ಮೆಟ್ರೋ ಹಳಿಗೆ ಜಿಗಿದು ಸಾಲು ಸಾಲು ಆತ್ಮಹತ್ಯೆ: ಎಚ್ಚೆತ್ತ ಬಿಎಂಆರ್​ಸಿಎಲ್ PSD ಮೊರೆ, ಏನಿದು?

ಸಿಲಿಕಾನ್ ಸಿಟಿ ಜನರ ಮೊಸ್ಟ್ ಹಾಟ್ ಫೇವರೇಟ್ ಟ್ರಾನ್ಸ್ ಪೋರ್ಟ್ ಅಂದರೆ ಅದು ನಮ್ಮ ಮೆಟ್ರೋ. ಟ್ರಾಫಿಕ್ ಕಿರಿಕಿರಿ ಇರೋಲ್ಲ, ಗಂಟೆಗಟ್ಟಲೇ ಕಾಯುವ ಅವಶ್ಯಕತೆಯಿಲ್ಲ. ಆದ್ರೆ, ಮೆಟ್ರೋ ಸ್ಟೇಷನ್​ಗಳು ಇತ್ತೀಚೆಗೆ ಸೂಸೈಡ್ ಸ್ಪಾಟ್ ಆಗುತ್ತಿದ್ದು, ಇದು ಮೆಟ್ರೊ ಸಿಬ್ಬಂದಿಗಳಿಗೆ ಮಾತ್ರವಲ್ಲ, ಪ್ರಯಾಣಿಕರಿಗೂ ಸಮಸ್ಯೆಯಾಗಿದೆ. ಅದಕ್ಕೆ ಕೊನೆಗೂ ಪರಿಹಾರ ಕಂಡುಕೊಳ್ಳಲು ಬಿಎಂಆರ್​ಸಿಎಲ್​ ಮುಂದಾಗಿದೆ.

ಮೆಟ್ರೋ ಹಳಿಗೆ ಜಿಗಿದು ಸಾಲು ಸಾಲು ಆತ್ಮಹತ್ಯೆ: ಎಚ್ಚೆತ್ತ ಬಿಎಂಆರ್​ಸಿಎಲ್ PSD ಮೊರೆ, ಏನಿದು?
ಬಿಎಂಆರ್​ಸಿಎಲ್ PSD ಮೊರೆ,
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 06, 2024 | 10:07 PM

ಬೆಂಗಳೂರು, ಆ.06: ಮೆಟ್ರೋದಲ್ಲಿ ಹೋಗುವುದು ಸೇಫ್. ಆದ್ರೆ, ಕೆಲ ತಾಂತ್ರಿಕ ಕಾರಣದಿಂದ‌ ಮೆಟ್ರೋ ಆಗಾಗೇ ಕೈ ಕೊಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದರ ಜೊತೆಗೆ ಈಗ ಮೆಟ್ರೋ(Metro) ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಮೆಟ್ರೋ ಸಂಚಾರಕ್ಕೆ ಕುತ್ತು ಬರುತ್ತಿದ್ದು, ಸಡನ್ ಆಗಿ‌ ಹೀಗೆ ಆಗುತ್ತಿರುವುದರಿಂದ ಮೆಟ್ರೋ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದನ್ನು ತಡೆಗಟ್ಟಲು ಬಿಎಂಆರ್​ಸಿಎಲ್ ಪ್ಲಾಟ್‌ ಫಾರ್ಮ್ ಸ್ಕ್ರೀನ್‌ ಡೋರ್‌ಗಳ (ಪಿಎಸ್​ಡಿ) ಮೊರೆ ಹೋಗಿದೆ. ಇದು ಮೆಟ್ರೊ ರೈಲಿನ ಪ್ರವೇಶ ದ್ವಾರದಲ್ಲಷ್ಟೇ ತೆರೆದುಕೊಳ್ಳಲಿವೆ.

ಹೊಸ ಮಾರ್ಗದಲ್ಲಿ ಪಿಎಸ್​ಡಿ ಆಳವಡಿಕೆ, ಹಳೆ ಮಾರ್ಗಕ್ಕೂ ಪ್ಲಾನ್?

ಶಾಶ್ವತ ಕಡಿವಾಣ ಹಾಕಲೇಬೇಕು ಎಂದು ಪಣ ತೊಟ್ಟಿರುವ ನಮ್ಮ ಮೆಟ್ರೋ, ಈ ಹಿಂದೆ ಈ ರೀತಿಯ ಆತ್ಮಹತ್ಯೆ ಪ್ರಕರಣಗಳು ಆದಾಗ ಮ್ಯಾನ್ ಪವರ್ ಹೆಚ್ಚು ಮಾಡಿದ್ದರು. ಜೊತೆಗೆ ಜನದಟ್ಟಣೆ ಇರುವ ಸ್ಟೇಷನ್​ಗಳಲ್ಲಿ ಬ್ಯಾರಿಕೇಡ್ ಆಳವಡಿಸಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳೋರನ್ನ ತಡೆಯಲು ಆಗೋಲ್ಲ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಉದಾಹರಣೆಗಳೇ ಇಲ್ಲ.‌ ಹೀಗಾಗಿ ಹೊಸ ಮಾರ್ಗಗಳಾದ ಗೊಟ್ಟಿಗೆರೆ ಯಿಂದ ನಾಗವಾರ (ಪಿಂಕ್‌ ಲೈನ್) ಸಿಲ್ಕ್ ಬೋರ್ಡ್ ಯಿಂದ ಅಂತರರಾಷ್ಟ್ರೀಯ ಏರ್ಪೋರ್ಟ್ (ಬ್ಲೂ ಲೈನ್) ನಲ್ಲಿ ಪಿಎಸ್​ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ.

ಇದನ್ನೂ ಓದಿ:ಬೆಂಗಳೂರು ನಮ್ಮ ಮೆಟ್ರೋ: ಹೊಸ ಮೆಟ್ರೋ ರೈಲುಗಳಿಗಾಗಿ ಸಿದ್ಧವಾಗುತ್ತಿವೆ ಐದು ಡಿಪೋಗಳು

ಇನ್ನು ಹಳೆಯ ಮಾರ್ಗಕ್ಕೆ ಸೇಫ್ಟಿ ಡೋರ್ಸ್ ಹಾಕೋದಕ್ಕೆ ಚಿಂತನೆ ನಡೆದಿದೆ. ಈಗ ಇರುವ ಮೆಟ್ರೋ ಸ್ಟೇಷನ್ ಅನ್ನು ಪಿಎಸ್​ಡಿ ಟೆಕ್ನಾಲಜಿ ಜೊತೆಗೆ ಹೊಂದಿಕೆ ಮಾಡಬೇಕು. ಇದು ತಾಂತ್ರಿಕ ಸವಾಲು, ಜೊತೆಗೆ ಒಂದು ನಿಲ್ದಾಣದಲ್ಲಿ ಪಿಎಸ್ ಡಿ ಆಳವಡಿಕೆ ಮಾಡಲು ಕನಿಷ್ಠ 10 ಕೋಟಿ ಬೇಕಾಗುತ್ತದೆ. ಜನರ ಸೇಫ್ಟಿ ದೃಷ್ಟಿಯಿಂದ ನಮ್ಮ ಮೆಟ್ರೋ ಈ ಎರಡು ಸವಾಲನ್ನ ಸ್ವೀಕರಿಸಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಈ ಕಾಮಗಾರಿ ಮಾಡಬೇಕಾಗಿದೆ.

ಇದನೆಲ್ಲ ಉನ್ನತ ಮಟ್ಟದಲ್ಲಿ ಸಭೆ ಮಾಡಲಾಗುತ್ತಿದೆ. ಪಿಎಸ್​ಡಿ ಡೋರ್ ಅಳವಡಿಸಲು ಮುಂದಾಗಿರುವ ಮೆಟ್ರೋ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ನಮ್ಮ‌ ಮೆಟ್ರೋ ಸಿಲಿಕಾನ್ ಸಿಟಿ ಜನರ ಬೆಸ್ಟ್ ಟ್ರಾನ್ಸ್ ಪೋರ್ಟ್, ಹೀಗೆ ಆತ್ಮಹತ್ಯೆ ಮಾಡಿಕೊಳ್ಳೋ‌ ಜಾಗವಂತೂ ಖಂಡಿತವಲ್ಲ. ಆದಷ್ಟು ಬೇಗ ಎಲ್ಲ ಕಡೆ ಇನ್ನಷ್ಟು ಸೇಫ್ಟಿ ಕೈಗೊಂಡರೆ ಇತಂಹ ಘಟನೆಗಳಿಗೆ ಬ್ರೇಕ್ ಬೀಳೋದು ಗ್ಯಾರೆಂಟಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ