ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆ ಸ್ಪರ್ಧಿಗಳಿಂದ ಪಾಲಿಕೆ ಆಯುಕ್ತವರೆಗೂ ಮಹಿಳೆಯರದ್ದೇ ಪ್ರಾಬಲ್ಯ

ರಾಜ್ಯದಲ್ಲಿ 5,42,08,088 ಮತದಾರರಿದ್ದಾರೆ. ಇವರಲ್ಲಿ 2,71,21,407 ಪುರುಷರು, 2,70,81,750 ಮಹಿಳಾ ಮತದಾರರಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 17ರಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದಾರೆ. ಇದರಲ್ಲಿ ದಾವಣಗೆರೆ ಕೂಡ ಒಂದು.

ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆ ಸ್ಪರ್ಧಿಗಳಿಂದ ಪಾಲಿಕೆ ಆಯುಕ್ತವರೆಗೂ ಮಹಿಳೆಯರದ್ದೇ ಪ್ರಾಬಲ್ಯ
ಮಹಿಳೆಯರಿಂದ ಮತದಾನ ಜಾಗೃತಿ
Follow us
| Updated By: ವಿವೇಕ ಬಿರಾದಾರ

Updated on: Apr 08, 2024 | 8:18 AM

ದಾವಣಗೆರೆ, ಏಪ್ರಿಲ್​ 08: ದೇಶದ 12 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಶೇಷವೆಂದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 17ರಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ. ಕಳೆದ ಐದು ವರ್ಷದಲ್ಲಿ ಮಹಿಳೆಯರ ಸಂಖ್ಯೆ ಶೇಕಡಾ 7ರಷ್ಟು ಜಾಸ್ತಿಯಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ(Davangere Lok Sabha Constituency)  ಸ್ಪರ್ಧಾಳುಗಳು ಕೂಡ ಮಹಿಳೆಯರೆ. ಮತ್ತು ಹೆಚ್ಚಿನ ಮತದಾರರು ಮಹಿಳೆಯರೆ (Women) ಇದ್ದಾರೆ. ಎಸ್​ಪಿ, ಎಡಿಸಿ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳು ಹೆಚ್ಚಾಗಿದ್ದಾರೆ.

ರಾಜ್ಯದಲ್ಲಿ 5,42,08,088 ಮತದಾರರಿದ್ದಾರೆ. ಇವರಲ್ಲಿ 2,71,21,407 ಪುರುಷರು, 2,70,81,750 ಮಹಿಳಾ ಮತದಾರರಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 17ರಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದಾರೆ. ಇದರಲ್ಲಿ ದಾವಣಗೆರೆ ಕೂಡ ಒಂದು. ಹೀಗಾಗಿ ರಾಜಕಾರಣಿಗಳು ಮಹಿಳಾ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರ ಈ ಬಾರಿ ವಿಶೇಷಕ್ಕೆ ಸಾಕ್ಷಿಯಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಯಾರೇ ಗೆದ್ದರು ಸಂಸತ್ತಿಗೆ ಮಹಿಳೆಯರೆ ಹೋಗುತ್ತಾರೆ.

ಕಾಂಗ್ರೆಸ್ಸಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ. ಇತ್ತ ಬಿಜೆಪಿಯಿಂದ ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಲೋಕಸಭಾ ಕಣದಲ್ಲಿ ಇದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹೊನ್ನಾಳಿ, ಚನ್ನಗಿರಿ ಮಾಯಕೊಂಡ, ಜಗಳೂರು ಹರಿಹರ ಹಾಗೂ ಹರಪನಹಳ್ಳಿ 8 ವಿಧಾನಸಭಾ ಕ್ಷೇತ್ರದಲ್ಲಿ 16,79,746 ಮತದಾರರಿದ್ದಾರೆ. ಇವರಲ್ಲಿ 8,40,340 ಮಹಿಳೆಯರು, 8,38,70 ಪುರುಷ ಮತದಾರರಿದ್ದಾರೆ. ಇದರಿಂದ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ ಅಂತ ಗೊತ್ತಾಗುತ್ತೆ.

ಇದನ್ನೂ ಓದಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು

ಇನ್ನೊಂದು ವಿಶೇಷ ಅಂದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ಕ್ಷೇತ್ರ ಶಾಸಕ ಲತಾ ಮಲ್ಲಿಕಾರ್ಜುನ. ದಾವಣಗೆರೆ ಜಿಲ್ಲಾ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ, ದಾವಣಗೆರೆ ಎಸ್ಪಿ ಉಮಾ ಪ್ರಶಾಂತ, ಎಡಿಸಿ ಮಹಿಳೆ, ಮಹಾನಗರ ಪಾಲಿಕೆ ಆಯುಕ್ತ ರೇಣಾಕಾ, ಉಪವಿಭಾಗಾಧಿಕಾರಿ ದುರ್ಗಶ್ರೀ. ಮಹಿಳಾ ಮತ್ತು ಮಕ್ಕಳ ಕಲ್ಯಾ ಇಲಾಖೆ ಜೆಡಿ ಮಹಿಳೆ ಹೀಗೆ ದಾವಣಗೆರೆ ಜಿಲ್ಲೆಯಲ್ಲಿ ಮಹಿಳಾ ಪಡೆಯೇ ಮನೆ ಮಾಡಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರ ಸಂಖ್ಯೆ ಹೆಚ್ಚಿದ್ದರು ಸಹ ಮದುವೆ ಆಗಲು ಕನ್ಯಾ ಸಿಗುತ್ತಿಲ್ಲ. ಇದಕ್ಕೆ ಕಾರಣ ಜಾತಿ ವ್ಯವಸ್ಥೆ. ದೇಶದಲ್ಲಿನ ದಾಖಲೆಗಳ ಪ್ರಕಾರ ಸಂವಿಧಾನ ಜಾರಿಗೆ ಬಂದಾಗಿನಿಂದ ಕೇವಲ ಶೇ9ರಷ್ಟು ಮಾತ್ರ ಅಂತರ್ಜಾತಿ ವಿವಾಹಗಳಾಗಿವೆ. ಮಹಿಳೆಯರ ಸಂಖ್ಯೆ ಹೆಚ್ಚಾದಂತೆ ಹೆಚ್ಚು ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯಕ್ಕಂತು ದಾವಣಗೆರೆಯಲ್ಲಿ ಮಹಿಳಾ ದರ್ಬಾರ ಜೋರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ