ದಾವಣಗೆರೆ, ಆ.31: ಜೈಲು ಶಿಕ್ಷೆಯ ಭಯದಿಂದ ನ್ಯಾಯಾಲಯ(Court)ದಲ್ಲಿಯೇ ವಿಷ ಸೇವಿಸಿ ಆರೋಪಿಯೊಬ್ಬ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿನ ಆರೋಪಿ ಫಜಲ್ ಅಲಿ (38) ಇಂದು(ಶನಿವಾರ) ದಾವಣಗೆರೆ ಜಿಲ್ಲೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್ಸಿ ಕೋರ್ಟ್ಗೆ ಹಾಜರಾಗಿದ್ದ. ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆರೋಪಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಫಜಲ್ ಅಲಿ ಹಾಗೂ ಆತನ ಪತ್ನಿ ವಿಚ್ಚೇಧನ ಪಡೆದಿದ್ದರು. ಬಳಿಕ ಕೋರ್ಟ್ ಆದೇಶದಂತೆ ಪತ್ನಿಗೆ ಜೀವನಾಂಶ ಕೊಡಬೇಕಿದ್ದು, ಕಳೆದ ಕೆಲ ತಿಂಗಳಿಂದ ಪತ್ನಿಗೆ ಜೀವನಾಂಶವನ್ನ ಆರೋಪಿ ನೀಡರಲಿಲ್ಲ. ಈ ವಿಚಾರವನ್ನಪತ್ನಿ ಪರ ನ್ಯಾಯವಾದಿಗಳು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ಹಿನ್ನಲೆ ನ್ಯಾಯಾಧೀಶರಿಂದ ಜೈಲಿಗೆ ಹಾಕುವ ಆದೇಶ ಬರುವ ಭಯದಿಂದ ಕೋರ್ಟ್ಗೆ ಬರುವಾಗಲೇ ಜೇಬಿನಲ್ಲಿ ವಿಷದ ಬಾಟಲ್ ಇಟ್ಟುಕೊಂಡು ಬಂದಿದ್ದ ಫಜಲ್ ಅಲಿ ವಿಷ ಸೇವಿಸಿದ್ದಾನೆ. ಸದ್ಯ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಿತಿ ಗಂಭೀರವಾಗಿದೆ. ಈ ಘಟನೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಬಡತನವೇ ಮೂವರನ್ನು ಬಲಿ ತೆಗೆದುಕೊಳ್ತಾ?
ವಿಜಯಪುರ: ಆಲಕುಂಟಿ ನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆಗೆ ಕೆಎ71ಎಂ 0724 ನಂಬರಿನ ಕಾರೊಂದು ಗುದ್ದಿದ್ದು, ಪರಿಣಾಮ ಮನೆಯ ಗೋಡೆಯೇ ಕುಸಿದು ಬಿದ್ದ ಘಟನೆ ನಡೆದಿದೆ. ಚಾಲಕನಿಗೆ ಹಾಗೂ ಮತ್ತೋರ್ವನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Sat, 31 August 24