AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ 5 ವರ್ಷವಾಗಿದ್ದರೂ, ಹಳೆಯ ಪ್ರಿಯತಮನ ಬಿಟ್ಟಿರಲಾರದೆ ಕಿಲಾಡಿ ಪತ್ನಿಯೇ ಗಂಡನನ್ನು ಹತ್ಯೆ ಮಾಡಿದಳಾ?

ಇವರಿಬ್ಬರಿಗೂ ಐದು ವರ್ಷಗಳ ಹಿಂದೆ ಮದ್ವೆ ಆಗಿದೆ. ಆದ್ರೆ ಕುಟುಂಬಸ್ಥರು ಮಾಡಿರುವ ಆರೋಪದ ಪ್ರಕಾರ ಕಾವ್ಯಾಗೆ ಬೇರೊಬ್ಬನ ಜೊತೆಗೆ ಅನೈತಿಕ ಸಂಬಂಧವಿತ್ತು. ಮಗುವಾದ ಬಳಿಕವು ಸಹ ಆತನ ಜೊತೆಗೆ ಹೋಗಿದ್ದಳಂತೆ.

ಮದುವೆಯಾಗಿ 5 ವರ್ಷವಾಗಿದ್ದರೂ, ಹಳೆಯ ಪ್ರಿಯತಮನ ಬಿಟ್ಟಿರಲಾರದೆ ಕಿಲಾಡಿ ಪತ್ನಿಯೇ ಗಂಡನನ್ನು ಹತ್ಯೆ ಮಾಡಿದಳಾ?
ಹಳೆಯ ಪ್ರಿಯತಮನ ಬಿಟ್ಟಿರಲಾರದೆ ಕಿಲಾಡಿ ಪತ್ನಿಯೇ ಗಂಡನನ್ನು ಹತ್ಯೆ ಮಾಡಿದಳಾ?
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jun 11, 2023 | 8:30 AM

Share

ಅವರಿಗೆ ಮದ್ವೆಯಾಗಿ ಐದು ವರ್ಷವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಓರ್ವ ಮಗ ಕೂಡಾ ಇದ್ದಾನೆ. ಆದ್ರೆ ತನ್ನ ಹಳೆಯ ಪ್ರಿಯತಮನ ( Lover) ಸ್ನೇಹ ಮಾತ್ರ ಬಿಟ್ಟಿರಲಿಲ್ಲ ಆ ಕಿಲಾಡಿ ಪತ್ನಿ (wife). ಈ ನಡುವೆ ಆತನ ಜೊತೆ ಓಡಿಯೂ ಹೋಗಿದ್ದಳು. ಆದರೂ ಮದುವೆಯಾದ ಮೇಲೆ… ಇನ್ನೇನು ಮದ್ವೆ ಆಗಿದೆ. ಮಗಾ ಇದ್ದಾನೆ ಅಂತಾ ಹಿರಿಯರೆಲ್ಲ ಸೇರಿ ಮತ್ತೆ ಪತಿಪತ್ನಿಯನ್ನ ಒಂದು ಮಾಡಿದ್ದರು. ಇದಾದ ಬಳಿಕ ಸ್ವಲ್ಪ ದಿನ ಎಲ್ಲ ಚೆನ್ನಾಗಿತ್ತು. ಆದರೆ ಮೊನ್ನೆ ಶುಕ್ರವಾರ ಮನೆಯಲ್ಲಿ ದೇವರ ಕಾರ್ಯ ನಡೆದಿದ್ದಾಗ ಇದ್ದಕ್ಕಿದ್ದಂತೆ ಪತಿ (husband) ಸಾವನ್ನಪ್ಪಿದ್ದಾನೆ (death). ಇದರ ಹಿಂದೆ ಪತ್ನಿ ಮತ್ತು ಅವಳ ಪ್ರಿಯಕರನ ಕೈವಾಡವಿದೆ ಎಂಬ ಶಂಕೆ ಕೇಳಿ ಬಂದಿದೆ. ಇಲ್ಲಿದೆ ನೋಡಿ ಕಿಲಾಡಿ ಪತ್ನಿಯ ಸ್ಟೋರಿ.

ಲಿಂಗರಾಜ್ ಮತ್ತು ಕಾವ್ಯಾ… ದಾವಣಗೆರೆ (Davanagere) ತಾಲೂಕಿನ ಬಿಸಲೇರಿ ಗ್ರಾಮದ (Bisleri village) ನಿವಾಸಿಗಳು. ಮೊನ್ನೆ ರಾತ್ರಿ ಲಿಂಗರಾಜ್ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾನೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಆರೋಪಿಗಳನ್ನ ಬಂಧಿಸಿ ಎಂದು ಪಟ್ಟು ಹಿಡಿದಿದ್ದಾರೆ. ಆರೋಪಿ ಬೇರೆ ಯಾರೂ ಅಲ್ಲ ಇವಳೇ ಕಾವ್ಯಾ. ಸಾವನ್ನಪ್ಪಿದ ಲಿಂಗರಾಜನ ಪತ್ನಿ.

ಇವರಿಬ್ಬರಿಗೂ ಐದು ವರ್ಷಗಳ ಹಿಂದೆ ಮದ್ವೆ ಆಗಿದೆ. ಆದ್ರೆ ಕುಟುಂಬಸ್ಥರು ಮಾಡಿರುವ ಆರೋಪದ ಪ್ರಕಾರ ಕಾವ್ಯಾಗೆ ಬೇರೊಬ್ಬನ ಜೊತೆಗೆ ಅನೈತಿಕ ಸಂಬಂಧವಿತ್ತು. ಮಗುವಾದ ಬಳಿಕವು ಸಹ ಆತನ ಜೊತೆಗೆ ಹೋಗಿದ್ದಳಂತೆ. ಗ್ರಾಮದಲ್ಲಿ ಮದ್ವೆ ಆಗಿದೆ. ಮಗು ಇದೆ. ಇಂತಹ ಪರಿಸ್ಥಿತಿಯಲ್ಲಿ ಇಂತಹ ತಪ್ಪು ಮಾಡುವುದು ಸರಿಯಲ್ಲ ಎಂದು ರಾಜಿ ಪಂಚಾಯಿತಿ ಮಾಡಿ ಲಿಂಗರಾಜ್ ಮತ್ತು ಕಾವ್ಯಳನ್ನ ಹಿರಿಯರು ಒಂದು ಮಾಡಿದ್ದರು.

ಒಂದಷ್ಟು ದಿನ ಎಲ್ಲವೂ ಸರಿಯಾಗಿಯೇ ಇತ್ತು. ಮೊನ್ನೆ ಮನೆಯಲ್ಲಿ ದೇವರ ಕಾರ್ಯವಿತ್ತು. ಆ ದೇವರ ಕಾರ್ಯದ ವೇಳೆ ಲಿಂಗರಾಜ ಸಾವನ್ನಪ್ಪಿದ್ದಾನೆ. ನಿಖರವಾದ ಕಾರಣ ವೈದ್ಯಕೀಯ ಪರೀಕ್ಷೆ ಬಳಿಕ ಗೊತ್ತಾಗಲಿದೆ. ಆದ್ರೆ ಗ್ರಾಮಸ್ಥರು ಮತ್ತು ಲಿಂಗರಾಜ್ ಕುಟುಂಬ ಸದಸ್ಯರು ಮಾತ್ರ ಕಾವ್ಯಾ ಹಾಗೂ ಅವಳ ಪ್ರಿಯಕರ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಆರೋಪಿಗಳನ್ನ ಬಂಧಿಸುವ ತನಕ ಶವಸಂಸ್ಕಾರ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Also Read:  ಸುಕೋಮಲ ಮನಸಿನ ಜೋಡಿ 9 ವರ್ಷ ಬಳಿಕ ಸತಿಪತಿಗಳಾದರು, ಹಸಿರು ಶಾಲು ಹಾಕುವ ರೈತರೊಬ್ಬರು ಅಪರೂಪದ ಲವ್ವಿಗೆ

ದೇವರ ಕಾರ್ಯಕ್ಕಾಗಿ ಕೆಲ ದಿನಗಳಿಂದ ತಯಾರಿ ನಡೆದಿದ್ದವು. ಇದನ್ನ ಅವಕಾಶ ಮಾಡಿಕೊಂಡು ಲಿಂಗರಾಜನನ್ನ ಕೊಲೆ ಮಾಡಲಾಗಿದೆ. ಇಬ್ಬರ ನಡುವೆ ಅನೈತಿಕ ಸಂಬಂಧದ ವಿಚಾರವಾಗಿ ಹತ್ತಾರು ಸಲ ಜಗಳವಾಗಿದೆ. ಈ ಜಗಳಗಳಿಗೆ ಗ್ರಾಮಸ್ಥರೆ ಸಾಕ್ಷಿ. ಜಗಳ ಬಿಡಿಸಿ ಇಬ್ಬರೂ ಜೊತೆಯಾಗಿ ಬಾಳುವಂತೆ ತಿಳಿಹೇಳಲಾಗಿತ್ತು. ಆದ್ರೆ ಕಾವ್ಯಾ ಮಾತ್ರ ತನ್ನ ಪ್ರಿಯಕರನ ಜೊತೆ ಹೋಗುವ ನಿರ್ಧಾರವನ್ನ ಮನಸ್ಸಿನಿಂದ ತೆಗೆದಿರಲಿಲ್ಲ. ಇದಕ್ಕೆ ಅಡ್ಡಿಯಾಗಿದ್ದು ಪತಿ ಲಿಂಗರಾಜ. ಪತಿಯನ್ನ ಮುಗಿಸಿದ್ರೆ ನಮ್ಮ ದಾರಿ ಸುಗಮ ಎಂಬ ನಿರ್ಧಾರಕ್ಕೆ ಬಂದಂತಿತ್ತು ಆ ಅನೈತಿಕ ಜೋಡಿ. ಅದೇ ರೀತಿ ಮಾಡಿದ್ದಾರೆ ಈಗ. ಅವರಿಬ್ಬರನ್ನ ಬಂಧಿಸಬೇಕು. ಅವರಿಗೆ ತಕ್ಕ ಶಿಕ್ಷೆ ಯಾಗಬೇಕು. ಅಲ್ಲಿಯ ವರೆಗೆ ಹೋರಾಟ ಮಾಡುತ್ತೇವೆ ಎಂಬುದು ಸಂಬಂಧಿಕರ ವಾದ.

ಹೀಗೆ ಕೈ ಹಿಡಿದ ಪತಿಯನ್ನ ಮುಗಿಸಿದ ಆರೋಪ ಪತ್ನಿ ಮೇಲೆ ಬಂದಿದೆ. ಈ ಸಂಬಂಧ ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. ತನ್ನ ಪ್ರಿಯಕರನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಪತಿ ಸಹಜವಾಗಿಯೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ. ಆದ್ರೆ ಇವಳು ಮಾತ್ರ ಆ ಪ್ರಿಯತಮನ ಜೊತೆಗೆ ಹೋಗಬೇಕು ಎಂಬ ನಿರ್ಧಾರಕ್ಕೆ ಇಂತಹ ಕುಕೃತ್ಯ ಮಾಡಿದ್ದಾಲೆ ಎಂಬ ಆರೋಪ ಕೇಳಿ ಬಂದಿದ್ದು, ವೈದ್ಯಕೀಯ ವರದಿ ಹಾಗೂ ಪೊಲೀಸ್ ತನಿಖೆಯಿಂದ ಸತ್ಯ ಹೊರ ಬರಬೇಕಾಗಿದೆ.

ದಾವಣಗೆರೆ ಕುರಿತಾದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?