ದಾವಣಗೆರೆ: ಡಿವೈಡರ್‌ಗೆ ಬೈಕ್ ಡಿಕ್ಕಿ, ಸವಾರನ ಕಾಲು ಕಟ್‌

ಅಪಘಾತಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಳವಾಗುತ್ತಿದೆ. ಅದರಂತೆ ದಾವಣಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್​ವೊಂದು ಡಿವೈಡರ್​ಗೆ ಡಿಕ್ಕಿಯಾಗಿ ಸವಾರನ ಕಾಲು ಕಟ್​ ಆಗಿದೆ. ಇತ್ತ ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಎರಡು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ದಾವಣಗೆರೆ: ಡಿವೈಡರ್‌ಗೆ ಬೈಕ್ ಡಿಕ್ಕಿ, ಸವಾರನ ಕಾಲು ಕಟ್‌
ದಾವಣಗೆರೆ: ಡಿವೈಡರ್‌ಗೆ ಬೈಕ್ ಡಿಕ್ಕಿ, ಸವಾರನ ಕಾಲು ಕಟ್‌
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 24, 2024 | 5:58 PM

ದಾವಣಗೆರೆ, ಮೇ.24: ತಾಲೂಕಿನ ಆನಗೋಡು(Anagodu) ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್​ವೊಂದು ಡಿವೈಡರ್​ಗೆ ಡಿಕ್ಕಿಯಾಗಿದ್ದು, ಸವಾರನ ಕಾಲು ಕಟ್​ ಆಗಿದೆ. ಈ ಹಿನ್ನಲೆ ರಸ್ತೆಯಲ್ಲಿ ಬಿದ್ದು ಬೈಕ್​(Bike) ಸವಾರ ದಾವಣಗೆರೆಯ ಕೊಲ್ಕುಂಟೆ ನಿವಾಸಿ ಬಸವರಾಜ್ ನರಳಾಡಿದ್ದಾನೆ. ಕೂಡಲೇ ಗಾಯಾಳು ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎರಡು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಓರ್ವ ಮಹಿಳೆ ಸಾವು

ತುಮಕೂರು: ಮಧುಗಿರಿ ತಾಲೂಕಿನ ಪುರವರ ಗ್ರಾಮದ ಹೊರವಲಯದ ಜಯಮಂಗಲಿ ನದಿ ಸೇತುವೆ ಬಳಿಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಹನುಮಕ್ಕ(45) ಸಾವನ್ನಪ್ಪಿದ ವ್ಯಕ್ತಿ. ಹನುಮಂತ ರೆಡ್ಡಿ, ಗಂಗಾಧರಪ್ಪ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳು ಹಾಗೂ ಮೃತ ಮಹಿಳೆಯನ್ನು ಮಧುಗಿರಿ ಸಾರ್ವಜನಿಕರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಮನೆಗೆ ಹೋಗುವಾಗ ಭೀಕರ ಅಪಘಾತ: ಮೂವರು ಸಾವು

ಬಸ್ ಹತ್ತುವ ವೇಳೆ ಆಯುತಪ್ಪಿ ಬಿದ್ದ ಮಹಿಳೆ ಕಾಲಿನ ಮೇಲೆ ಹರಿದ ಬಸ್ ಚಕ್ರ

ವಿಜಯಪುರ, ಮೇ.24: ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಆಯುತಪ್ಪಿ ಬಿದ್ದ ಮಹಿಳೆ ಕಾಲಿನ ಮೇಲೆ ಬಸ್ ಚಕ್ರ ಹರಿದ ಘಟನೆ ನಡೆದಿದೆ. ಇಂಡಿ ತಾಲೂಕಿನ ಸಾಲುಟಗಿ ಗ್ರಾಮದ ಸಾವಿತ್ರಿಬಾಯಿ ಬಿರಾದಾರ ಎಂಬುವವರ ಕಾಲಿಗೆ ತೀವ್ರ ಗಾಯವಾಗಿದ್ದು, ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದು ಈ ಅವಘಡ ಸಂಭವಿಸಿದೆ. ಈ ಕುರಿತು ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Fri, 24 May 24

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು