ದಾವಣಗೆರೆ: ಮಿಸ್ ಕಾಲ್ ಕೊಟ್ಟು ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್; ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ
ಮಿಸ್ ಕಾಲ್ ಕೊಟ್ಟು ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್ ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ದಾವಣಗೆರೆಯ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಮ್ಮ (30) ಗಿಡ್ಡ ಗಂಗಮ್ಮ (52) ಹರೀಶ್ (32) ಚಂದ್ರು (30) ಬಂಧಿತ ಆರೋಪಿಗಳು.
ದಾವಣಗೆರೆ: ಮಿಸ್ ಕಾಲ್ ಕೊಟ್ಟು ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್ (Honeytrap) ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ದಾವಣಗೆರೆಯ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಮ್ಮ (30) ಗಿಡ್ಡ ಗಂಗಮ್ಮ (52) ಹರೀಶ್ (32) ಚಂದ್ರು (30) ಬಂಧಿತ ಆರೋಪಿಗಳು. ಚನ್ನಗಿರಿ ಮೂಲದ ವ್ಯಕ್ತಿಯೊಬ್ಬನಿಗೆ ಆರೋಪಿ ಗಂಗಮ್ಮ ಮಿಸ್ ಕಾಲ್ ಮಾಡಿದ್ದಾಳೆ. ಬಳಿಕ ಮತ್ತೆ ಆ ವ್ಯಕ್ತಿ ಮರು ಕರೆ ಮಾಡಿದ್ದು, ಹಾಗೇ ಪೋನಿನಲ್ಲಿ ಪರಿಚಯವಾಗಿದೆ. ನಂತರ ಗಂಗಮ್ಮ ದಾವಣಗೆರೆಗೆ ಬನ್ನಿ, ನಿಮ್ಮ ಜೊತೆ ಊಟ ಮಾಡಬೇಕೆಂದು ಹೇಳಿ ಕರೆಸಿಕೊಂಡಿದ್ದಾಳೆ.
ಸಿದ್ದವೀರಪ್ಪ ಬಡಾವಣೆಯಲ್ಲಿ ನಡೆದಿತ್ತು ಹನಿಟ್ರ್ಯಾಪ್ ಪ್ಲಾನ್
ಹೀಗೆ ನಾಲ್ವರು ಸೇರಿ ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿ ಹನಿಟ್ರ್ಯಾಪ್ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಆ ವ್ಯಕ್ತಿ ಬರುತ್ತಿದ್ದಂತೆ ಗಿಡ್ಡ ಗಂಗಮ್ಮ ಆತನನ್ನು ಕರೆದುಕೊಂಡು ರೂಮಿಗೆ ಹೋಗಿದ್ದಾಳೆ. ಇದೆ ವೇಳೆ ಹರೀಶ್ ಹಾಗೂ ಚಂದ್ರು ಅಲ್ಲಿಗೆ ಬಂದು ಅವರಿಬ್ಬರು ಮನೆಯ ಬೇಡ್ ರೂಮ್ನಲ್ಲಿ ಹೋಗುತ್ತಿದ್ದಂತೆ ಕ್ಯಾಮರಾ ತೆಗೆದುಕೊಂಡು ವಿಡಿಯೋ ಮಾಡಿ, ಮೂರು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ ಈ ಆರೋಪಿಗಳು.‘
ರಕ್ಷಣಾ ವೇದಿಕೆ ಹೆಸರು ಹೇಳಿಕೊಂಡು ಬೇದರಿಕೆ
ಹೌದು ರಕ್ಷಣಾ ವೇದಿಕೆಯ ಹೆಸರನ್ನ ಹೇಳಿಕೊಂಡು ಹರೀಶ್ ಬೆದರಿಕೆ ಹಾಕಿದ್ದಾನೆ. ಇತ್ತ ಗಂಗಮ್ಮ ಕೂಡ ನಾಟಕ ಶುರುಮಾಡಿಕೊಂಡಿದ್ದಾಳೆ. ನನ್ನ ಮಾನ ಹೋಗುತ್ತದೆ ದಯವಿಟ್ಟು ಅವರು ಕೇಳಿದಷ್ಟು ಹಣವನ್ನ ಕೊಟ್ಟುಬಿಡಿ ಎಂದು ಆತನಿಗೆ ಬೇಡಿಕೊಂಡವಳಂತೆ ನಾಟಕ ಮಾಡಿದ್ದಾಳೆ. ಇಂತಹ ಖತರ್ನಾಕ್ ಗ್ಯಾಂಗ್ನ್ನ ಇದೀಗ ಪೊಲೀಸರು ಬಂಧಿಸಿ, ಆರೋಪಿಗಳಿಂದ ಒಂದು ಲಕ್ಷ ಐವತ್ತು ಸಾವಿರ ರೂಪಾಯಿಯನ್ನ ವಶ ಪಡೆದಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ