ನೆಲೆ ಪ್ರಶಾಂತ್ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆ ಇದೆ.
ದಾವಣಗೆರೆ: ದಾವಣಗೆರೆಯ ಚನ್ನಗಿರಿ ಶಾಸಕ, ಕೆಎಸ್ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ, ಹಾಗೂ ಅವರ ಪುತ್ರನ ಮನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ(Lokayukta Raid) ನಡೆದಿದೆ. ಬೆಂಗಳೂರು, ದಾವಣಗೆರೆ, ಹಾವೇರಿಗಳಲ್ಲಿ ದಾಳಿ ನಡೆಸಿ 8 ಕೋಟಿಗೂ ಹೆಚ್ಚು ಹಣ, ಚಿನ್ನ, ಆಸ್ತಿಪತ್ರಗಳು ಪತ್ತೆಯಾಗಿವೆ. ಸದ್ಯ ಈ ಪ್ರಕರಣ ಸಂಬಂಧ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Madalu Veerupakshappa), ಪುತ್ರ ಪ್ರಶಾಂತ್ಗೆ ಇಡಿ ಭೀತಿ ಎದುರಾಗಿದೆ.
ಮಾಡಾಳ್ ಪ್ರಶಾಂತ್ ಮನೆಯಲ್ಲಿ ಕೋಟ್ಯಂತರ ಹಣ ಪತ್ತೆ ಹಿನ್ನೆಲೆ ಪ್ರಶಾಂತ್ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆ ಇದೆ. ಬೆಂಗಳೂರು, ದಾವಣಗೆರೆ ಜಿಲ್ಲೆ ಚನ್ನಗಿರಿಯ ಮನೆಗಳ ಮೇಲೆ ದಾಳಿ ಸಾಧ್ಯತೆ ಇದೆ. ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಇಡಿಗೆ ಮಾಹಿತಿ ನೀಡಿದ್ದು PMLA ಅಡಿ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ನಡೆಸುವ ಸಾಧ್ಯತೆಗಳು ಹೆಚ್ಚಿವೆ.
ಈಗಾಗಲೇ ಲೋಕಾಯುಕ್ತ ದಾಳಿ ಮುಕ್ತಾಯವಾಗಿದ್ದು ಶಾಸಕ ಮಾಡಾಳ್ ಗಾಗಿ ಹುಡುಕಾಟ ನಡೆಯುತ್ತಿದೆ. ದಾಳಿ ವೇಳೆ 16.5 ಲಕ್ಷ ಕ್ಯಾಶ್, ಒಂದೂವರೆ ಕೋಟಿ ರೂಪಾಯಿ ಮೌಲ್ಯದ 2800 ಗ್ರಾಂ ಚಿನ್ನ, 26 kg ಬೆಳ್ಳಿ, ಡಿವಿಆರ್ ಹಾಗೂ ಅಪಾರ ಬೇನಾಮಿ ಆಸ್ತಿಯ ಪ್ರಮಾಣ ಪತ್ರಗಳು ಪತ್ತೆಯಾಗಿವೆ. ವಾಹನ ಮತ್ತು ಆಸ್ತಿ ಸಂಬಂಧಿಸಿದಂತೆ ದಾಖಲಾತಿ ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್ ಖಾತೆಗಳ ಮಾಹಿತಿ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಮಾಡಾಳ್ ವಿರೂಪಾಕ್ಷಪ್ಪರಿಗೆ ಬಂಧನದ ಭೀತಿ ಎದುರಾಗಿದೆ. ಈಗಾಗಲೇ ಲೋಕಸಯುಕ್ತ ಕೇಸ್ ನಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಥಮ ಆರೋಪಿ ಆಗಿದ್ದಾರೆ. ಎಫ್ಐಆರ್ ಇಟ್ಟುಕೊಂಡು ಲೋಕಾಯುಕ್ತ ಪೊಲೀಸರು ಮಾಡಾಳ್ ಶೋಧ ನಡೆಸುತ್ತಿದ್ದಾರೆ. ಮತ್ತೊಂದೆಡೆ ತಲೆ ಮೆರಸಿಕೊಂಡು ಜಾಮೀನಿಗಾಗಿ ಮಾಡಳ್ ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಮಾಡಾಳ್ ನಿವಾಸದಲ್ಲಿ ಸಿಕ್ಕಿತು ಕೆಜಿಗಟ್ಟಲೆ ಆಭರಣ, ಲಕ್ಷ ಲಕ್ಷ ನಗದು: ಲೋಕಾಯುಕ್ತ ಶೋಧ ಅಂತ್ಯ
ಕೆಎಸ್ಡಿಎಲ್ಗೆ ಟೆಂಡರ್ ಕೊಡಿಸೋದಕ್ಕಾಗಿ, 40 ಲಕ್ಷ ಹಣ ಪಡೆಯುತ್ತಿದ್ದ ಪ್ರಶಾಂತ್ರನ್ನ ರೆಡ್ಹ್ಯಾಂಡಾಗಿ ಹಿಡಿದಿದ್ರು. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿಯ ಮೂಲೆ ಮೂಲೆಯನ್ನೂ ಜಾಲಾಡಿದ್ರು. ಈ ವೇಳೆ 2 ಕೋಟಿ ಹಣ ಪತ್ತೆಯಾಗಿತ್ತು. BWSSB ಚೀಫ್ ಅಕೌಂಟೆಂಟ್ ಆಗಿರುವ ಎಂಎಲ್ಎ ಪುತ್ರ ಪ್ರಶಾಂತ್ ಸೇರಿದಂತೆ ಸಂಬಂಧಿ ಸಿದ್ದೇಶ್, ಅಕೌಂಟೆಂಟ್ ಸುರೇಂದ್ರ, ಹಣ ನೀಡ್ತಿದ್ದ ನಿಕೋಲಸ್ ಮತ್ತು ಗಂಗಾಧರ್ರನ್ನ ಬಂಧಿಸಿದ್ರು. ಬರೀ ಕಚೇರಿ ಮಾತ್ರವಲ್ಲ ಬೆಂಗಳೂರಿನ ಸಂಜಯ್ನಗರದಲ್ಲಿರುವ ಕೆಎಂವಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಮೇಲೂ ರೇಡ್ ಮಾಡಿದ್ರು. ನಿನ್ನೆ(ಮಾರ್ಚ್ 03) ಸಂಜೆಯಿಂದ ಇವತ್ತು ಮಧ್ಯಾಹ್ನದ ತನಕ ತಲಾಶ್ ನಡೆಸಿದ್ರು. ಈ ವೇಳೆ 6 ಕೋಟಿ 10 ಲಕ್ಷ ನಗದು 1.6 ಕೆಜಿ ಚಿನ್ನ, ಆಸ್ತಿಪತ್ರಗಳು ದೊರಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:45 am, Sat, 4 March 23