ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಕಾಮುಕ ಶಿಕ್ಷಕನಿಗೆ ಸ್ಥಳೀಯರಿಂದ ಧರ್ಮದೇಟು

ವಿದ್ಯಾರ್ಥಿನಿಯರು ಮನೆಯಲ್ಲಿ ಹೇಳಿದ ಹಿನ್ನೆಲೆ ಶಾಲೆಗೆ ಬಂದು ಆರೋಪಿ ಶಿಕ್ಷಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಕೆಲ ದಿನಗಳಿಂದ ವಿದ್ಯಾರ್ಥಿಯರಿಗೆ ಶಿಕ್ಷಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಕಾಮುಕ ಶಿಕ್ಷಕನಿಗೆ ಸ್ಥಳೀಯರಿಂದ ಧರ್ಮದೇಟು
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಲೋಕೇಶ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 01, 2022 | 11:14 AM

ದಾವಣಗೆರೆ: ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ (sexual harassment) ನೀಡಿದ್ದು, ಸ್ಥಳೀಯರು ಶಿಕ್ಷಕನಿಗೆ ಗೂಸಾ ನೀಡಿರುವಂತಹ ಘಟನೆ ಜಿಲ್ಲೆ ಚನ್ನಗಿರಿ ತಾಲೂಕಿನ ಯರಗಟ್ಟೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಲೋಕೇಶ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಥಮಿಕ ಶಾಲೆ ಶಿಕ್ಷಕ. ಈ ವಿಚಾರವನ್ನು ವಿದ್ಯಾರ್ಥಿನಿಯರು ಮನೆಯಲ್ಲಿ ಹೇಳಿದ ಹಿನ್ನೆಲೆ ಶಾಲೆಗೆ ಬಂದು ಆರೋಪಿ ಶಿಕ್ಷಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಕೆಲ ದಿನಗಳಿಂದ ವಿದ್ಯಾರ್ಥಿಯರಿಗೆ ಶಿಕ್ಷಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಟ್ಟೆ ಖರೀದಿ ಮಾಡಿ ದುಡ್ಡು‌ಕೊಡದೇ ಯುವತಿ ಪರಾರಿಯಾಗಿರುವಂತಹ ಘಟನೆ ಕೂಡ ದಾವಣಗೆರೆ ನಗರದ ನಿಟ್ಟುವಳಿಯಲ್ಲಿನ ಎ2 ಫ್ಯಾಷನ್ ಅಂಗಡಿಯಲ್ಲಿ ನಡೆದಿದೆ. 2600 ಬೆಲೆ ಬಾಳು ಮೂರು ಟೀ ಶರ್ಟ, ಮೂರು ಬರ್ಮೋಡ ಖರೀದಿಸಿದ ಯುವತಿ‌, ಪೇಟಿಯಂ ವರ್ಕ ಮಾಡುತ್ತಿಲ್ಲ ಸ್ಕೂಟಿಯಲ್ಲಿ ದುಡ್ಡಿದೆ ಎಂದು ಹೇಳಿ ಪರಾರಿಯಾಗಿದ್ದಾಳೆ. ಯುವತಿಯ ಚಲನವಲನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೆಟಿಜೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ವಸೂಲಿಗೆ ಬಂದಿದ್ದ ನಕಲಿ ಪತ್ರಕರ್ತನಿಗೆ ಮಹಿಳೆಯಿಂದ ಧರ್ಮದೇಟು 

ತುಮಕೂರು: ಪತ್ರಕರ್ತನ ಹೆಸರೇಳಿಕೊಂಡು ವಸೂಲಿಗೆ ಬಂದವನಿಗೆ ಮಹಿಳೆಯರು ಚಪ್ಪಲಿ ಏಟು ನೀಡಿರುವಂತಹ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್​ಪಿ ಆಗಿ ಮಹಿಳೆ ಕೆಲಸ ಮಾಡುತ್ತಿದ್ದಳು. ಮಹಿಳೆ ಜೊತೆ ಮಾತನಾಡುತ್ತ ಲಂಚದಾಸೆ ತೋರಿಸಿ ನಕಲಿ ಪತ್ರಕರ್ತ ವಿಡಿಯೋ ಮಾಡಿಕೊಂಡಿದ್ದ. ಬಳಿಕ ವಿಡಿಯೋ ತೋರಿಸಿ ವಸೂಲಿಗೆ ಇಳಿದಿದ್ದ. ಮಹಿಳೆಗೆ ವಿಡಿಯೋ ಕಳಿಸಿ 4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದಕ್ಕೆ ನನ್ನ ಜೊತೆ ಒಂದು ರಾತ್ರಿ ಕಳಿಯಬೇಕು ಎಂದು ಮೆಸೇಜ್ ಮಾಡಿದ್ದನಂತೆ. ಮಹಿಳೆ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಧರ್ಮದೇಟು ನೀಡಲಾಗಿದೆ. ಸದ್ಯ ನಾಲ್ವರಿಗೆ ಭರ್ಜರಿ ಗೂಸಾ ಬಿದಿದ್ದು, ನಾಲ್ವರನ್ನು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಕೌಟುಂಬಿಕ ಕಲಹ ಮನನೊಂದ ವ್ಯಕ್ತಿ ನೇಣಿಗೆ ಶರಣು;

ನೆಲಮಂಗಲ: ಕೌಟುಂಬಿಕ ಕಲಹ ಮನನೊಂದು ವ್ಯಕ್ತಿ ನೇಣಿಗೆ ಶರಣಾಗಿರುವಂತಹ ಘಟನೆ ತಾಲೂಕಿನ ಘಂಟೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಚೌಡಯ್ಯ (39) ಮೃತ ದುರ್ದೈವಿ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಕಳೆದೊಂದು ವಾರದಿಂದ ಪತಿ ಪತ್ನಿ ನಡುವೆ ಜಗಳ ಉಂಟಾಗಿದೆ. ಜಗಳಕ್ಕೆ ಬೇಸತ್ತು ತವರು ಮನೆಗೆ ಪತ್ನಿ ತೆರಳಿದ್ದಾಳೆ. ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರ ಭೇಟಿ, ಪ್ರಕರಣ ದಾಖಲು ಮಾಡಲಾಗಿದೆ.

ಬಳಗಾನೂರಿನಲ್ಲಿ ಮಳೆಯಿಂದ ಮನೆ ಕುಸಿದು ವೃದ್ಧ ಸಾವು

ರಾಯಚೂರು: ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಮನೆ‌ ಕುಸಿದು ಚಿನಿವಾಲ್(60) ಎನ್ನುವವರು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದಾಗ ಏಕಾಏಕಿ ಮನೆ ಕುಸಿದು ದುರಂತ ಸಂಭವಿಸಿದೆ. ಬಳಗಾನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:13 am, Sat, 1 October 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ