ನೀವು ಜೈ ಶ್ರೀರಾಮ ಅಂದ್ರೆ ಸಾಲದು, ‌ನಾವು ಜೈ ಶ್ರೀರಾಮ ಅನ್ನಬೇಕಾದ್ರೆ ಅಯೋಧ್ಯಗೆ ‌ಕರೆದುಕೊಂಡು ಹೋಗಿ -ಹೆಚ್​​ಎಸ್ ಶಿವಶಂಕರ ಆಗ್ರಹ

| Updated By: ಆಯೇಷಾ ಬಾನು

Updated on: Jan 11, 2024 | 1:26 PM

ನೀವು ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ ಭಟ್ಟರ ಕಾರ್ಯಕ್ರಮಕ್ಕೆ ಹೋಗಿ ಜೈ ಶ್ರೀರಾಮ ಅಂದು ಬಂದಿದ್ದೀರಿ. ಆದರೆ ನಾವು ಜೆಡಿಎಸ್ ‌ನವರ ಅಲ್ಲಾ ಹೂ ಅಕ್ಬರ್ ಎನ್ನುತ್ತಾ ಬೆಳೆದವರು. ಈಗ ಒಮ್ಮೆಲೆ ಜೈ ಶ್ರೀರಾಮ ಜೈ ಶ್ರೀರಾಮ ಅಂದ್ರೆ ಹೇಗೆ? ನಾನು ಜೈ ಶ್ರೀರಾಮ‌ ಅನ್ನಬೇಕಾದ್ರೆ ನಮ್ಮನ್ನೆಲ್ಲ ಒಮ್ಮೆ ಅಯೋಧ್ಯೆಗೆ ಕರೆದುಕೊಂಡು ಹೋಗಿ ಎಂದು ಹೆಚ್​ಡಿ ಕುಮಾರಸ್ವಾಮಿಗೆ ಶಿವಶಂಕರ ಆಗ್ರಹಿಸಿದ್ದಾರೆ.

ನೀವು ಜೈ ಶ್ರೀರಾಮ ಅಂದ್ರೆ ಸಾಲದು, ‌ನಾವು ಜೈ ಶ್ರೀರಾಮ ಅನ್ನಬೇಕಾದ್ರೆ ಅಯೋಧ್ಯಗೆ ‌ಕರೆದುಕೊಂಡು ಹೋಗಿ -ಹೆಚ್​​ಎಸ್ ಶಿವಶಂಕರ ಆಗ್ರಹ
ಹೆಚ್​ಎಸ್ ಶಿವಶಂಕರ
Follow us on

ದಾವಣಗೆರೆ, ಜ.11: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ಎದ್ದು ನಿಂತಿದೆ (Ayodhya Ram Mandir). ಜನವರಿ 22ರಂದು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮಂದಿರದ ಉದ್ಘಾಟನೆ ಮಾಡಲಿದ್ದಾರೆ. ಮತ್ತೊಂದೆಡೆ ನೀವು ಮಾತ್ರ ಜೈ ಶ್ರೀರಾಮ ಅಂದ್ರೆ ಸಾಲದು.‌ ನಾವು ಜೈ ಶ್ರೀರಾಮ (Jai Sri Ram) ಅನ್ನಬೇಕಾದ್ರೆ ನಮ್ಮನ್ನೊಮ್ಮ ಅಯೋಧ್ಯೆಗೆ ‌ಕರೆದುಕೊಂಡು ಹೋಗಿ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ (HD Kumaraswamy) ಜೆಡಿಎಸ್ ಮಾಜಿ ಶಾಸಕ ಹೆಚ್​ಎಸ್ ಶಿವಶಂಕರ (HS Shivashankar) ಅವರು ಆಗ್ರಹಿಸಿದ್ದಾರೆ.

ಈಗ ರಾಜ್ಯದಲ್ಲಿ ಬಿಜೆಪಿ ‌ಜೆಡಿಎಸ್ ಹೊಂದಾಣಿಕೆ ಆಗಿದೆ. ನೀವು ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ ಭಟ್ಟರ ಕಾರ್ಯಕ್ರಮಕ್ಕೆ ಹೋಗಿ ಜೈ ಶ್ರೀರಾಮ ಅಂದು ಬಂದಿದ್ದೀರಿ. ಆದರೆ ನಾವು ಜೆಡಿಎಸ್ ‌ನವರ ಅಲ್ಲಾ ಹೂ ಅಕ್ಬರ್ ಎನ್ನುತ್ತಾ ಬೆಳೆದವರು. ಈಗ ಒಮ್ಮೆಲೆ ಜೈ ಶ್ರೀರಾಮ ಜೈ ಶ್ರೀರಾಮ ಅಂದ್ರೆ ಹೇಗೆ? ನಾನು ಜೈ ಶ್ರೀರಾಮ‌ ಅನ್ನಬೇಕಾದ್ರೆ ನಮ್ಮನ್ನೆಲ್ಲ ಒಮ್ಮೆ ಅಯೋಧ್ಯೆಗೆ ಕರೆದುಕೊಂಡು ಹೋಗಿ ಎಂದು ಹೆಚ್​ಡಿ ಕುಮಾರಸ್ವಾಮಿಗೆ ಶಿವಶಂಕರ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸೊಂಟ ಬಳುಕಿಸಿ ಎಂಜಾಯ್ ಮಾಡಿದ ಮಹಿಳಾ ಮಣಿಯರು! ವಿಡಿಯೋ ನೋಡಿ

ಧರ್ಮ ಯಾವುದು ಜಾತಿ ಯಾವುದು ಸ್ಪಷ್ಟ ಪಡಿಸಿ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ‌ ವೀರಶೈವ ಮಹಾ ಸಭೆಯ ಮಹಾ ಅಧಿವೇಶನದಲ್ಲಿ ಧರ್ಮದ ಕಾಲಂ ನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬರೆಯಿಸಿ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ವೀರಶೈವ ಮಹಾ ಸಭೆಯ ಮುಖಂಡರು ತಮ್ಮ ಜಾತಿ ಧರ್ಮವನ್ನ ಏನೆಂದು ಬರೆಯಿಸುತ್ತಾರೆ. ಈಗ ಬಹುತೇಕರು ಹಿಂದು ಲಿಂಗಾಯತ, ಹಿಂದು ಗಾಣಿಗ, ಹಿಂದು ಬಣಜಿಗ ಎಂದು ಬರೆಯಿಸುತ್ತಾರೆ. ಇವರು ಹೇಳುವಂತೆ ಹೇಗೆ ಬರೆಯಿಸಬೇಕು ಎಂಬುವುದರ ಬಗ್ಗೆ ಸೂಕ್ತ ಸಭೆ ಕರೆದು ಎಲ್ಲ‌ ವೀರಶೈವ ಲಿಂಗಾಯತ ಉಪ ಜಾತಿಯ ಜನರಿಗೆ ಸೂಕ್ತ ಮಾಹಿತಿ‌ ನೀಡಲಿ ಎಂದು ಶಿವಶಂಕರ ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ