ಮಂಡ್ಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಭುಗಿಲೆದ್ದ ಗಲಭೆ: ನಿಷೇಧಾಜ್ಞೆ, ಶಾಲೆ-ಕಾಲೇಜುಗಳಿಗೆ ರಜೆ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಸಂಭವಿಸಿದ ಕೋಮು ಗಲಭೆ ಬಿಗಡಾಯಿಸಿದೆ. ಕಿಡಿಗೇಡಿಗಳು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ನಡುರಸ್ತೆಯಲ್ಲೇ ತಲ್ವಾರ್, ಲಾಂಗು, ರಾಡ್‌ಗಳನ್ನು ಝಳಪಿಸಿದ್ದಾರೆ. ಪೆಟ್ರೋಲ್ ಬಾಂಬ್ ದಾಳಿಗೆ ಅಂಗಡಿಗಳು ಹೊತ್ತಿ ಉರಿದಿವೆ. ಪೊಲೀಸ್ ಠಾಣೆ ಮುಂದೆಯೇ ಹಿಂದೂ ಸಂಘಟನೆಗಳ ಆಕ್ರೋಶ ಸ್ಫೋಟಗೊಂಡಿದೆ. ಘಟನೆಯ ಸಮಗ್ರ ಮಾಹಿತಿ ಇಲ್ಲಿದೆ.

ಮಂಡ್ಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಭುಗಿಲೆದ್ದ ಗಲಭೆ: ನಿಷೇಧಾಜ್ಞೆ, ಶಾಲೆ-ಕಾಲೇಜುಗಳಿಗೆ ರಜೆ
ಪೊಲೀಸ್ ವಾಹನದ ಮುಂದೆ ಜನ ಜಮಾಯಿಸಿರುವುದು
Follow us
| Updated By: ಗಣಪತಿ ಶರ್ಮ

Updated on:Sep 12, 2024 | 9:45 AM

ಮಂಡ್ಯ, ಸೆಪ್ಟೆಂಬರ್ 12: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಬುಧವಾರ ರಾತ್ರಿ ಅಕ್ಷರಶಃ ಹೊತ್ತಿ ಉರಿದಿದೆ. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸಂಜೆ 6.30ರ ವೇಳೆಗೆ ಗಣೇಶನ ವಿಸರ್ಜನಾ ಮೆರವಣಿಗೆ ಆರಂಭವಾಗಿದೆ. ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಕಳೆದ 5 ದಿನಗಳ ಹಿಂದೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಹಿಂದೂಗಳು ಗಣೇಶನ ಮೂರ್ತಿ ವಿಸರ್ಜನೆಗೆ ಮೆರವಣಿಗೆ ಹೊರಟಿದ್ದರು.

ಮಸೀದಿ ರಸ್ತೆಗೆ ತೆರಳುತ್ತಿದ್ದ ಮೆರವಣಿಗೆಗೆ ತಡೆ

ಬದರಿಕೊಪ್ಪಲಿನಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಆದರೆ ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.

ಮಸೀದಿ ಬಳಿಯೇ ಕಲ್ಲು ತೂರಾಟ

ಅನ್ಯಕೋಮಿನ ಯುವಕರ ಕ್ಯಾತೆಗೆ ಕೇರ್ ಮಾಡದ ಗಣೇಶನ ವಿಸರ್ಜನಾ ತಂಡ, ಮೈಸೂರು ರಸ್ತೆಯಲ್ಲಿರುವ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಡಿಜೆ ಸೌಂಡ್ ಜತೆ ಡೊಳ್ಳು, ತಮಟೆ ಸದ್ದಿನೊಂದಿಗೆ ಪಟಾಕಿ ಸಿಡಿಸುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದೆ. ಇನ್ನೇನು ಮಸೀದಿಯಿಂದ ಸ್ವಲ್ಪ ದೂರ ಇದೆ ಎನ್ನುವಾಗ ಅನ್ಯಕೋಮಿನ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಟ್ಟಡದ ಮೇಲೆ ನಿಂತುಕೊಂಡು ಸಹ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.

ಕಲ್ಲು ತೂರಾಟದ ವಿರುದ್ಧ ಕೆರಳಿದ ಹಿಂದುಗಳು

ಯಾವಾಗ ಮೆರವಣಿಗೆಯತ್ತ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಲು ಶುರುಮಾಡಿದರೋ, ಆಗ ಗಲಾಟೆ ಶುರುವಾಗಿದೆ. ಹಿಂದೂಗಳು ಮತ್ತು ಅನ್ಯಕೋಮಿನ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ನಂತರ ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆ ಮುಂದೆಯೇ ಗಣೇಶನ ವಿಗ್ರಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಅಂಗಡಿಗಳಿಗೆ ಬೆಂಕಿ: ಬೈಕ್‌ಗಳು ಧಗಧಗ

Mandya: Stone pelting during Ganesh procession in Nagamangala, Section 144 imposed, Here is complete detail in Kannada

ನಾಗಮಂಗಲ ಪೊಲೀಸ್ ಠಾಣೆ ಮುಂದೆ ಹಿಂದೂಗಳು ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ, ಇದಾದ ಸ್ವಲ್ಪಹೊತ್ತಿನಲ್ಲೇ, ಅಂದರೆ ರಾತ್ರಿ 10 ಗಂಟೆ ಸುಮಾರಿಗೆ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ದುಷ್ಕೃತ್ಯವೇ ನಡೆದುಹೋಗಿದೆ. ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪೆಟ್ರೋಲ್ ಬಾಂಬ್‌ಗಳನ್ನು ತೂರಿದೆ. ಗುಜರಿ ಅಂಗಡಿಯೊಂದು ಧಗಧಗಿಸಿ ಉರಿಯಿತು. ಬೈಕ್ ಶೋರೂಂ ಒಂದನ್ನು ಧ್ವಂಸಗೊಳಿಸಲಾಯಿತು. ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದು ಹೊತ್ತಿ ಉರಿದವು.

ರಸ್ತೆಯಲ್ಲೇ ತಲ್ವಾರ್ ಹಿಡಿದು ಬೆದರಿಕೆ

ಕೆಲವು ಕಿಡಿಗೇಡಿಗಳು ರಸ್ತೆಯಲ್ಲೇ ಲಾಂಗು, ರಾಡ್‌, ತಲ್ವಾರ್‌ಗಳನ್ನು ಝಳಪಿಸುತ್ತಾ ಅಟ್ಟಹಾಸ ಪ್ರದರ್ಶಿಸಿದ್ದಾರೆ. ರಸ್ತೆಯಲ್ಲೇ ಬರುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಕಿಡಿಗೇಡಿಗಳಿಂದ ಲಾಂಗ್‌ ಸೇರಿ ಇತರೆ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡ್ರು.

Mandya: Stone pelting during Ganesh procession in Nagamangala, Section 144 imposed, Here is complete detail in Kannada

ಮಾರಕಾಸ್ತ್ರ ವಶಕ್ಕೆ ಪಡೆದುಕೊಂಡು ತೆರಳಿದ ಪೊಲೀಸ್

ಅಗ್ನಿಶಾಮಕ ವಾಹನಗಳಿಂದ ಬೆಂಕಿ ಶಮನ

ಬೆಂಕಿ ಹಚ್ಚಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಸ್ಥಿತಿ ಹತೋಟಿಯಲ್ಲಿದ್ದು ಸೆಪ್ಟೆಂಬರ್​ 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ.

Mandya: Stone pelting during Ganesh procession in Nagamangala, Section 144 imposed, Here is complete detail in Kannada

ಇಂದು ನಾಗಮಂಗಲ ಬಂದ್: ಶಾಲಾ-ಕಾಲೇಜುಗಳಿಗೆ ರಜೆ

ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ನಾಗಮಂಗಲದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಸಂಘಟನೆ ಇಂದು ನಾಗಮಂಗಲ ಬಂದ್‌ಗೆ ಕರೆ ಕೊಟ್ಟಿದೆ.

ನಾಗಮಂಗಲ ಗಲಭೆ: 50 ಮಂದಿಯ ಬಂಧನ

ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣ ಸಂಬಂಧ 50 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಸ್ಲಿಂ ಅಂಗಡಿಗಳನ್ನು ದೋಚಲಾಗಿದೆ ಎಂದ ಎಸ್​ಡಿಪಿಐ ಮುಖಂಡ

ನಾಗಮಂಗಲ ಗಲಾಟೆ ಕುರಿತು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕೋಮುವಾದಿ ಸಂಘಿ ಸಂಘಟನೆಗಳು ಮುಸ್ಲಿಮರ ಅಂಗಡಿಗಳ ಮೇಲೆ ಕಲ್ಲು ತೂರಾಟ ಮಾಡಿವೆ. ದಾಳಿ ನಡೆಸಿ ಬೆಂಕಿ ಹಚ್ಚಿವೆ. ಅಂಗಡಿಗಳನ್ನು ಲೂಟಿ ಮಾಡಿ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸೂಕ್ತ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲೆಸೆತ; ಪೊಲೀಸ್ ಠಾಣೆ ಎದುರು ಹಿಂದೂಗಳಿಂದ ಪ್ರತಿಭಟನೆ

ಒಟ್ಟಿನಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗದಲ್ಲಿ ಕೋಮು ಗಲಭೆ ಕಿಚ್ಚುಹೊತ್ತಿಸಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:02 am, Thu, 12 September 24

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್