ದಾವಣಗೆರೆ: ಖ್ಯಾತ ನಟಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು ಕಾರಿನಲ್ಲಿದ್ದ 66 ಕೆಜಿ ಬೆಳ್ಳಿ ಜಪ್ತಿ
ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು ಕಾರಿನಲ್ಲಿ ಅಕ್ರಮವಾಗಿ ಬೆಳೆಬಾಳುವ ಬೆಳ್ಳೆ ಸಾಮಾಗ್ರಿಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಚುನಾವಣೆ ಹಿನ್ನೆಲೆ ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಪತ್ತೆಯಾಗಿದೆ.
ದಾವಣಗೆರೆ: ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು (BMW) ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 66 ಕೆಜಿ ಬೆಳ್ಳಿ (Silver) ಸಾಮಾಗ್ರಿಗಳನ್ನು ದಾವಣಗೆರೆ (Davanagere) ತಾಲೂಕಿನ ಹೆಬ್ಬಾಳ ಟೋಲ್ ಬಳಿ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರ್ ಜಪ್ತಿ ಮಾಡಿದ್ದಾರೆ. ಚುನಾವಣಾಧಿಕಾರಿ, ತಹಶೀಲ್ದಾರ್ ಡಾ.ಅಶ್ವತ್ಥ್ ತಪಾಸಣೆ ನಡೆಸುತ್ತಿದ್ದಾಗ ಬಿಎಂಡಬ್ಲ್ಯು ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಕ್ಸ್ಗಳು ಪತ್ತೆಯಾಗಿದ್ದು, ಇನ್ನಷ್ಟು ತಪಾಸಣೆ ನಡೆಸಿದಾಗ ಅದರೊಳಗೆ ಬೆಳ್ಳಿ ಸಾಮಾಗ್ರಿಗಳು ಪತ್ತೆಯಾಗಿವೆ. ಅವುಗಳ ಒಟ್ಟು ಮೌಲ್ಯ 39 ಲಕ್ಷ ಎನ್ನಲಾಗಿದೆ. ಸದ್ಯ 66 ಕೆಜಿ ಬೆಳ್ಳಿ ಹಾಗೂ ಬಿಎಂಡಬ್ಲ್ಯು ಕಾರು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದ್ದು, ಈ ಸ್ವತ್ತುಗಳು ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ್ದು ಎಂದು ತಿಳಿದುಬಂದಿದೆ.
ಹೌದು, ಖ್ಯಾತ ನಟಿ ದಿವಂಗತ ಶ್ರೀದೇವಿ ಪತಿಯೂ ಆಗಿರುವ ಚಿತ್ರ ನಿರ್ಮಾಪ ಬೋನಿ ಕಪೂರ್ ಕುಟುಂಬಕ್ಕೆ ಸೇರಿದ ಕಾರು ಮತ್ತು ಬೆಳ್ಳಿ ಇದಾಗಿದೆ. ಆದರೆ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಬೋನಿ ಕಪೂರ್ ಕುಟುಂಬಸ್ಥರು ಇರಲಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಡಾ. ಅಶ್ವಥ್, ಜಪ್ತಿ ಮಾಡಿದ ಬೆಳ್ಳಿ ವಸ್ತುಗಳು ಮತ್ತು ಕಾರು ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿದ್ದಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 pm, Fri, 7 April 23