AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ? ಲ್ಯಾಬ್ ವರದಿ ಫಲಿತಾಂಶ ಇಲ್ಲಿದೆ

ರಾಜ್ಯ ಸರ್ವೇಕ್ಷಣಾ ಘಟಕದ ಸೂಚನೆ ಮೇರೆಗೆ ಸೂಳೆಕೆರೆಯಿಂದ 6 ಮಾದರಿಗಳನ್ನು ಕಲ್ಚರ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 5 ಮಾದರಿಗಳಲ್ಲಿ ಯಾವುದೇ ಸೂಕ್ಷ್ಮಾಣು ಕಂಡುಬಂದಿಲ್ಲ. ಆದರೆ, ಜಾಕ್ ವೆಲ್-3ರ ಒಂದು ಮಾದರಿಯಲ್ಲಿ ಎರೋಮೊನಾಸ್ ಸೋರ್ಬಿಯಾ ಎಂಬ ಸೂಕ್ಷ್ಮಾಣು ಕಂಡು ಬಂದಿದೆ. ಆದ್ದರಿಂದ ಈ ಜಾಕ್‌ವೆಲ್‌ನಿಂದ ಪೂರೈಕೆಯಾಗುವ ನೀರನ್ನು ಮತ್ತೊಮ್ಮೆ ಕ್ಲೋರಿನೇಷನ್ ಮಾಡಿಸಿ, ಪರೀಕ್ಷೆಗೆ ಒಳಪಡಿಸಿ ಕುಡಿಯಲು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ? ಲ್ಯಾಬ್ ವರದಿ ಫಲಿತಾಂಶ ಇಲ್ಲಿದೆ
ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ?
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​|

Updated on: Aug 18, 2023 | 9:33 AM

Share

ದಾವಣಗೆರೆ/ಚಿತ್ರದುರ್ಗ: ಪಕ್ಕದ ಚಿತ್ರದುರ್ಗದ (Chitradurga) ಕಾವಾಡಿಗರ ಹಟ್ಟಿಯಲ್ಲಿ (Kavadigar Hatti) ಸಂಭವಿಸಿದ ಸರಣಿ ಸಾವಿಗೂ ( serial deaths), ದಾವಣಗೆರೆಯ ಸೂಳೆಕೆರೆ ನೀರಿಗೂ (Sulekere, Shanti Sagara) ಸಂಬಂಧವಿದೆಯಾ? ಇದನ್ನು ಪತ್ತೆ ಹಚ್ಚಲು ನಡೆಸಿದ ಪ್ರಯೋಗಾಲಯ ವರದಿ ಏನು ಹೇಳುತ್ತದೆ? ಇಲ್ಲಿದೆ ವರದಿ. ಕಾವಾಡಿಗರಹಟ್ಟಿಯಲ್ಲಿ ಕಾಲರಾಗೆ ಕಾರಣವಾಗಿದ್ದು ಸೂಕ್ಷ್ಮಾಣು ವಿಬ್ರಿಯೊ ಕಾಲರಾ. ಆದರೆ ಈ ಬ್ಯಾಕ್ಟೀರಿಯಾ ಸೂಳೆಕೆರೆ ನೀರಿನಲ್ಲಿ ಕಂಡು ಬಂದಿಲ್ಲ ಎಂದು ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ ನೀಡಿದ್ದಾರೆ. ಹಾಗಾಗಿ ಚಿತ್ರದುರ್ಗದ ಕಾವಾಡಿಗರ ಹಟ್ಟಿ ಸಾವಿಗೂ ಹಾಗೂ ದಾವಣಗೆರೆ (Davanagere) ಜಿಲ್ಲೆಯ ಸೂಳೆಕೆರೆ ನೀರುಗೂ ಸಂಬಂಧವಿಲ್ಲ ಎನ್ನಲಾಗಿದೆ.

ರಾಜ್ಯ ಸರ್ವೇಕ್ಷಣಾ ಘಟಕದ ಸೂಚನೆ ಮೇರೆಗೆ ಸೂಳೆಕೆರೆಯಿಂದ 6 ಮಾದರಿಗಳನ್ನು ಕಲ್ಚರ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 5 ಮಾದರಿಗಳಲ್ಲಿ ಯಾವುದೇ ಸೂಕ್ಷ್ಮಾಣು ಕಂಡುಬಂದಿಲ್ಲ.

Also Read: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ: ಕಾಲರಾ ಮಾದರಿಯ ಬ್ಯಾಕ್ಟೀರಿಯ ಪತ್ತೆ, ಕೇಸ್​ ಬುಕ್

ಆದರೆ, ಜಾಕ್ ವೆಲ್-3ರ ಒಂದು ಮಾದರಿಯಲ್ಲಿ ಎರೋಮೊನಾಸ್ ಸೋರ್ಬಿಯಾ ಎಂಬ ಸೂಕ್ಷ್ಮಾಣು ಕಂಡು ಬಂದಿದೆ. ಆದ್ದರಿಂದ ಈ ಜಾಕ್‌ವೆಲ್‌ನಿಂದ ಪೂರೈಕೆಯಾಗುವ ನೀರನ್ನು ಮತ್ತೊಮ್ಮೆ ಕ್ಲೋರಿನೇಷನ್ ಮಾಡಿಸಿ, ಪರೀಕ್ಷೆಗೆ ಒಳಪಡಿಸಿ ಕುಡಿಯಲು ಪೂರೈಕೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Also Read: ಚಿತ್ರದುರ್ಗ: ಕಲುಷಿತ ನೀರಿನ ಆತಂಕ, ಕವಾಡಿಗರಹಟ್ಟಿ ಗ್ರಾಮ ಖಾಲಿ ಖಾಲಿ

ಚಿತ್ರದುರ್ಗ‌ ನಗರಕ್ಕೆ ಶೇ. 80 ರಷ್ಟು ಪ್ರದೇಶಕ್ಕೆ ಸೂಳೆಕೆರೆ ನೀರು ಪೂರೈಕೆ ಆಗುತ್ತಿದೆ.‌ ಮೇಲಾಗಿ‌ ಇತ್ತಿಚಿಗೆ ಸೂಳೆಕೆರೆ ನೀರು‌ ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿದೆ. ಇದೇ ಕಾರಣಕ್ಕೆ ಪ್ರಯೋಗಾಲಯಕ್ಕೆ‌ ಇಲ್ಲಿನ ನೀರಿನ ಮಾದರಿ ಕಳುಸಲಾಗಿದ್ದು‌ ಕಾವಾಡಿಗರಹಟ್ಟಿ ಕಾಲರಾಗೂ ಸೂಳೆಕೆರೆ ನೀರಿಗೂ ಸಂಬಂಧವಿಲ್ಲ ಎಂಬುದು ಪ್ರಯೋಗಾಲಯದ ವರದಿಗಳಿಂದ ಇದೀಗ ಸ್ಪಷ್ಟವಾಗಿದೆ.

ದಾವಣಗೆರೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ