ಗಡಿಯಲ್ಲಿ ದೇಶ ಸೇವೆ ಸಲ್ಲಿಸಿ ಬಂದ ಯೋಧರಿಗೆ ಅದ್ಧೂರಿ ಸ್ವಾಗತ

ಗಡಿಯಲ್ಲಿ ದೇಶ ಸೇವೆ ಸಲ್ಲಿಸಿ ಬಂದ ಯೋಧರಿಗೆ ಅದ್ಧೂರಿ ಸ್ವಾಗತ

ದಾವಣಗೆರೆ: ಗಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರಕಿದೆ. ನಿವೃತ್ತ ಯೋಧರಾದ ಸಾಸಲು ಗ್ರಾಮದ ಜಯಣ್ಣ, ದಾವಣಗೆರೆಯ ಕೆಟಿಜೆ ನಗರದ ಸುಶೀಲಕುಮಾರ ಹಾಗು ತುರ್ಚುಘಟ ಗ್ರಾಮದ ಶ್ರೀನಿವಾಸ್​ಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಈ ಮೂವರು 20 ವರ್ಷಗಳ ಕಾಲ ಬಿಎಸ್ಎಫ್​ನಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯಾಗಿ ದಾವಣಗೆರೆಗೆ ಆಗಮಿಸಿದ ಯೋಧರಿಗೆ ಕುಟುಂಬಸ್ಥರು ಆರತಿ ಮಾಡಿ ತಿಲಕವಿಟ್ಟು ಸ್ವಾಗತ ಕೋರಿದ್ದಾರೆ. ನಿವೃತ್ತ ಯೋಧರ ಸಂಘ ಹಾಗು ಹಿಂದೂ ಜಾಗರಣ ವೇದಿಕೆಯಿಂದಲೂ ಅದ್ಧೂರಿ ಸ್ವಾಗತ ಕೋರಿದ್ದಾರೆ.

Click on your DTH Provider to Add TV9 Kannada