ದೇವರ ಮೇಲೆ ಪ್ರಮಾಣ ಮಾಡಿ ಹೇಳುವೆ ನನ್ನ ಮಗಳ ಹೆಸರಿನಲ್ಲಿ ಸರ್ಕಾರದ ಸೌಲಭ್ಯ ಪಡೆದಿಲ್ಲ: ಶಾಸಕ ಎಂ.ಪಿ.ರೇಣುಕಾಚಾರ್ಯ
ನಾನು ನನ್ನ ಕುಟುಂಬ ಎಸ್ಸಿ ಹೆದರಿನಲ್ಲಿ ಸೌಲಭ್ಯ ಪಡೆದಿಲ್ಲ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬನ್ನಿಕೋಡ್ಗ್ರಾ ಮದಲ್ಲಿನಡೆದ ಅಂಬೇಡ್ಕರ್ ಜಯಂತಿಯಲ್ಲಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆ: ಬೇಡ ಜಂಗಮ ಜಾತಿ (Caste) ಪ್ರಮಾಣ ಪತ್ರ ವಿವಾದ ಹಿನ್ನೆಲೆ ಜಿಲ್ಲೆಯ ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗಿದೆ. ಈ ಕುರಿತು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ಬೇಡ ಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದು ದಲಿತ ಮೀಸಲಾತಿ ಕಸಿಯಲ್ಲಿ ದೇವರ ಮೇಲೆ ಪ್ರಮಾಣ ಮಾಡಿ ಹೇಳುವೆ ನನ್ನ ಮಗಳ ಹೆಸರಿನಲ್ಲಿ ಸರ್ಕಾರದ ಸೌಲಭ್ಯ ಪಡೆದಿಲ್ಲ. ಚೇತನಾ ನನ್ನ ಮಗಳ ಹೆಸರು. ಇನ್ನೊಬ್ಬರು ಧಾರವಾಡದವರು ಚೇತನಾ ಹಿರೇಮಠ ಎಂಬುವರು ಬೇಡ ಜಂಗಮ ಹೆಸರಿನಲ್ಲಿ ಸರ್ಕಾರದ ಸೌಲಭ್ಯ ಪಡೆದಿದ್ದಾರೆ. ನಾನು ನನ್ನ ಕುಟುಂಬ ಎಸ್ಸಿ ಹೆದರಿನಲ್ಲಿ ಸೌಲಭ್ಯ ಪಡೆದಿಲ್ಲ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬನ್ನಿಕೋಡ್ಗ್ರಾ ಮದಲ್ಲಿನಡೆದ ಅಂಬೇಡ್ಕರ್ ಜಯಂತಿಯಲ್ಲಿ ಹೇಳಿಕೆ ನೀಡಿದ್ದಾರೆ.
ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ, ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ
ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ. ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ ಎಂದು ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಬಗ್ಗೆ ಯಾವುದೇ ಆರೋಪ ಮಾಡಿದ್ರೂ ಸಹಿಸಿಕೊಳ್ಳುತ್ತೇನೆ. ನನ್ನ ಮಗಳನ್ನ ಈ ವಿವಾದದಲ್ಲಿ ಎಳೆದು ತರುವುದನ್ನ ನಾನು ಸಹಿಸಲ್ಲ ಎಂದಿದ್ದಾರೆ.
ಶಾಸಕ ರೇಣುಕಾಚಾರ್ಯ ಪುತ್ರಿಯ ಜಾತಿ ಪ್ರಮಾಣ ಪತ್ರದ ವಿವಾದ ಇನ್ನಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ. ಸ್ವಪಕ್ಷದ ಶಾಸಕರೇ ರೇಣುಕಾಚಾರ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಬಿಜೆಪಿ ಜಿಲ್ಲಾ ಕೋರ್ ಕಮಿಟಿಯಲ್ಲಿ ಸಹ ಈ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಆದ್ರೆ ನನ್ನ ಪುತ್ರಿ ಒಂಬತ್ತನೇ ತರಗತಿ ಓದುತ್ತಿರುವಾಗ ಸಹೋದರ ಸಹಿ ಮಾಡಿಸಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದಾನೆ ಎಂಬುದು ರೇಣುಕಾಚಾರ್ಯ ವಾದ. ಆದ್ರೆ ಜಾತಿ ಹೆಸರಿನಲ್ಲಿ ಆ ನಾಲ್ವತ್ತು ಲಕ್ಷ ಹಣ ಎಲ್ಲಿ ಎಂಬ ಹತ್ತಾರು ಸಂಶಯಗಳು ರೇಣುಕಾಚಾರ್ಯ ಸುತ್ತ ಸುತ್ತಿಕೊಳ್ಳುತ್ತಿವೆ. ಈಗ ಶಾಸಕ ರೇಣುಕಾಚಾರ್ಯ ಜಾತಿ ಜಗಳದ ಕೇಂದ್ರ ಬಿಂದು ಆಗಿದ್ದಾರೆ.
ಬಿಜೆಪಿ ಶಾಸಕ ಎಂ. ಪಿ.ರೇಣುಕಾಚಾರ್ಯ ಹುಟ್ಟೂರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು. ತಂದೆ ಪಚಾಂಕ್ಷರಯ್ಯ ಅಂತಾ ಶಾಲಾ ಶಿಕ್ಷಕ. ಕುಂದೂರು ಸರ್ಕಾರಿ ಶಾಲೆಯಲ್ಲಿ ಶಾಸಕ ರೇಣುಕಾಚಾರ್ಯ ಓದಿದ್ದು. ಅವರ ಜಾತಿ ಕಾಲಂ ನಲ್ಲಿ ಹಿಂದು ಲಿಂಗಾಯತ ಅಂತಿದೆ. ಆದ್ರೆ ಶಾಸಕ ರೇಣುಕಾಚಾರ್ಯ ಪುತ್ರಿ ಎಂ.ಆರ್ ಚೇತನಾಗೆ ಸೇರಿದ ಜಾತಿ ಪ್ರಮಾಣ ಪತ್ರದಲ್ಲಿ ಬೇಡ ಜಂಗಮಾ ಅಂತಿದೆ. ಇದನ್ನ ಬೆಂಗಳೂರು ಉತ್ತರಹಳ್ಳಿ ತಹಶೀಲ್ದಾರ ನೀಡಿದ್ದು. ಬೇಡ ಜಂಗಮ ಅಂದ್ರೆ ಪರಿಶಿಷ್ಟ ಬೇಡ ಜಂಗಮ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ. ಇದೇ ಈಗ ರಾಜ್ಯದಲ್ಲಿ ಚರ್ಚೆ ಆಗತ್ತಿರುವುದು. ತಂದೆ ಲಿಂಗಾಯತ ಆದ್ರೆ ಪುತ್ರಿ ಎಸ್ಸಿ ಹೇಗೆ ಆದಳು ಎಂಬ ಪ್ರಶ್ನೆ ಪ್ರತಿಯೊಬ್ಬರನ್ನ ಕಾಡುತ್ತಿದೆ. ಮೂರು ಸಲ ಶಾಸಕ ಒಮ್ಮೆ ಸಚಿವ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಆಗಿರುವ ರೇಣುಕಾಚಾರ್ಯ ಅಧಿಕಾರ ಅನುಭವಿಸಿದ್ದಾರೆ. ಸಾವಿರಾರರ ಕೋಟಿ ಅನುದಾನ ತಮ್ಮ ಹೊನ್ನಾಳಿ ಕ್ಷೇತ್ರಕ್ಕೆ ತಂದಿದ್ದಾರೆ.
ಇದನ್ನೂ ಓದಿ:
ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕನ್ನಡಿಗ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ನೇಮಕ
Radhika Pandit: ನಾಚಿ ನೀರಾದ ರಾಧಿಕಾ ಪಂಡಿತ್; ವೈರಲ್ ಆಯ್ತು ಫೋಟೋ
Published On - 9:53 pm, Fri, 29 April 22