ಹಿಂದೂಗಳಲ್ಲ, ಮುಸ್ಲಿಮರೇ ಬೋಗಸ್ ವೋಟು ಹಾಕ್ತಾರೆ: ಯತ್ನಾಳ್ ಗಂಭೀರ ಆರೋಪ
ಬೋಗಸ್ ಮತದಾನ ವಿಚಾರವಾಗಿ ದಾವಣೆಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದೂಗಳು ಯಾರೂ ಕಾನೂನು ಮೀರುವುದಿಲ್ಲ, ಬೋಗಸ್ ಮತದಾನ ಮಾಡುವವರು ಮುಸ್ಲಿಮರೇ ಜಾಸ್ತಿ ಎಂದಿದ್ದಾರೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕೂಡ ಅವರು ವಾಗ್ದಾಳಿ ಮಾಡಿದ್ದಾರೆ.

ಮುಖ್ಯಾಂಶಗಳು
- ಹಿಂದೂಗಳು ಬೊಗಸ್ ವೋಟು ಹಾಕುವುದಿಲ್ಲ, ಮುಸ್ಲಿಮರು ಹಾಕುತ್ತಾರೆ
- ದಾವಣಗೆರೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ
- ರಾಜ್ಯ ಬಿಜೆಪಿ ಸ್ಥಿತಿ ಹೇಗಿದೆ ಅಂದ್ರೆ ಹೊಂದಾಣಿಕೆ ರಾಜಕೀಯ
ದಾವಣಗೆರೆ, ಅಕ್ಟೋಬರ್ 04: ‘ಮುಸ್ಲಿಮರೇ ಬೋಗಸ್ ವೋಟು ಹಾಕುವುದು ಜಾಸ್ತಿ, ಹಿಂದೂಗಳಿಗೆ ಆ ಧೈರ್ಯವಿಲ್ಲ ಮತ್ತು ಕಾನೂನು ಮೀರುವುದಿಲ್ಲ. ಬುರ್ಖಾ ಹಾಕೊಂಡು ಒಂದೇ ಹೆಸರಲ್ಲಿ 10 ಜನರ ವೋಟ್ ಇದೆ. ಬೋಗಸ್ ವೋಟಿಂಗ್ ಮಾಡುವ ಮೂಲಕ ಈ ದೇಶವನ್ನು ಪಾಕಿಸ್ತಾನ ಮಾಡಬೇಕು ಎನ್ನುವ ಷಡ್ಯಂತರ ಮಾಡಲಾಗುತ್ತಿದೆ’ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
2047ಕ್ಕೆ ಭಾರತವನ್ನ ಇಸ್ಲಾಂ ಮಾಡಲು ಹೊರಟ್ಟಿದ್ದಾರೆ ಎಂದ ಯತ್ನಾಳ್
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ‘ಮತದಾನ ಮಾಡುವಾಗ ಚುನಾವಣಾ ನಿಯಮದ ಅನ್ವಯ ಮುಖ ಕಾಣಬೇಕು. ಆದರೆ ಅವರು ಬುರ್ಖಾ ಹಾಕೊಂಡರೆ ಯಾರು ಅಂತ ಗೊತ್ತಾಗುವುದಿಲ್ಲ’ ಎಂದರು.
ಇದನ್ನೂ ಓದಿ: ನಾವು ಮೃತಪಟ್ಟಿಲ್ಲ, ಜೀವಂತವಾಗಿದ್ದೇವೆ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ್ದ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹ
ಇನ್ನು ‘2047ಕ್ಕೆ ಭಾರತವನ್ನ ಇಸ್ಲಾಂ ಮಾಡಬೇಕು ಅಂತ ಅವರು ಹೊರಟಿದ್ದಾರೆ. ಕಾಂಗ್ರೆಸ್ ಕೂಡ ಅವರಿಗೆ ಬೆಂಬಲ ನೀಡುತ್ತಿದೆ’ ಎಂದು ವಾಗ್ದಾಳಿ ಮಾಡಿದರು. ‘ನಾವು ಬೋಗಸ್ ವೋಟು ಹಾಕಿದ್ದರೆ ತನಿಖೆ ಮಾಡಲಿ. ಬಿಜೆಪಿಯ ಯಾವ ನಾಯಕರು ಹಿಂದೂಗಳ ಪರ ಗಟ್ಟಿಯಾಗಿ ನಿಲ್ಲುತ್ತಾರೆ’ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯನವರಿಗೆ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಬಿಟ್ಟು ಹೊರಬರಬೇಕು: ಯತ್ನಾಳ್
ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿದ ಅವರು, ‘ಇಷ್ಟು ದಿನ ಮಜಾ ಮಾಡಿ ಈಗ ಸಾಕಷ್ಟು ನೋವು ಆಗಿದೆ ಎಂದು ಹೇಳುತ್ತಿದ್ದಾರೆ. ಮಜಾ ಮಾಡುವಾಗ ಇದು ಅವರಿಗೆ ಅನ್ನಿಸಲಿಲ್ವಾ? ಸಿದ್ಧರಾಮಯ್ಯ ಬಹುದೊಡ್ಡ ಸಮಾಜದಿಂದ ಬಂದು ಮಹಾನ್ ವ್ಯಕ್ತಿ ಆದವರು. ಅವರ ಅರ್ಥಿಕ ನೀತಿ ಸಾಕಷ್ಟು ಉತ್ತವಾವಿತ್ತು, ನಾವು ನೋಡಿದ್ದೇವೆ. ಆದರೆ ಅಂತಹ ಸಿದ್ದರಾಮಯ್ಯರ ಮೂರ್ತಿಯನ್ನು ತಿಪ್ಪೆಗೆ ಹಾಕಿದ್ದಾರೆ ಈ ಕಾಂಗ್ರೆಸ್. ಸಿದ್ದರಾಮಯ್ಯನವರಿಗೆ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಬಿಟ್ಟು ಹೊರಬರಬೇಕು’ ಎಂದಿದ್ದಾರೆ.
ತಮಿಳುನಾಡಿನ ಟಿವಿಕೆಯಂತೆ ಯತ್ನಾಳ್ ಪಕ್ಷ ಕೂಡ ಹೊರ ಹೊಮ್ಮುತ್ತದೆ
‘ರಾಜ್ಯ ಬಿಜೆಪಿ ಸ್ಥಿತಿ ಹೇಗಿದೆ ಅಂದರೆ ಇವರದ್ದು ಹೊಂದಾಣಿಕೆ ರಾಜಕೀಯ. ದಾವಣಗೆರೆಯಲ್ಲಿ ಒಂದು ಗಿಳಿ ಇದೆ, ಆ ಗಿಳಿಯ ಕುತ್ತಿಗೆ ಹಿಡಿದರೆ ಬೆಂಗಳೂರಿನ ಬಾಗಿಲು ಓಪನ್ ಆಗುತ್ತದೆ. ಬಿಜೆಪಿಯಲ್ಲಿ ಈಗ ಯಾರು ಮತಗಳನ್ನ ಸೆಳೆಯುವ ನಾಯಕರಿದ್ದಾರೆ. ಬಿಜೆಪಿಯ ವರಿಷ್ಠರು ಇನ್ನೂ 1980ರಲ್ಲಿ ಇದ್ದಾರೆ. ತಮಿಳುನಾಡಿನ ವಿಜಯ್ ರೀತಿಯಲ್ಲಿ ನನ್ನದೂ ಚಮತ್ಕಾರ ಆಗಲಿದೆ. ಈಗಾಗಲೇ ನಾನು ಪ್ರಚಾರ ಆರಂಭಿಸಿದ್ದೇನೆ. ಚುನಾವಣೆ ಬಳಿಕ ನನ್ನ ಶಕ್ತಿ ರಾಜ್ಯದ ಜನರಿಗೆ ಗೊತ್ತಾಗಲಿದೆ’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




