ಪ್ರೀತಿಸಿದ ಯುವತಿಗೆ ಬೇರೊಬ್ಬರ ಜೊತೆ ನಿಶ್ಚಿತಾರ್ಥ; ಮನನೊಂದ ಪ್ರಿಯಕರ ಆತ್ಮಹತ್ಯೆ
ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅದರಂತೆ ಇದೀಗ 5 ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಯಸಿ ಕೈಕೊಟ್ಟ ಹಿನ್ನೆಲೆ ಮನನೊಂದ ಯುವಕ ತನ್ನ ತಾಯಿಯ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಯಚೂರು, ಆ.07: ಪ್ರೇಯಸಿ ಕೈಕೊಟ್ಟ ಹಿನ್ನೆಲೆ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರು(Raichur) ಜಿಲ್ಲೆಯ ಮಾನ್ವಿ ಪಟ್ಟಣ ಜನತಾ ಹೌಸ್ ಕಾಲೋನಿಯಲ್ಲಿ ನಡೆದಿದೆ. ಮಾನ್ವಿ ನಿವಾಸಿ ವರುಣ್ (26)ಆತ್ಮಹತ್ಯೆಗೆ ಶರಣಾದ ಯುವಕ. ಇನ್ಸ್ಟ್ರಾಗ್ರಾಂ ಮೂಲಕ ಪರಿಚಯವಾಗಿದ್ದ ಯುವತಿ ಜೊತೆ ಮೃತ ವರುಣ್ ಪ್ರೀತಿ ಮಾಡಿದ್ದ. ಬಳಿಕ ಆ ಯುವತಿ ಬೇರೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಿನ್ನೆಲೆ ಮನನೊಂದು ವರುಣ್ ಮನೆಯಲ್ಲಿ ಫ್ಯಾನ್ಗೆ ನೇಣುಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
5 ವರ್ಷದಿಂದ ಪ್ರೀತಿಸ್ತಿದ್ದವಳು ಕೈಕೊಟ್ಟಿದ್ದಕ್ಕೆ ಮನನೊಂದು ಆತ್ಮಹತ್ಯೆ
ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಯುವತಿ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ನಂತರ ಮುಖಾಮುಖಿ ಭೇಟಿಯಾಗಿದ್ದರು. ಬಳಿಕ ರಾಯಚೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ ಯುವತಿ ಜೊತೆ ಪ್ರೇಮಾಂಕುರವಾಗಿದೆ. ಅದರಂತೆ ಕಳೆದ 5 ವರ್ಷದಿಂದ ವರುಣ್, ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ದಿಢೀರ್ ಪ್ರೇಯಸಿಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥವಾಗಿದಕ್ಕೆ ವರುಣ್ ತೀವ್ರ ಬೇಸರಗೊಂಡಿದ್ದ. ಈ ಹಿನ್ನಲೆ ಇಂದು ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನಂತರ ವರುಣ್ ನೇಣಿಗೆ ಶರಣಾಗಿದ್ದಾನೆ.
ಇದನ್ನೂ ಓದಿ:ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಮನನೊಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
ನಾಲೆಯಲ್ಲಿ ಮುಳುಗಿ ರೈತ ಸಾವು
ಮೈಸೂರು: ತಾಲೂಕಿನ ಕಟ್ಟೆಪುರ ನಾಲೆಯಲ್ಲಿ ಹಸು ತೊಳೆಯುತ್ತಿದ್ದಾಗ ಕಾಲು ಜಾರಿ ಬಿದ್ದು ರೈತನೊಬ್ಬ ಸಾವನ್ನಪ್ಪಿದ್ದಾನೆ. ಸಾಲಿಗ್ರಾಮ ತಾಲೂಕಿನ ಕರ್ತಾಳು ಗ್ರಾಮದ ನಿವಾಸಿ ಪುಟ್ಟೇಗೌಡ (60) ಮೃತ ವ್ಯಕ್ತಿ. ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೆಡ್ಡಿಗೆ ಆಕಸ್ಮಿಕ ಬೆಂಕಿ; ಹೋರಿ, ಕರು ಬೆಂಕಿಗಾಹುತಿ
ಗದಗ: ಶೆಡ್ಡಿಗೆ ಆಕಸ್ಮಿಕ ಬೆಂಕಿ ತಗುಲಿ ಹೋರಿ ಹಾಗೂ ಕರು ಬೆಂಕಿಗಾಹುತಿಯಾದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಗಳೂರು ಗ್ರಾಮದಲ್ಲಿ ನಡೆದಿದೆ. ನಿನ್ನೆ(ಮಂಗಳವಾರ) ರಾತ್ರಿ ನಡೆದ ಬೆಂಕಿ ದುರಂತದಲ್ಲಿ ಹೋರಿ, ಕರು ದಾರುಣ ಸಾವನ್ನಪ್ಪಿವೆ. ಎರಡು ಎತ್ತುಗಳು ಗಂಭೀರ ಗಾಯವಾಗಿದ್ದು, ಶೆಡ್ನಲ್ಲಿಯೇ ನರಳಾಡಿವೆ. ರೈತ ಹನುಮಂತ ಬೇಡರ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಇದಾಗಿದ್ದು, ಕೊಟ್ಟಿಗೆಯಲ್ಲಿ ಸೊಳ್ಳೆಗಳಿಗೆ ಹಾಕಿದ್ದ ಹೊಗೆಯಿಂದ ಈ ದುರಂತ ಸಂಭವಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Wed, 7 August 24