Deadly Insect Bite: ಇದು ಯಾವುದು ವಿಷಕಾರಿ ಹುಳು? ದಾವಣಗೆರೆ ಮಂದಿಯನ್ನು ಕೊರೊನಾಗಿಂತ ಕಟುವಾಗಿ ಕಾಡುತ್ತಿದೆ!
ಈ ಹುಳು ಕಡಿದರೆ ಉರಿ, ಮೈ ಬಾತುಕೊಳ್ಳುವುದು, ವಿಪರೀತ ಜ್ವರ ಬರುವುದು ಸಾಮಾನ್ಯ. ಆದ್ರೆ ಎಳರಿಂದ ಎಂಟು ಕಾಡು ಜೀರಿಗೆ ಹುಳುಗಳು ಕಡಿದರೇ ಸಾವು ಖಚಿತವಂತೆ. ಯಾವುದೇ ರೀತಿಯ ಚಿಕಿತ್ಸೆ ನೀಡಿದರೂ ಬದುಕಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಬಳಿಯೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಂತೆ. ಅರಣ್ಯ ಹಾಗೂ ಕಂದಾಯ ಇಲಾಖೆ ಇದರ ಬಗ್ಗೆ ಜನ ಜಾಗೃತಿ ಮಾಡಬೇಕಿದೆ.
ಆ ಪ್ರದೇಶದ ಜನ ಜಮೀನು, ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಅವರನ್ನು ಅತೀವ ಭಯ ಆವರಿಸಿದೆ. ಕಳೆದ ಎರಡು ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿರುವುದು, ಇನ್ನಷ್ಟು ಭಯ ಪಡುವಂತಾಗಿದೆ. ಇದಕ್ಕೆ ಕಾರಣ ಆ ಒಂದು ಹುಳು. ಇದು ಅತ್ಯಂತ ವಿಷ ಕಾರಿ ಹುಳು (Insect Bite). ಕೊರೊನಾ ಎಂಬ ವೈರಸ್ ಬಂದು ಇಡಿ ಜಗತ್ತನ್ನೇ ನಡುಗಿಸಿತ್ತು. ಅದೇ ರೀತಿ ಈ ಹುಳು ಸಹ ರೈತಾಪಿ ಜನರ ನಿದ್ದೆಗೆಡಿಸಿದೆ. ಇಷ್ಟಕ್ಕೂ ಇದು ಯಾವ ಹುಳು? ಇದರಿಂದ ಎನು ಭಯ? ಇಲ್ಲಿದೆ ನೋಡಿ. ಇದು ಕಡಿದರೆ ಸಾಕು ಸಾವು (Death) ಖಚಿತ.. ಇದು ಕಾಡು ಜೀರಿಗೆ ಕಾಟದ ಸ್ಟೋರಿ (Kadu Jeerige Bite).
ಸ್ವಲ್ಪ ಈ ಭಾರೀ ಗಾತ್ರದ ಮಾವಿನ ಮರದ ಮೇಲೆ ನೋಡಿ. ದೂರದಿಂದ ನೋಡಿದರೂ ಅದು ಗುಬ್ಬಿಗೂಡು ಇರಬೇಕು ಅನಿಸುತ್ತದೆ. ಆದ್ರೆ ಸ್ವಲ್ಪ ತೀಕ್ಷಣವಾಗಿ ಗಮನಿಸಿದ್ರೆ ಒಂದು ರೀತಿಯಲ್ಲಿ ತಾಡಪಲ್ ನಲ್ಲಿ ಮಾಡಿದ ಚೀಲವನ್ನ ನೇತು ಹಾಕಿದ್ದಾರೆ ಎಂಬ ಭಾವ ಬರುತ್ತದೆ. ಅಸಲಿಗೆ ಅದು ಯಾವುದೂ ಅಲ್ಲ ಅದು. ಅದೊಂದು ಕಾಡು ಜೀರಿಗೆ ಹೆಜ್ಜೇನು ಅಥವಾ ಕಾಡು ಜೇನು ಎಂದು ಕರೆಯುವ ಹುಳುವಿನ ವಾಸ ಸ್ಥಳ.
ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಬಳಿಕ ಹರೋ ಸಾಗರದ ರಸ್ತೆಯಲ್ಲಿ ಕಂಡು ಬರುತ್ತಿರುವ ದೃಶ್ಯ ಮೇಲಿನ ಚಿತ್ರದಲ್ಲಿದೆ. ಹರೋಸಾಗರದ ಹಾಲಸ್ವಾಮಿ ಎಂಬಾತ ಮೊನ್ನೆ ಬೈಕ್ ನಲ್ಲಿ ಹೋಗುತ್ತಿರುವಾಗ ಇದೇ ಹುಳು ಕಡಿದು ಬಿಟ್ಟಿದೆ. ವಿಪರೀತ ಉರಿ. ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕವೂ ಕಣ್ಣಿನ ಕೆಳಭಾಗದಲ್ಲಿ ಕಪ್ಪುಗಟ್ಟಿದೆ.
ಮತ್ತೊಂದು ಪ್ರಸಂಗದಲ್ಲಿ ಅದೇ ಹುಳು ಕಡಿದು ಪಕ್ಕದ ಯಲೋದಹಳ್ಳಿ ಗ್ರಾಮದ ಶಿವಕುಮಾರ 54 ವರ್ಷದ ವ್ಯಕ್ತಿ ಹಾಗೂ ಕಂಸಾಗರದ ಮಲ್ಲೇಶ್ ಎಂಬ 24 ವರ್ಷದ ಯುವಕ ಕಳೆದ ಎರಡು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಶಿವಕುಮಾರ ವಿಂಡ್ ಫ್ಯಾನ್ ಕಂಪನಿ ಉದ್ಯೋಗಿ. ರಸ್ತೆಯಲ್ಲಿ ಹೋಗುವಾಗ ಕಾಡು ಜೀರಿಗೆ ಹುಳುಗಳು ದಾಳಿ ಮಾಡಿದ ಹಿನ್ನೆಲೆ ಈ ಇಬ್ಬರು ಸಾವನ್ನಪ್ಪಿದ್ದಾರೆ. ಯಲೋದಹಳ್ಳಿ, ದಾಗಿನಕಟ್ಟೆ, ಬಸವಾಪಟ್ಟ, ಕಂಸಾಗರ, ಸಂಗಾಹಳ್ಳಿ, ಬೆಳಲಗೆರೆ ಹೇಗೆ ಹತ್ತು ಗ್ರಾಮಗಳಲ್ಲಿ ಕಾಡು ಜೀರಿಗೆ ಕಾಟ ಹೆಚ್ಚಾಗಿದೆ.
ಇದು ಹೆಚ್ಚಾಗಿ ಅರಣ್ಯದಲ್ಲಿ ಇರುವ ಹುಳು. ಇತ್ತೀಚಿಗೆ ಅಡಿಕೆ ತೋಟ, ಗ್ರಾಮಗಳ ಸುತ್ತಲಿನ ದೊಡ್ಡ ಮರಗಳ ಬಳಿ ಬಂದು ಆಶ್ರಯ ಪಡೆದುಕೊಂಡಿವೆ. ಇದನ್ನ ನೋಡಿದ್ರೆ ಸಾಕು ಜನ ತಲೆ ಮೇಲೆ ಟವಲ್ ಹಾಕಿಕೊಂಡು ಭಯದಿಂದ ಹೋಗುತ್ತಾರೆ. ಈ ಹಿಂದೆ ಇದರ ಬಗ್ಗೆ ಜನರಿಗೆ ಗೊತ್ತಿತ್ತು. ಆದ್ರೆ ಇದು ಕಡಿದರೇ ಸಾವನ್ನಪ್ಪುತ್ತಾರೆ ಎಂಬುದು ಮಾತ್ರ ಬಹುತೇಕರಿಗೆ ಗೊತ್ತಿಲ್ಲ.
ಈ ಹುಳುವಿನ ಇನ್ನೊಂದು ವಿಶೇಷ ಅಂದ್ರೆ ಒಂದು ಹುಳು ಕಡಿದರೂ ಉರಿ, ಮೈ ಬಾತುಕೊಳ್ಳುವುದು, ವಿಪರೀತ ಜ್ವರ ಬರುವುದು ಸಾಮಾನ್ಯ. ಆದ್ರೆ ಎಳರಿಂದ ಎಂಟು ಕಾಡು ಜೀರಿಗೆ ಹುಳುಗಳು ಕಡಿದರೆ ಸಾವು ಖಚಿತವಂತೆ. ಯಾವುದೇ ರೀತಿಯ ಚಿಕಿತ್ಸೆ ನೀಡಿದರೂ ಬದುಕಲು ಸಾಧ್ಯವಿಲ್ಲ, ಅಂತಹ ವಿಷಕಾರಿ ಹುಳು ಇದಾಗಿದೆ.
ಕಾಡು ಜೀರಿಗೆ ಹೆಜ್ಜೇನು ಅಥವಾ ಕಾಡುಜೇನು ಎಂಬ ಹೆಸರುಗಳಿಂದ ಗ್ರಾಮೀಣ ಪ್ರದೇಶದ ಜನ ಕರೆಯುತ್ತಾರೆ. ಅರಣ್ಯ ಇಲಾಖೆ ಬಳಿಯೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಂತೆ. ಆದ್ರೆ ಹಳ್ಳಿಯ ಜನರಿಗೆ ಮಾತ್ರ ಭೀತಿ ಹುಟ್ಟಿಸಿದೆ. ಮೇಲಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಜಮೀನು ಹಾಗೂ ತೋಟಗಳಿಗೆ ಹೋಗುವುದು ಕಷ್ಟವಾಗಿದೆ.
ಕೆಲ ಕಡೆ ವಿದ್ಯುತ್ ಕಂಬಕ್ಕೂ ಇಂತಹ ಗೂಡುಗಳು ನೇತುಹಾಕಿಕೊಂಡಿವೆ. ಆದರೆ ಜನ ಅವುಗಳನ್ನ ಸುಟ್ಟು ಹಾಕಿದ್ದಾರೆ ಅನ್ನೀ. ಮೇಲಾಗಿ ಇದು ರಾತ್ರಿ ವೇಳೆ ಹೆಚ್ಚು ಜಾಗರೂಕವಾಗಿರುತ್ತದಂತೆ ಎಂಬ ಮಾತುಗಳೂ ತೇಲಿ ಬರುತ್ತಿವೆ. ಅರಣ್ಯದಲ್ಲಿ ಇರುವ ಈ ಹುಳು, ಕಾಡು ಪ್ರಾಣಿಗಳಂತೆ ನಾಡಿನ ಕಡೆ ಲಗ್ಗೆ ಇಟ್ಟಿರುವುದು ನಿಜಕ್ಕೂ ಆತಂಕದ ವಿಚಾರ. ಇದರ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆ ಜನ ಜಾಗೃತಿ ಮಾಡಬೇಕಿದೆ.
ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ