ಶಿವಮೊಗ್ಗದಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಬಡತನವೇ ಮೂವರನ್ನು ಬಲಿ ತೆಗೆದುಕೊಳ್ತಾ?
ಶಿವಮೊಗ್ಗ ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿತ್ತು ತಿನ್ನುವ ಬಡತನ, ತಮ್ಮನಿಗೆ ಅನಾರೋಗ್ಯ, ಬೆಳೆದು ನಿಂತ ಮಗ ನೆಟ್ಟಗೆ ದುಡಿಯಲಿಲ್ಲ. ಹೀಗಾಗಿ ಮಹಿಳೆಯೇ ದುಡಿದು ಸಂಸಾರ ನಡೆಸುತ್ತಿದ್ದಳು. ಮನೆಯಲ್ಲಿ ಒಬ್ಬಳೇ ದುಡಿದು ಸಾಕಾಗಿ ಹೋಗಿದ್ದ ಮಹಿಳೆಯು ಇಬ್ಬರಿಗೂ ವಿಷಕೊಟ್ಟು ತಾನು ವಿಷಸೇವಿಸಿ ಆತ್ಮಹತ್ಯೆ ಶರಣಾಗಿದ್ದಾಳೆ. ಈ ಕುರಿತು ಒಂದು ವರದಿ ಇಲ್ಲಿದೆ.
ಶಿವಮೊಗ್ಗ, ಆ.13: ಶಿವಮೊಗ್ಗ(Shivamogga) ನಗರದ ಓಟಿ ರಸ್ತೆಯಲ್ಲಿರುವ ಆಜಾದ್ ನಗರದ ಮುಖ್ಯ ರಸ್ತೆಯಲ್ಲಿ ಎಲ್ಲರೂ ಬೆಚ್ಚಿ ಬೀಳುವ ಘಟನೆ ನಡೆದಿತ್ತು. ಕಳೆದ ಎರಡು ದಿನಗಳ ಹಿಂದೆ ಮನೆಯ ಯಜಮಾನಿ ಭುವನೇಶ್ವರಿ (40) ಮತ್ತು ಈಕೆಯ ತಮ್ಮ ಮಾರುತಿ (38) ಹಾಗೂ ಮಗ ದರ್ಶನ (22) ಮೂವರು ಮೂವರು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದ. ಭುವನೇಶ್ವರಿ ಹೊಟೇಲ್ ಕೆಲಸ ಮಾಡಿಕೊಂಡಿದ್ದಳು. ಇಡೀ ಕುಟುಂಬದ ಜವಾಬ್ದಾರಿಯು ಮಹಿಳೆಯ ಮೇಲೆ ಇತ್ತು. ಮನೆಯಲ್ಲಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಮತ್ತು ವಯಸ್ಸಿಗೆ ಬಂದ ಮಗನು ನೆಟ್ಟಿಗೆ ದುಡಿಯುತ್ತಿರಲಿಲ್ಲ. ಈ ಇಬ್ಬರು ದುಡಿಯದೇ ಇರುವುದು ದೊಡ್ಡ ಸಮಸ್ಯೆಯಾಗಿತ್ತು.
ಎಷ್ಟೇ ಹೇಳಿದರೂ ಇಬ್ಬರು ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಇದರಿಂದ ರೋಸಿ ಹೋಗಿದ್ದ ತಾಯಿ ಮೊನ್ನೆ(ಆ.11) ರಾತ್ರಿ ಇಬ್ಬರಿಗೂ ಊಟದಲ್ಲಿ ವಿಷ ಕೊಟ್ಟು ಕೊಂದಿದ್ದಾಳೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆ ಒಳಗೆಯಿಂದ ಲಾಕ್ ಆಗಿತ್ತು. ಅಕ್ಕ-ಪಕ್ಕದವರಿಗೆ ಶವದ ದುರ್ವಾಸನೆ ಬರುವುದಕ್ಕೆ ಶುರುವಾಗಿದೆ. ಬಳಿಕ ಕಿಟಕಿ ಗಾಜು ಒಡೆದು ನೋಡಿದಾಗ ಮೂವರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಮೂವರು ಸಾವು ಕಂಡು ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದ್ದು, ಸಂಬಂಧಿಗಳ ಅಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಶಿವಮೊಗ್ಗ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಇನ್ನು ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿಯು ತಿಳಿಯುತ್ತಿದ್ದಂತೆ ಬಡಾವಣೆ ಮತ್ತು ಅಕ್ಕ-ಪಕ್ಕದ ಜನರು ಜಮಾಹಿಸಿದ್ದು, ಜೊತೆಗೆ ದೊಡ್ಡಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಎಂಟ್ರಿಕೊಟ್ಟಿದ್ದರು. ಹೆಚ್ಚುವರಿ ಎಸ್ಪಿ ಸೇರಿದಂತೆ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳಕ್ಕೆ ಭೇಟಿ ನೀಡಿ ಮೂವರ ಸಾವಿನ ಕುರಿತು ಮಾಹಿತಿ ಕಲೆಹಾಕಿದರು. ಬಡತನದಿಂದ ಬೆಂದು ಹೋಗಿದ್ದ ಮಹಿಳೆಗೆ ಕುಟುಂಬ ನಿರ್ವಹಣೆಯು ದೊಡ್ಡ ಸವಾಲು ಅಗಿತ್ತು. ದಿನೇ ದಿನೇ ಖರ್ಚು ವೆಚ್ಚ ಜಾಸ್ತಿ ಆಗುತ್ತಿತ್ತು. ಒಬ್ಬಳೇ ದುಡಿದು ಇಡೀ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಮಗ ಮತ್ತು ತಮ್ಮನ ನಡತೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇದರಿಂದ ಬೇಸತ್ತು ಮಹಿಳೆಯು ಕೊನೆಗೆ ಇಬ್ಬರನ್ನು ಕೊಂದು ತಾನು ಸಾಯುವ ನಿರ್ಧಾರಕ್ಕೆ ಬಂದಿದ್ದಳು.
ಊಟದಲ್ಲಿ ವಿಷಬೆರೆಸಿ ಮೊದಲು ಇಬ್ಬರಿಗೆ ಕೊಟ್ಟಿದ್ದಾಳೆ. ಇಬ್ಬರು ಮೃತಪಟ್ಟ ಬಳಿಕ ಇವಳು ಅದೇ ವಿಷದೂಟ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಲ ವಿಲ ಒದ್ದಾಡಿ ಮೂವರು ನೆಲದ ಮೇಲೆ ಪ್ರಾಣ ಬಿಟ್ಟಿರುವ ದೃಶ್ಯ ನೋಡಿದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿತ್ತು. ಎಲ್ಲರೂ ಒಂದೇ ಕುಟುಂಬದ ಮೂವರು ಸಾವು ನೋಡಿ ರೋಧಿಸುತ್ತಿದ್ದರು. ಭುವನೇಶ್ವರಿ ಈ ನಿರ್ಧಾರ ತೆಗೆದುಕೊಂಡಿರುವುದು ಎಲ್ಲರಿಗೂ ಅಚ್ಚರಿಯಾಗಿದೆ. ಸದ್ಯ ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕುರಿತು ಮತ್ತು ಸಂಗತಿಗಳು ಬಯಲು ಆಗಲಿವೆ.
ಬಡತನ ಎಷ್ಟೊಂದು ನೆಮ್ಮದಿ ಹಾಳು ಮಾಡುತ್ತದೆ ಎನ್ನುವುದಕ್ಕೆ ಭುವನೇಶ್ವರಿ ಕಠಿಣ ನಿರ್ಧಾರವೇ ಸಾಕ್ಷಿಯಾಗಿದೆ. ದುಡಿಯದ ತಮ್ಮ ಮತ್ತು ಮಗನು. ಇಡೀ ಕುಟುಂಬವನ್ನು ಸಾಕಿ ಸಲುಹಿ ರೋಸಿಹೋಗಿದ್ದ ಮಹಿಳೆಯು ಒಡಹುಟ್ಟಿದ ಮಗ ಮತ್ತು ತಮ್ಮನಿಗೆ ವಿಷದೂಟ ಕೊಟ್ಟು ಬಳಿಕ ತಾನು ವಿಷದೂಟ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಾತ್ರ ವಿಪರ್ಯಾಸ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ