ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳಿಂದ ಕಲ್ಲುತೂರಾಟ; ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ

ನಾಗಮಂಗಲ ಗಲಭೆ ಪ್ರಕರಣ ಮಾಸುವ ಮುನ್ನವೇ ದಾವಣಗೆರೆ(Davanagere)ಯ ಬೇತೂರ ರಸ್ತೆಯ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಧ್ಯ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ.

ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳಿಂದ ಕಲ್ಲುತೂರಾಟ; ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 19, 2024 | 9:34 PM

ದಾವಣಗೆರೆ, ಸೆ.19: ದಾವಣಗೆರೆ(Davanagere)ಯ ಬೇತೂರ ರಸ್ತೆಯ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆದಿದ್ದು, ಘಟನೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್ಸ್ ಸ್ಟೇಬಲ್ ರಘು ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಸೇರಿದಂತೆ ಪ್ರಮುಖ ಮುಸ್ಲಿಂ‌ ನಾಯಕರು ಯುವಕರನ್ನ ನಿಯಂತ್ರಣ ಮಾಡಲು ಮುಂದಾಗಿದ್ದಾರೆ. ಇನ್ನು ಕಲ್ಲುತೂರಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಅಂಗಡಿ‌ ಮುಗ್ಗಟ್ಟುಗಳನ್ನ ಮುಚ್ಚಿಸಿದ ಪೊಲೀಸರು

ಇನ್ನು ಕಲ್ಲು ತೂರಿದ ಕಿಡಿಗೇಡಿಗಳನ್ನ ಪೊಲೀಸರು ಓಡಿಸಿಕೊಂಡು ಹೋಗಿದ್ದು, ಸಿಸಿಟಿವಿ ದೃಶ್ಯ ಸಂಗ್ರಹಿಸಿ ಆರೋಪಿಗಳ ಪತ್ತೆಕಾರ್ಯ ನಡೆದಿದೆ. ಸಧ್ಯ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿ‌ ಮುಗ್ಗಟ್ಟುಗಳನ್ನ ಪೊಲೀಸರು ಮುಚ್ಚಿಸಿದ್ದಾರೆ. ಇತ್ತ ಶಾಂತಿ ಟಾಕೀಸ್ ರಸ್ತೆ ಹಾಗೂ ಎನ್ ಆರ್ ರಸ್ತೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ ಮಾಡಲಾಗಿದೆ.

ಇದನ್ನೂ ಓದಿ:ನಾಗಮಂಗಲ ಗಲಭೆ ಪ್ರಕರಣ; ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು-ಸಿದ್ದರಾಮಯ್ಯ

ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣ-ಎಸ್‌ಪಿ ಉಮಾ ಪ್ರಶಾಂತ್

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಉಮಾ ಪ್ರಶಾಂತ್, ‘ಬೇತೂರ ರಸ್ತೆ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ. ನಿಷೇಧಾಜ್ಞೆ ಜಾರಿ ಬಗ್ಗೆ ಡಿಸಿ ಜೊತೆ ಚರ್ಚೆ ನಡೆಸಲಾಗಿದೆ. ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣವಾಗಿದೆ. ನಿನ್ನೆ ಒಂದು ಕೋಮಿನವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇನ್ನೊಂದು ಕೋಮಿನವರು ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕಡೆಯವರಿಂದ ದೂರು ದಾಖಲಾಗಿದೆ, ಕ್ರಮಕೈಗೊಳ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Thu, 19 September 24

‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ